ಬೆಂಗಳೂರು : ಮೆಂಟಲ್ ಕೇಸ್ ಮಾತಿಗೆಲ್ಲಾ ರಿಯಾಕ್ಟ್ ಮಾಡಲ್ಲ. ತಲೆ ಕೆಟ್ಟು ಏನೇನೋ ಮಾತನಾಡುತ್ತಿದ್ದಾರೆ ಎಂದು ದೇವರಾಜೇಗೌಡ 100 ಕೋಟಿ ಆರೋಪಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಪೆನ್ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಕೆಶಿ 100 ಕೋಟಿ ಆಫರ್ ಮಾಡಿದ್ದರು ಎಂಬ ದೇವರಾಜೇಗೌಡ ಅವರ ಆರೋಪಕ್ಕೆ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್ ಅವರು, ಅವ್ನು ಏನ್ ಬೇಕಾದರೂ ಮಾತನಾಡಿಕೊಳ್ಳಲಿ. ದೇವರಾಜೇಗೌಡಗೆ ತಲೆ ಕೆಟ್ಟಿದೆ. ಇಂಥವರನ್ನೆಲ್ಲಾ ಗಂಭೀರವಾಗಿ ತಗೆದುಕೊಳ್ಳಬಾರದು ಎಂದು ತಿಳಿಸಿದ್ದಾರೆ.
ನಾನು ಡಿಸಿಎಂ ಕೆಲವರು ಫೋನ್ ಮಾಡ್ದಾಗ ಮಾತಾಡ್ಬೇಕಾಗುತ್ತೆ. ಯಾರನ್ನೂ ಭೇಟಿ ಮಾಡಿ ಈ ವಿಚಾರ ಚರ್ಚೆ ಮಾಡಿಲ್ಲ ಎಂದು 5 ಕೋಟಿ ಕ್ಯಾಶ್ ಕೊಟ್ಟಿದ್ದರು ಅನ್ನೋ ಆರೋಪಕ್ಕೆ ಕಿಡಿಕಾರಿದ್ದಾರೆ.
ಇದನ್ನೂ ಓದಿ : ಪೆನ್ಡ್ರೈವ್ಗೂ ಡಿಕೆಶಿಗೂ ಸಂಬಂಧ ಇಲ್ಲ, ಕೇಸ್ ಡೈವರ್ಟ್ ಮಾಡಲು JDS ಡಿಕೆಶಿ ಹೆಸರು ಬಳಸ್ತಿದೆ – ಚಲುವರಾಯಸ್ವಾಮಿ..!
Post Views: 42