Download Our App

Follow us

Home » ಕ್ರೀಡೆ » ಮೂರನೇ ಬಾರಿಗೆ ಐಪಿಎಲ್ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡ ಕೆಕೆಆರ್‌..!

ಮೂರನೇ ಬಾರಿಗೆ ಐಪಿಎಲ್ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡ ಕೆಕೆಆರ್‌..!

ಚೆನ್ನೈ : 2024ರ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ (IPL) ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡವು ಸನ್‌ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಅದ್ಧೂರಿ ಜಯ ಸಾಧಿಸುವ ಮೂಲಕ 17ನೇ ಆವೃತ್ತಿಯ ಚಾಂಪಿಯನ್‌ ಆಗಿ ಐಪಿಎಲ್ ಕಿರೀಟವನ್ನು ಮೂಡಿಗೇರಿಸಿಕೊಂಡಿದೆ.

ಈ ಪಂದ್ಯವನ್ನು ಭರ್ಜರಿಯಾಗಿ ಗೆಲ್ಲುವ ಮೂಲಕ ಕೋಲ್ಕತ್ತಾ ನೈಟ್‌‌ರೈಡರ್ಸ್‌‌ 3ನೇ ಬಾರಿಗೆ ಐಪಿಎಲ್‌ ಟ್ರೋಫಿಗೆ ಮುತ್ತಿಕ್ಕಿದೆ. ಇನ್ನೂ 3ನೇ ಬಾರಿಗೆ ಫೈನಲ್‌ ಪ್ರವೇಶಿಸಿದ್ದ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡವು 2ನೇ ಬಾರಿಗೆ ರನ್ನರ್‌ ಅಪ್‌ ಪ್ರಶಸ್ತಿಗೆ ತೃಪ್ತಿ ಪಡೆದುಕೊಂಡಿದೆ.

2012 ಮತ್ತು 2014ರಲ್ಲಿ ಗೌತಮ್‌ ಗಂಭೀರ್‌ ನಾಯಕತ್ವದಲ್ಲಿ ಚಾಂಪಿಯನ್‌ ಪಟ್ಟ ಮುಡಿಗೇರಿಸಿಕೊಂಡಿದ್ದ ಕೋಲ್ಕತ್ತಾ ನೈಟ್‌ರೈಡರ್ಸ್‌ ತಂಡ 10 ವರ್ಷಗಳ ಬಳಿಕ ಶ್ರೇಯಸ್‌ ಅಯ್ಯರ್‌ ಅವರ ನಾಯಕತ್ವದಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಅಲ್ಲದೇ ಹಿಂದೆ ತಂಡದ ನಾಯಕನಾಗಿ ಟ್ರೋಫಿ ಗೆದ್ದುಕೊಟ್ಟಿದ್ದ ಗೌತಮ್‌ ಗಂಭೀರ್‌ ಈ ಬಾರಿ ತಂಡದ ಕೋಚ್‌ ಆಗಿ ಟ್ರೋಫಿ ತಂದುಕೊಟ್ಟಿರುವುದು ವಿಶೇಷ.

ಚೆನ್ನೈನ ಚೆಪಾಕ್‌ ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ್ದ ಸನ್‌ ರೈಸರ್ಸ್‌ ಹೈದರಾಬಾದ್‌ 18.3 ಓವರ್‌ಗಳಲ್ಲಿ 113 ರನ್‌ಗಳಿಗೆ ಪತನ ಕಂಡಿತ್ತು. ಈ ಸುಲಭ ಗುರಿ ಬೆನ್ನಟ್ಟಿದ ಕೆಕೆಆರ್ ತಂಡವು 2 ವಿಕೆಟ್ ನಷ್ಟಕ್ಕೆ ಕೇವಲ 10.3 ಓವರ್‌ಗಳಲ್ಲೇ 114 ರನ್ ಗಳಿಸುವ ಮೂಲಕ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು.

ಪ್ರಶಸ್ತಿಗಳು : 

  • ಚಾಂಪಿಯನ್ ತಂಡ ಕೆಕೆಆರ್​ಗೆ – 25 ಕೋಟಿ
  • ರನ್ನರ್ ​ಅಪ್ ಎಸ್​ಆರ್​ಹೆಚ್​ ತಂಡಕ್ಕೆ – 10 ಕೋಟಿ
  • ಕೋಲ್ಕತ್ತಾದ ಸುನಿಲ್ ನರೇನ್​​ಗೆ ಮ್ಯಾನ್​ ಆಫ್​ದಿ ಸೀರಿಸ್
  • ಕೊಹ್ಲಿಗೆ ಆರೇಂಜ್​ ಕ್ಯಾಪ್​
  • ಹರ್ಷಲ್​​ ಪಟೇಲ್​ಗೆ ಪರ್ಪಲ್​ ಕ್ಯಾಪ್​​

ಇದನ್ನೂ ಓದಿ : ಹಣ ಡಬಲ್ ಮಾಡೋ ಆಮಿಷ : ಕೋಟಿ-ಕೋಟಿ ಕಲೆಕ್ಟ್ ಮಾಡಿ ದಂಪತಿ ಎಸ್ಕೇಪ್..!

 

 

 

 

Leave a Comment

DG Ad

RELATED LATEST NEWS

Top Headlines

ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದಲ್ಲಿ ಡ್ರೆಸ್ ಕೋಡ್ ಜಾರಿ – ದೇವರ ದರ್ಶನಕ್ಕೆ ಸಾಂಪ್ರದಾಯಿಕ ಉಡುಗೆ ಕಡ್ಡಾಯ..!

ಚಿಕ್ಕಮಗಳೂರು : ಇತ್ತೀಚೆಗೆ ಶೃಂಗೇರಿಯ ಶ್ರೀ ಶಾರದಾಂಬೆ ಸನ್ನಿಧಾನದಲ್ಲಿ ಹಾಗೂ ಸುತ್ತಲಿನ ದೇವಸ್ಥಾನಗಳಲ್ಲಿ ಡ್ರೆಸ್ ಕೋಡ್ ಜಾರಿಯಾಗಿತ್ತು. ಇದೀಗ ರಾಜ್ಯದ ಪ್ರಸಿದ್ಧ ಯಾತ್ರಾ ಸ್ಥಳವಾದ ಹೊರನಾಡು ಶ್ರೀ

Live Cricket

Add Your Heading Text Here