Download Our App

Follow us

Home » ಸಿನಿಮಾ » ಪ್ರತಿಷ್ಠಿತ ಅಂತಾರಾಷ್ಟ್ರೀಯ ಗೋವಾ ಫಿಲ್ಮ್ ಫೆಸ್ಟಿವಲ್‌ಗೆ ಕನ್ನಡದ ‘ವೆಂಕ್ಯಾ’ ಸಿನಿಮಾ ಆಯ್ಕೆ..!

ಪ್ರತಿಷ್ಠಿತ ಅಂತಾರಾಷ್ಟ್ರೀಯ ಗೋವಾ ಫಿಲ್ಮ್ ಫೆಸ್ಟಿವಲ್‌ಗೆ ಕನ್ನಡದ ‘ವೆಂಕ್ಯಾ’ ಸಿನಿಮಾ ಆಯ್ಕೆ..!

ಗೋವಾದ ಪಣಜಿಯಲ್ಲಿ 55ನೇ ‘ಭಾರತೀಯ ಅಂತಾರಾಷ್ಟ್ರೀಯಾ ಸಿನಿಮೋತ್ಸವ’ ನವೆಂಬರ್ 20ರಿಂದ 28ರ ತನಕ ನಡೆಯಲಿದೆ. ಭಾರತದ ಪ್ರತಿಷ್ಠಿತ ಫಿಲ್ಮ್ ಫೆಸ್ಟಿವಲ್‌ಗಳಲ್ಲಿ ಒಂದಾಗಿರುವ ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಇದೀಗ ಕನ್ನಡದ ವೆಂಕ್ಯಾ ಸಿನಿಮಾ ಆಯ್ಕೆಯಾಗಿದೆ. ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ಭಾರತೀಯ ಪನೋರಮಾ’ ವಿಭಾಗದಲ್ಲಿ ಈ ಚಿತ್ರ ಪ್ರದರ್ಶನ ಕಾಣಲಿದೆ.

ಡೊಳ್ಳು ಸಿನಿಮಾ ಮೂಲಕ ನಿರ್ಮಾಣಕ್ಕಿಳಿದು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಬಾಚಿಕೊಂಡಿದ್ದ ಪವನ್ ಒಡೆಯರ್ ಹಾಗೂ ಸಾಗರ್ ಪುರಾಣಿಕ್ ಕಾಂಬಿನೇಷನ್​​ನಲ್ಲಿ ವೆಂಕ್ಯಾ ಚಿತ್ರ ಮೂಡಿಬಂದಿದೆ. ವೆಂಕ್ಯಾನಿಗೆ ಸಾಗರ್ ಪುರಾಣಿಕ್ ಆಕ್ಷನ್ ಕಟ್ ಹೇಳುವುದರ ಜೊತೆಗೆ ನಾಯಕನಾಗಿಯೂ ಬಣ್ಣ ಹಚ್ಚಿದ್ದಾರೆ. ಚಿತ್ರದಲ್ಲಿ ಸಾಗರ್​ಗೆ ಜೋಡಿಯಾಗಿ ಶಿಮ್ಲಾದ ರೂಪಾಲಿ ಸೂದ್ ಅಭಿನಯಿಸಿದ್ದಾರೆ.

ಉತ್ತರ ಕರ್ನಾಟಕ ಕಥೆಯಾಧಾರಿಸಿತ ವೆಂಕ್ಯಾ ಸಿನಿಮಾವನ್ನು ಅಪೇಕ್ಷಾ ಒಡೆಯರ್ ಮತ್ತು ಪವನ್ ಒಡೆಯರ್ ನಿರ್ಮಾಣ ಮಾಡುತ್ತಿದ್ದಾರೆ. ಪವನ್ ಸ್ನೇಹಿತರಾದ ಅವಿನಾಶ್ ವಿ ರೈ ಮತ್ತು ಮೋಹನ್ ಲಾಲ್ ಮೆನನ್ ಸಹ ನಿರ್ಮಾಣವಿರಲಿದೆ.

ಗೋವಾ ಫಿಲ್ಮ್ ಫೆಸ್ಟಿವಲ್ನಲ್ಲಿ ‘ಭಾರತೀಯ ಪನೋರಮಾ’ ವಿಭಾಗ ಪ್ರಮುಖವಾಗಿದೆ. ಇದರಲ್ಲಿ 25 ಕಥಾಚಿತ್ರ ಹಾಗೂ 20 ನಾನ್-ಫೀಚರ್ ಸಿನಿಮಾಗಳು ಪ್ರದರ್ಶನಕ್ಕೆ ಆಯ್ಕೆ ಆಗಿದೆ. ಇಂಡಿಯನ್ ಪನೋರಮಾ ವಿಭಾಗದ ಆರಂಭಿಕ ಸಿನಿಮಾವಾಗಿ ಬಾಲಿವುಡ್​​ನ ‘ಸ್ವಾತಂತ್ರ್ಯ ವೀರ್ ಸಾವರ್ಕರ್’ ಸಿನಿಮಾ ಪ್ರದರ್ಶನ ಆಗಲಿದೆ. ಎರಡನೇ ಸಿನಿಮಾವಾಗಿ ಕನ್ನಡದ ‘ಕೆರೆಬೇಟೆ’ ಆಯ್ಕೆ ಆಗಿದೆ. ಆಯ್ಕೆದಾದ ಸಿನಿಮಾಗಳ ಪಟ್ಟಿಯ 3ನೇ ಸ್ಥಾನದಲ್ಲಿ ಕನ್ನಡದ ‘ವೆಂಕ್ಯಾ’ ಚಿತ್ರವಿದೆ. ಭಾರತದ ಜನಪ್ರಿಯ ಸಿನಿಮಾಗಳನ್ನು ಕೂಡ ಆಯ್ಕೆ ಮಾಡಲಾಗಿದೆ. ಮಲಯಾಳ, ತಮಿಳು, ಮರಾಠಿ, ಬೆಂಗಾಲಿ, ತೆಲುಗು ಭಾಷೆಯ ಸಿನಿಮಾಗಳು ಪ್ರದರ್ಶನ ಕಾಣಲಿವೆ. ಗೋವಾದ ಪಣಜಿಯಲ್ಲಿ ನಡೆಯುವ ಚಿತ್ರೋತ್ಸವದಲ್ಲಿ ದೇಶ ವಿದೇಶದ ಹಲವರು ಭಾಗಿಯಾಗಲಿದ್ದಾರೆ.

ಇದನ್ನೂ ಓದಿ : ಹಾಲಿವುಡ್ ಬಹುನಿರೀಕ್ಷಿತ ಸಿನಿಮಾ ‘ವೆನಮ್: ದಿ ಲಾಸ್ಟ್ ಡ್ಯಾನ್ಸ್’ ರಿಲೀಸ್..! 

Leave a Comment

DG Ad

RELATED LATEST NEWS

Top Headlines

ಕಟೀಲು ದುರ್ಗಾಪರಮೇಶ್ವರಿ ದೇವಿಯ ಆಶೀರ್ವಾದ ಪಡೆದ ನಟ ಉಪೇಂದ್ರ..!

ಸ್ಯಾಂಡಲ್​ವುಡ್​ನ ರಿಯಲ್ ಸ್ಟಾರ್, ನಟ ಉಪೇಂದ್ರ ಅಭಿನಯದ ‘ಯುಐ’ ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ. ಈ ಹಿನ್ನೆಲೆ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ‘ಯುಐ’ ಟೀಮ್ ಜೊತೆ ನಟ ಉಪೇಂದ್ರ

Live Cricket

Add Your Heading Text Here