Download Our App

Follow us

Home » ಅಪರಾಧ » ಬೆಂಗಳೂರಲ್ಲಿ ಮಿಡ್​ನೈಟ್ ರೇವ್ ಪಾರ್ಟಿ ಮೇಲೆ ಸಿಸಿಬಿ ಬಿಗ್​ ರೇಡ್​ : ಪಾರ್ಟಿಯಲ್ಲಿ ಸಚಿವರು, ಶಾಸಕರ ಜೊತೆ ಖ್ಯಾತ ನಟ-ನಟಿಯರು ಭಾಗಿ..!

ಬೆಂಗಳೂರಲ್ಲಿ ಮಿಡ್​ನೈಟ್ ರೇವ್ ಪಾರ್ಟಿ ಮೇಲೆ ಸಿಸಿಬಿ ಬಿಗ್​ ರೇಡ್​ : ಪಾರ್ಟಿಯಲ್ಲಿ ಸಚಿವರು, ಶಾಸಕರ ಜೊತೆ ಖ್ಯಾತ ನಟ-ನಟಿಯರು ಭಾಗಿ..!

ಬೆಂಗಳೂರು : ಬೆಂಗಳೂರಿನಲ್ಲಿ ರೇವ್ ಪಾರ್ಟಿ ನಡೆಸುತ್ತಿದ್ದ ಫಾರ್ಮ್ ಹೌಸ್ ಮೇಲೆ ಮಿಡ್​ನೈಟ್ ಸಿಸಿಬಿ ತಂಡ ದಾಳಿ ನಡೆಸಿದೆ. ಎಲೆಕ್ಟ್ರಾನಿಕ್ ಸಿಟಿ ಸಮೀಪದ ಜಿ.ಆರ್ ಫಾರ್ಮ್ ಹೌಸ್ ಮೇಲೆ ದಾಳಿ ಮಾಡಲಾಗಿದ್ದು, ಈ ವೇಳೆ ಎಂಡಿಎಂಎ ಮಾತ್ರೆಗಳು, ಕೊಕೇನ್ ಮತ್ತು ಡ್ರಗ್ಸ್​ಗಳು ಪತ್ತೆಯಾಗಿದೆ. ಕಾನ್ ಕಾರ್ಡ್ ಮಾಲೀಕ ಗೋಪಾಲ ರೆಡ್ಡಿ ಮಾಲೀಕತ್ವದ ಫಾರ್ಮ್ ಹೌಸ್ ಎಂಬ ಮಾಹಿತಿ ಲಭ್ಯವಾಗಿದೆ.

ರೇವ್ ಪಾರ್ಟಿಯಲ್ಲಿ ಆಂದ್ರ ಹಾಗೂ ಬೆಂಗಳೂರು ಮೂಲದ 100 ಅಧಿಕ ಮಂದಿ ಯುವಕ-ಯುವತಿಯರು ಭಾಗವಹಿಸಿದ್ದರು. ತಡರಾತ್ರಿ ಎರಡು ಗಂಟೆಯಾದರೂ ಪಾರ್ಟಿ ನಡೆಯುತ್ತಿತ್ತು. ಅವಧಿ ಮೀರಿ ಪಾರ್ಟಿ ನಡೆಸಿದ್ದು, ಪಾರ್ಟಿಯಲ್ಲಿ ಡ್ರಗ್ಸ್ ಬಳಕೆ ಮಾಡಲಾಗಿದೆ.

ಹೈದರಾಬಾದ್ ಮೂಲದ ವಾಸು ಎಂಬಾತ ಪಾರ್ಟಿ ಆಯೋಜಿಸಿದ್ದು, ಒಂದು ಐಷಾರಾಮಿ ಕಾರ್​ನಲ್ಲಿ ಆಂಧ್ರ ಶಾಸಕನ ಪಾಸ್ ಪತ್ತೆಯಾಗಿದೆ. ಶಾಸಕ ಕಾಕನಿ ಗೋವರ್ಧನ ರೆಡ್ಡಿ ಹೆಸರಿನ ಪಾಸ್ ಪತ್ತೆಯಾಗಿದೆ.

ಪೊಲೀಸರ ದಾಳಿ ವೇಳೆ 15ಕ್ಕೂ ಹೆಚ್ಚು ಕಾರ್ ಗಳು ಕಂಡುಬಂದಿವೆ. ಒಂದು ದಿನದ ಪಾರ್ಟಿಗೆ ಮೂವತ್ತರಿಂದ ಐವತ್ತು ಲಕ್ಷ ಖರ್ಚು ಮಾಡಿ ಆಯೋಜನೆ ಮಾಡಲಾಗಿತ್ತು. ಸನ್​​ ಸೆಟ್​ TO ಸನ್​​ ರೈಸ್​ ಪಾರ್ಟಿ ಆಯೋಜಿಸಲಾಗಿತ್ತು. ಭಾನುವಾರ ಸಂಜೆ 5 ಗಂಟೆಯಿಂದ ಮುಂಜಾನೆವರೆಗೂ ರೇವ್​​ ಪಾರ್ಟಿಗೆ ಸಿದ್ದತೆ ನಡೆದಿತ್ತು ಎಂದು ತಿಳಿದುಬಂದಿದೆ. DJಗಳು, ಮಾಡೆಲ್​ಗಳು, ಟೆಕ್ಕಿಗಳು ಮುಂಜಾನೆವರೆಗೂ ನಶೆಯಲ್ಲಿ ತೇಲುತ್ತಿದ್ದರು.

ರೇವ್​​ ಪಾರ್ಟಿಯಲ್ಲಿ ನಟ-ನಟಿಯರು ಭಾಗಿಯಾಗಿದ್ದರು ಎಂಬ ಮಾಹಿತಿಯಿದೆ. ಸಚಿವರು, ಶಾಸಕರ ಜೊತೆ ಬಾಲಿವುಡ್​, ಟಾಲಿವುಡ್​ನ ನಟ-ನಟಿಯರು ರೇವ್​ ಪಾರ್ಟಿ ನಡೆಸುತ್ತಿದ್ದರು. ತೆಲುಗಿನ ಖ್ಯಾತ ನಟಿ ಹೇಮಾ ಸೇರಿ ಹಲವರು ರೇವ್​​ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಡಿಜೆಗಳಾದ RABZ, KAYVEE ಮತ್ತು BLOODY MASCAR ಕೂಡ ಭಾಗಿಯಾಗಿದ್ದರು. CCB ಟೀಂ ಹೋದಾಗ ನಟ-ನಟಿಯರು ಕುಡಿದ ಮತ್ತಿನಲ್ಲಿದ್ದರು. ಮುಂಜಾನೆ 3 ಗಂಟೆಯಾದ್ರೂ ನಟಿಯರ ನಶೆ ಇಳಿದಿರಲಿಲ್ಲ.

ರೇವ್​​ ಪಾರ್ಟಿಯಲ್ಲಿ ಆಂಧ್ರದ ಕೃಷಿ ಸಚಿವ ಕಾಕನಿ ಗೋವರ್ಧನ ರೆಡ್ಡಿ ಕೂಡ ಭಾಗಿಯಾಗಿದ್ದರು ಎಂದು ಹೇಳಲಾಗುತ್ತಿದೆ. ಪಾರ್ಟಿ ಸ್ಥಳದಲ್ಲಿದ್ದ ಆಂಧ್ರ ಕೃಷಿ ಸಚಿವರ ಕಾರು ಪತ್ತೆಯಾಗಿದೆ. ಸದ್ಯ ನಟಿಯರು, ಮಾಡೆಲ್​​ಗಳು ಸೇರಿ 25ಕ್ಕೂ ಹೆಚ್ಚು ಮಂದಿಯನ್ನು ಸಿಸಿಬಿ ವಶಕ್ಕೆ ಪಡೆದಿದೆ.

ಇನ್ನು, ನಾರ್ಕೊಟಿಕ್ಸ್ ಸ್ನಿಫರ್ ಡಾಗ್​ಗಳಿಂದ ಫಾರ್ಮ್​​ಹೌಸ್ ಪರಿಶೀಲನೆ ಮಾಡಲಾಗಿದೆ. ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಇಂದು 5ನೇ ಹಂತದ ಲೋಕಸಭಾ ಚುನಾವಣೆ : 49 ಕ್ಷೇತ್ರಗಳಲ್ಲಿ ವೋಟಿಂಗ್..!

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here