Download Our App

Follow us

Home » ರಾಷ್ಟ್ರೀಯ » ಲೋಕಸಭಾ ಚುನಾವಣೆ : ಇಂದು 5ನೇ ಹಂತ – 49 ಕ್ಷೇತ್ರಗಳಲ್ಲಿ ವೋಟಿಂಗ್..!

ಲೋಕಸಭಾ ಚುನಾವಣೆ : ಇಂದು 5ನೇ ಹಂತ – 49 ಕ್ಷೇತ್ರಗಳಲ್ಲಿ ವೋಟಿಂಗ್..!

ನವದೆಹಲಿ : ಲೋಕಸಭಾ ಚುನಾವಣೆಯ ಐದನೇ ಹಂತದ ಮತದಾನ (ಮೇ20) ಇಂದು ನಡೆಯಲಿದ್ದು, 8 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಟ್ಟು 49 ಕ್ಷೇತ್ರಗಳ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಕುತೂಹಲ ಕೆರಳಿಸಿರುವ ಉತ್ತರ ಪ್ರದೇಶದ ರಾಯ್‌ಬರೇಲಿ, ಅಮೇಠಿ ಕ್ಷೇತ್ರಗಳಲ್ಲೂ ಮತದಾನಕ್ಕೆ ಅಖಾಡ ಸಿದ್ಧವಾಗಿದೆ.

ಐದನೇ ಹಂತದಲ್ಲಿ 49 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, ಮತದಾನಕ್ಕೆ ಅಗತ್ಯ ಹಾಗೂ ಸಕಲ ಸಿದ್ಧತೆಗಳನ್ನು ಭಾನುವಾರ ಸಂಜೆಯೇ ಚುನಾವಣಾ ಆಯೋಗ ಪೂರ್ಣಗೊಳಿಸಿದೆ. ಮತಯಂತ್ರಗಳ ಸಮೇತವಾಗಿ ಚುನಾವಣಾ ಸಿಬ್ಬಂದಿ ತಮ್ಮ ಮತಗಟ್ಟೆಗಳಿಗೆ ತೆರಳಿದ್ದಾರೆ. ಇಂದು ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಲಿದೆ.

5ನೇ ಹಂತದಲ್ಲಿ ಒಟ್ಟು 8.95 ಕೋಟಿ ಮತದಾರರಿದ್ದು, 94,732 ಮತದಾನ ಕೇಂದ್ರಗಳನ್ನು ತೆರೆಯಲಾಗಿದೆ. ಇದರಲ್ಲಿ 4.69 ಕೋಟಿ ಪುರುಷ ಮತದಾರರು, 4.26 ಕೋಟಿ ಮಹಿಳೆಯರು ಹಾಗೂ 5,409 ಮಂದಿ ತೃತೀಯ ಲಿಂಗಿ ಮತದಾರರಿದ್ದಾರೆ.

ಎಲ್ಲೆಲ್ಲಿ ಚುನಾವಣೆ : ಉತ್ತರ ಪ್ರದೇಶ (14), ಮಹಾರಾಷ್ಟ್ರ (13), ಪಶ್ಚಿಮ ಬಂಗಾಳ (7), ಬಿಹಾರ (5), ಒಡಿಶಾ (5), ಜಾರ್ಖಂಡ್‌ (3), ಲಡಾಖ್‌ (1 ), ಜಮ್ಮು ಮತ್ತು ಕಾಶ್ಮೀರ (1)

ಪ್ರಮುಖ ಅಭ್ಯರ್ಥಿಗಳು : ರಾಹುಲ್ ಗಾಂಧಿ, ಸ್ಮೃತಿ ಇರಾನಿ, ರಾಜ್‌ನಾಥ್‌ ಸಿಂಗ್‌, ಒಮರ್‌ ಅಬ್ದುಲ್ಲಾ, ಪಿಯೂಷ್‌ ಗೋಯಲ್‌, ರಾಜೀವ್‌ ಪ್ರತಾಪ್ ರೂಢಿ, ರೋಹಿಣಿ ಅಚಾರ್ಯ, ಚಿರಾಗ್ ಪಾಸ್ವಾನ್‌, ಸೇರಿದಂತೆ ಹಲವು ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಮೊದಲ ನಾಲ್ಕು ಹಂತಗಳಲ್ಲಿ 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 379 ಕ್ಷೇತ್ರಗಳಲ್ಲಿ ಮತದಾನ ನಡೆದಿದೆ. ಆರು ಮತ್ತು ಏಳನೇ ಹಂತದ ಮತದಾನ ಕ್ರಮವಾಗಿ ಮೇ 25 ಹಾಗೂ ಜೂನ್‌ 1 ರಂದು ನಡೆಯಲಿದೆ. ಚುನಾವಣೆಯ ಫಲಿತಾಂಶ ಜೂ. 4 ರಂದು ಹೊರಬೀಳಲಿದೆ.

ಇದನ್ನು ಓದಿ : ವಿಜಯಪುರ : ಕಲ್ಲಿನಿಂದ ಜಜ್ಜಿ ಯುವಕನ ಬರ್ಬರ ಹ*ತ್ಯೆ..!

Leave a Comment

DG Ad

RELATED LATEST NEWS

Top Headlines

ಅಟ್ರಾಸಿಟಿ ಕೇಸ್​​ ಇದ್ರೂ ಅರೆಸ್ಟ್ ಆಗಿಲ್ಲ ಟೌನ್​ ಪ್ಲಾನಿಂಗ್​ ಆಫೀಸರ್ ಮಂಜೇಶ್ – FIR ಆಗಿದ್ರೂ ಸಸ್ಪೆಂಡ್‌ ಮಾಡದೆ ರಕ್ಷಣೆ ಮಾಡ್ತಿರೋದ್ಯಾಕೆ?

ಆನೇಕಲ್​​ : ಭೂ ವಿವಾದಕ್ಕೆ ಸಂಬಂಧಿಸಿದಂತೆ ಟೌನ್​ ಪ್ಲಾನಿಂಗ್​ ಆಫೀಸರ್ ಮಂಜೇಶ್​​​ ಜೆಸಿಬಿಯನ್ನೂ ತೆಗೆದುಕೊಂಡು ಹೋಗಿ ಟಾರ್ಚರ್ ಕೊಟ್ಟಿದ್ದ ಘಟನೆಯೊಂದು ನಡೆದಿತ್ತು. ಈ ಪ್ರಕರಣಕ್ಕೆ ಮಂಜೇಶ್​​​ ವಿರುದ್ದ

Live Cricket

Add Your Heading Text Here