ದೇಶಾದ್ಯಂತ ಭಾರೀ ಸಂಚಲನ ಸೃಷ್ಟಿಸಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಪ್ರಕರಣ ದಿನ ಕಳೆದಂತೆ ಒಂದೊಂದು ರೂಪ ಪಡೆದುಕೊಳ್ಳುತ್ತಿದೆ. ಹೀಗಿರುವಾಗಲೇ ಪ್ರಜ್ವಲ್ ಪೆನ್ಡ್ರೈವ್ ಪ್ರಕರಣದ ಹೊತ್ತಲ್ಲೇ ಪ್ರಭಾವಿ ಮಂತ್ರಿಯೊಬ್ಬರ ಸೆಕ್ಸ್ ವಿಡಿಯೋ ಮಹಾ ಸ್ಫೋಟಗೊಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಪ್ರಜ್ವಲ್ ಪ್ರಕರಣ ರಾಜ್ಯದ್ಯಾಂತ ಭಾರೀ ಸದ್ದು ಮಾಡುತ್ತಿರುವಾಗಲೇ, ಇನ್ನೊಬ್ಬ ಮಂತ್ರಿಯ ಸೆಕ್ಸ್ ಸ್ಕ್ಯಾಂಡಲ್ ದೊಡ್ಡದಾಗಿ ಸದ್ದು ಮಾಡುತ್ತಿದೆ. ಆ ಮಂತ್ರಿಯ ರಾಸಲೀಲೆ ವಿಡಿಯೋ ಬೆಳಕಿಗೆ ಬಂದರೆ ರಾಜ್ಯ ಸರ್ಕಾರವನ್ನೇ ಬೆಚ್ಚಿ ಬೀಳಿಸಲಿದೆ. ಮಿನಿಸ್ಟರ್ ಸೆಕ್ಸ್ ವಿಡಿಯೋ ಯಾವುದೇ ಕ್ಷಣ ಸ್ಫೋಟವಾಗೋ ಸಾಧ್ಯತೆಯಿದ್ದು, ಈಗಾಗಲೇ ಇಂಟಲಿಜೆನ್ಸ್ ವಿಂಗ್ ಸೆಕ್ಸ್ ವಿಡಿಯೋದ ಮೂಲವನ್ನು ಹುಡುಕಾಡಲು ಮುಂದಾಗಿದೆ.
ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಕೇಸ್ ನಲ್ಲಿ ಈಗಾಗಲೇ ಕಾಂಗ್ರೆಸ್ ಮತ್ತು ಜೆಡಿಎಸ್ ಕೆಸರೆರಚಾಟ ಪ್ರಾರಂಭಿಸಿದೆ. ಪ್ರಭಾವಿ ಮಂತ್ರಿಯ ವಿಡಿಯೋ ಹೊರ ಬಂದರೆ ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ಮತ್ತು ಬಿಜೆಪಿ ಜಂಟಿಯಾಗಿ ಬೀದಿಗಿಳಿದು ಕೋಲಾಹಲ ಎಬ್ಬಿಸಲಿದೆ. ಇದು ರಾಜ್ಯ ಸರ್ಕಾರಕ್ಕೆ ಕಂಟಕವಾಗಬಹುದಾದ ಸಾಧ್ಯತೆ ಇದೆ.
ಪ್ರಜ್ವಲ್ ರೇವಣ್ಣಗಿಂತಲೂ ಮಂತ್ರಿ ಸೆಕ್ಸ್ ವಿಡಿಯೋ ಭಾರೀ ಹಲ್ಚಲ್ ಎಬ್ಬಿಸುತ್ತಿದ್ದು, ಆ ಮಿನಿಸ್ಟರ್ ಸೆಕ್ಸ್ ವಿಡಿಯೋ ಬಗ್ಗೆ ಪೊಲೀಸರು ತಲೆ ಕೆಡಿಸಿಕೊಂಡಿದ್ದಾರೆ. ಮಿನಿಸ್ಟರ್ ಸೆಕ್ಸ್ ವಿಡಿಯೋ ಯಾರ ಬುಡಕ್ಕೆ ಕುತ್ತು ತರುತ್ತೆ..? ಸರ್ಕಾರಕ್ಕೆ ಹೇಗೆ ಕಂಟಕವಾಗುತ್ತೆ..? ರಾಜ್ಯ ರಾಜಕೀಯದಲ್ಲಿ ಅದೇಗೆ ಅಲ್ಲೋಲ-ಕಲ್ಲೋಲ ಸೃಷ್ಟಿ ಮಾಡುತ್ತೆ ಅನ್ನುವ ಪ್ರಶ್ನೆ ಎದ್ದಿದೆ.
ಇದನ್ನೂ ಓದಿ : ಪ್ರಜ್ವಲ್ ರೇವಣ್ಣ ಪತ್ತೆಗೆ ಬ್ಲೂ ಕಾರ್ನರ್ ನೋಟಿಸ್ ಜಾರಿ – 196 ರಾಷ್ಟ್ರಗಳಿಗೆ ಮಾಹಿತಿ ರವಾನಿಸಿದ ಇಂಟರ್ಪೋಲ್..!