Download Our App

Follow us

Home » ಜಿಲ್ಲೆ » ಬೀದರ್ : ಮತದಾರರಿಗೆ ಹಂಚಲು ತಂದಿದ್ದ 4.40 ಲಕ್ಷ ರೂಪಾಯಿ ಮೌಲ್ಯದ ಅಕ್ರಮ ಮದ್ಯ ವಶಕ್ಕೆ..!

ಬೀದರ್ : ಮತದಾರರಿಗೆ ಹಂಚಲು ತಂದಿದ್ದ 4.40 ಲಕ್ಷ ರೂಪಾಯಿ ಮೌಲ್ಯದ ಅಕ್ರಮ ಮದ್ಯ ವಶಕ್ಕೆ..!

ಬೀದರ್ : ಬೀದರ್​ ಲೋಕಸಭೆ ಕ್ಷೇತ್ರದಲ್ಲಿ ಮತದಾರರಿಗೆ ಹಂಚಲು ತಂದಿದ್ದರು ಎನ್ನಲಾದ 4.40 ಲಕ್ಷ ರೂಪಾಯಿ ಮೌಲ್ಯದ ಅಕ್ರಮ ಮದ್ಯ ವಶಕ್ಕೆ ಪಡೆಯಲಾಗಿದೆ. ಹೂಲಸೂರಿನಿಂದ ಬಸವಕಲ್ಯಾಣಕ್ಕೆ ಹುಂಡೈ ಕಾರ್​​ನಲ್ಲಿ ಮದ್ಯ ಸಾಗಿಸಲಾಗುತ್ತಿತ್ತು.

ಖಚಿತ ಮಾಹಿತಿ ಮೇರೆಗೆ ಕಾರ್ ತಡೆದು ಪರಿಶೀಲನೆ ನಡೆಸಿದಾಗ ಮದ್ಯ ಪತ್ತೆಯಾಗಿದೆ. ಕಾರ್​​ನಲ್ಲಿ ಎರಡು‌ ಲಕ್ಷ ಲೀಟರ್ ಅಕ್ರಮ ಮದ್ಯವನ್ನು 36 ಬಾಕ್ಸ್​ನಲ್ಲಿ ಸಾಗಿಸಲಾಗುತ್ತಿತ್ತು. ಕಾರ್ ಚಾಲಕ ಮಲ್ಲಿಕಾರ್ಜುನ ಕಂಟೆಪ್ಪಾನನ್ನು ಅರೆಸ್ಟ್ ಮಾಡಲಾಗಿದೆ.

ಜಿಲ್ಲಾ ಅಬಕಾರಿ ಡಿಸಿ ಡಾ.ಸಂಗನಗೌಡ ಪಿ ಹೊಸಳ್ಳಿ, ಅಬಕಾರಿ ಉಪ ಅಧಿಕ್ಷಕರಾದ ರವಿ ಮರಗೋಡ್, ಹನುಮಂತ ಗುತ್ತೆದಾರ, ರಮೇಶ್ ಬಿರಾದಾರ, ಶರಣಮ್ಮಾ ಬಜಂತ್ರಿ ಸೇರಿ ಹಲವರಿಂದ ಕಾರ್ಯಾಚರಣೆ ನಡೆದಿತ್ತು.

ಇದನ್ನೂ ಓದಿ : ಜಾರ್ಖಂಡ್​ ಸಚಿವನ ಆಪ್ತನ ಮನೆ ಮೇಲೆ ಇಡಿ ರೇಡ್ : ರಾಶಿ ರಾಶಿ ಹಣ ಪತ್ತೆ..!

Leave a Comment

DG Ad

RELATED LATEST NEWS

Top Headlines

ರವಿಶಂಕರ್ ಪುತ್ರ ಅದ್ವೈ ನಟನೆಯ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ – ಸಾಥ್ ಕೊಟ್ಟ ಶಿವಣ್ಣ..!

ಬಹುಭಾಷಾ ನಟ ಪಿ. ರವಿಶಂಕರ್​ ಅವರ ಪುತ್ರ ಅದ್ವೈ ಅಭಿನಯದ ಮೊದಲ ಸಿನಿಮಾ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ ಆಗಿದೆ. ಗಣೇಶ ಚತುರ್ಥಿಯ ಶುಭ ದಿನವಾದ ಇಂದು

Live Cricket

Add Your Heading Text Here