ಬೆಂಗಳೂರು : ಮನುಷ್ಯರಿಗೆ ಪಶು ಔಷಧಿ ಸರಬರಾಜು ಮಾಡಿದ್ದ ಕಂಪನಿಯ ಕರ್ಮಕಾಂಡವನ್ನ ಬಿಟಿವಿ ಬಯಲು ಮಾಡಿತ್ತು. ಬಿಟಿವಿ ವರದಿಯ ಬಿಗ್ ಇಂಪ್ಯಾಕ್ಟ್ಯಿಂದ ಪುಷ್ಕರ್ ಫಾರ್ಮಾ ಔಷಧಿ ವಾಪಸ್ಗೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಬಿಟಿವಿ ಇಡೀ ದಿನ ಪುಷ್ಕರ್ ಫಾರ್ಮಾ ಔಷಧಿ ಅಕ್ರಮ ಬಯಲು ಮಾಡಿತ್ತು. ಪಶು ವೈದ್ಯಕೀಯ ಔಷಧಿಯನ್ನು ಸಂಸ್ಥೆ ಪೂರೈಕೆ ಮಾಡಿದ್ದು, ಇದೀಗ ಔಷಧಿ ವಾಪಸ್ ಪಡೆಯುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಈ ಔಷಧಿ ಪುಷ್ಕರ್ ಫಾರ್ಮ್ ಸಂಸ್ಥೆಯಿಂದ ಸರಬರಾಜಾಗಿತ್ತು, ಪ್ರಕರಣ ಗಂಭೀರ ಆಗದಂತೆ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡು, ಔಷಧಿ ವಾಪಸ್ ಪಡೆದು ಹೊಸ ಔಷಧಿ ಪೂರೈಸುವಂತೆ ಸೂಚನೆ ನೀಡಿದೆ.
ಪುಪ್ಕರ್ ಫಾರ್ಮ ಸಂಸ್ಥೆಗೆ ಆರೋಗ್ಯ ಇಲಾಖೆ ಸೂಚನೆ ನೀಡಿದ್ದು, ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಟ್ಟೀಟ್ ಮಾಡಿದ್ದಾರೆ.
ಇದನ್ನೂ ಓದಿ : ಪಾಪಗಳು ದೂರ ಆಗಬೇಕು ಅಂತ ಕೂದಲು ಕಟ್ ಮಾಡಿಸಿದ್ಯಾ? : ಸೋನು ಗೌಡರನ್ನು ಪ್ರಶ್ನಿಸಿದ ನೆಟ್ಟಿಗರು..!
Post Views: 23