Download Our App

Follow us

Home » ಅಪರಾಧ » ಪೆನ್​​​ ಡ್ರೈವ್​​​ ಪ್ರಕರಣ​ – ಪ್ರಜ್ವಲ್​​​​ ರೇವಣ್ಣ ಗನ್​​ಮ್ಯಾನ್​​​, ಕಾರ್​​​ ಡ್ರೈವರ್​​ಗೂ SIT ನೋಟಿಸ್..!

ಪೆನ್​​​ ಡ್ರೈವ್​​​ ಪ್ರಕರಣ​ – ಪ್ರಜ್ವಲ್​​​​ ರೇವಣ್ಣ ಗನ್​​ಮ್ಯಾನ್​​​, ಕಾರ್​​​ ಡ್ರೈವರ್​​ಗೂ SIT ನೋಟಿಸ್..!

ಬೆಂಗಳೂರು : ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋ ಕೇಸ್‌ನಲ್ಲಿ ಸಂತ್ರಸ್ತೆಯನ್ನು ಕಿಡ್ನ್ಯಾಪ್‌ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಜ್ವಲ್‌ ರೇವಣ್ಣ ಗನ್​​ಮ್ಯಾನ್​​​ ಹಾಗೂ ಕಾರ್​​​ ಡ್ರೈವರ್​​ಗೂ SIT ನೋಟಿಸ್ ಜಾರಿ ಮಾಡಿದ್ದು, ಇಬ್ಬರಿಗಾಗಿ SIT ಹುಡುಕಾಟ ನಡೆಸುತ್ತಿದೆ.

ಪ್ರಜ್ವಲ್​​ ಹಾಗೂ ತಾಯಿ ಭವಾನಿ ರೇವಣ್ಣ ಅವರ ಕಾರು ಓಡಿಸುತ್ತಿದ್ದ ಡ್ರೈವರ್​ ಅಜಿತ್​ಗೆ ಎಸ್ಐಟಿ ಪೊಲೀಸರು ಹುಡುಕಾಟ ನಡೆಸುತ್ತಿದ್ದು, ವಿಚಾರಣೆಗೆ ಬರುವಂತೆ ಎರಡು ನೋಟಿಸ್ ಜಾರಿ ಮಾಡಿದೆ. ಆತ ಪತ್ತೆ ಇಲ್ಲದ ಕಾರಣ, ಹೊಳೆನರಸೀಪುರದಲ್ಲಿರುವ ಆತನ ನಿವಾಸಕ್ಕೆ ತೆರಳಿ ನೋಟಿಸ್​ ನೀಡಲಾಗಿದೆ.

ಸಂತ್ರಸ್ತೆ ಕಿಡ್ನಾಪ್​ ಕೇಸ್​ನಲ್ಲಿ ಕಾರ್​​​ ಡ್ರೈವರ್ ಅಜಿತ್​ ಪಾತ್ರವಿರೋ ಆರೋಪ ಕೇಳಿ ಬಂದಿದ್ದು, ಇದೀಗ ಅಜಿತ್​ಗಾಗಿ ಹಾಸನ, ಮಂಡ್ಯ, ಮೈಸೂರಿನಲ್ಲಿ SIT ಶೋಧ ನಡೆಸುತ್ತಿದೆ. ರೇವಣ್ಣ ಅರೆಸ್ಟ್ ನಂತರ ಅಜಿತ್​ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ. ಕಿಡ್ನ್ಯಾಪ್‌ ಪ್ರಕರಣ ದಾಖಲಾದ ಬಳಿಕ ಕಾರು ಚಾಲಕ ಅಜಿತ್ ತಲೆಮರೆಸಿಕೊಂಡಿದ್ದಾನೆ. ಕಾರಣ, ಸಂತ್ರಸ್ತೆಯನ್ನು ಈತನೇ ಕಾರಿನಲ್ಲಿ ಕರೆದೊಯ್ದಿದ್ದ ಎಂಬ ಆರೋಪ ಕೂಡ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಅಜಿತ್‌ಗೆ ನೋಟಿಸ್​ ಜಾರಿ ಮಾಡಲಾಗಿದೆ.

ಇನ್ನು, ಪ್ರಜ್ವಲ್ ರೇವಣ್ಣ ಏಪ್ರಿಲ್27 ರಂದು ಜರ್ಮನಿಗೆ ತೆರಳುವಾಗ ಕೂಡ ಅಜಿತ್​ ಕಾರು ಚಾಲಕನಾಗಿದ್ದ ಎಂದು ತಿಳಿದುಬಂದಿದೆ. ಮತ್ತೊಂದೆಡೆ ಭವಾನಿ ರೇವಣ್ಣಗೆ SIT 3ನೇ ನೋಟಿಸ್ ಕೊಟ್ಟಿದೆ. ಈಗಾಗಲೇ ಎರಡು ಬಾರಿ ಭವಾನಿ ರೇವಣ್ಣಗೆ ನೋಟಿಸ್ ನೀಡಿರುವ SIT, 3ನೇ ಬಾರಿ ನೋಟಿಸ್​ ನೀಡಿ ವಿಚಾರಣೆಗೆ ಹಾಜರಾಗುವಂತೆ ಹೇಳಿದೆ.

ಇದನ್ನೂ ಓದಿ : ಬಿಜೆಪಿ ಶಾಸಕ ಹರೀಶ್​ ಪೂಂಜಾ ಠಾಣೆಗೆ ಹಾಜರ್ – ವಿಚಾರಣೆ ಬಳಿಕ ಸ್ಟೇಷನ್​ ಬೇಲ್​ ಮೇಲೆ ರಿಲೀಸ್..!

Leave a Comment

DG Ad

RELATED LATEST NEWS

Top Headlines

ಬಿಎಂಟಿಸಿ ಬಸ್‌ನಲ್ಲಿ ಕುಳಿತ್ತಿದ್ದ ಕಂಡಕ್ಟರ್‌ ತಲೆಗೆ ಕಲ್ಲಿಂದ ಹೊಡೆದ ಪ್ರಯಾಣಿಕ..!

ಬೆಂಗಳೂರು : ಬಿಎಂಟಿಸಿ ಕಂಡಕ್ಟರ್, ಡ್ರೈವರ್​​ಗಳ ಮೇಲೆ ಪದೇ-ಪದೇ ಹಲ್ಲೆ ಆಗ್ತಲೇ ಇವೆ. ಕಳೆದ ತಿಂಗಳು ಬೆಂಗಳೂರಿನ ವೈಟ್​ಫೀಲ್ಡ್​ನಲ್ಲಿ ಬಿಎಂಟಿಸಿ ವೋಲ್ವೋ ಬಸ್ ಪ್ರಯಾಣಿಕನೊಬ್ಬ ಕಂಡಕ್ಟರ್​​ಗೆ ಚಾಕುವಿನಿಂದ

Live Cricket

Add Your Heading Text Here