Download Our App

Follow us

Home » ಅಪರಾಧ » DCP ಕಚೇರಿಯಿಂದಲೇ ಕುಖ್ಯಾತ ರೌಡಿ ಶೀಟರ್​ ಎಸ್ಕೇಪ್ – ಆಗಿದ್ದೇಗೆ ಗೊತ್ತಾ ?

DCP ಕಚೇರಿಯಿಂದಲೇ ಕುಖ್ಯಾತ ರೌಡಿ ಶೀಟರ್​ ಎಸ್ಕೇಪ್ – ಆಗಿದ್ದೇಗೆ ಗೊತ್ತಾ ?

ಬೆಂಗಳೂರು : DCP ಕಚೇರಿಯಿಂದಲೇ ಕುಖ್ಯಾತ ರೌಡಿ ಶೀಟರ್​ ಎಸ್ಕೇಪ್​​​ ಆಗಿರುವ ಘಟನೆ ಉತ್ತರ ವಿಭಾಗ ಕಚೇರಿಯಲ್ಲಿ ನಡೆದಿದೆ. ಸುಬ್ರಹ್ಮಣ್ಯ ನಗರ ಠಾಣೆ ರೌಡಿಶೀಟರ್ ಒಂಟೆ ರೋಹಿತ್ ತಪ್ಪಿಸಿಕೊಂಡಿರುವ ರೌಡಿ ಶೀಟರ್.

ಸೈಲೆಂಟ್​ ಸುನೀಲನ ಸಹಚರನಾಗಿರುವ ಒಂಟಿ ರೋಹಿತ್​​ನ್ನು CRPC 110 ಹಾಕಲು ಒಂದು ವಾರದ ಹಿಂದೆ ಪೊಲೀಸರು ಠಾಣೆಗೆ ಕರೆಸಿಕೊಂಡಿದ್ದರು. ಠಾಣೆಯಿಂದ ಡಿಸಿಪಿ ಕಚೇರಿಗೆ  ರೌಡಿ ಶೀಟರ್ ಒಂಟೆ ರೋಹಿತ್​​ನನ್ನ ಕರೆದೊಯ್ಯುತ್ತಿದ್ದರು. ಇದೇ ವೇಳೆ ಡಿಸಿಪಿ ಕಚೇರಿ ಬಳಿ ಇದ್ದ CCB ಪೊಲೀಸರು ಇದ್ದದ್ದನ್ನು ಕಂಡು ಒಂಟೆ ರೋಹಿತ್​​ ಬೆಚ್ಚಿಬಿದ್ದಿದ್ದಾನೆ.

ಯಾಕಂದ್ರೆ ಒಂಟೆ ರೋಹಿತ್ ಕೊಲೆ, ಕೊಲೆಯತ್ನ ಸೇರಿ ಹಲವು ಕೇಸ್​ಗಳಲ್ಲಿ ಫಿಟ್ ಆಗಿದ್ದ. ಸಿಸಿಬಿ ಪೊಲೀಸರ ಕೈಗೆ ಸಿಗದೇ ಕಳ್ಳಾಟ ಆಡುತ್ತಿದ್ದ. ಈ ಹಳೆ ಕೇಸ್​ನಲ್ಲಿ ಒಂಟೆ ರೋಹಿತ್​​ನನ್ನು ಸಿಸಿಬಿ ಪೊಲೀಸರು  ಹುಡುಕಾಟ ನಡೆಸುತ್ತಿದ್ದರು. ಈಗಾಗಿ ಡಿಸಿಪಿ ಕಚೇರಿಯಲ್ಲಿ ಸಿಸಿಬಿ ಪೊಲೀಸರ ದರ್ಶನವಾಗುತ್ತಿದ್ದಂತೆ ರೌಡಿ ಶೀಟರ್ ಅಲ್ಲಿಂದ ಕಾಲ್ಕಿತ್ತಿದ್ದಾನೆ.

ಇದನ್ನೂ ಓದಿ : ಪ್ರಜ್ವಲ್​ ರೇವಣ್ಣ ಪ್ರಕರಣದಲ್ಲಿ ಕಠಿಣ ಶಿಕ್ಷೆ ಆಗ್ಬೇಕು – ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದ ರಾಹುಲ್​ ಗಾಂಧಿ..!

Leave a Comment

DG Ad

RELATED LATEST NEWS

Top Headlines

ವಿಕ್ಕಿ ಯಾವಾಗಲೂ ಹೇಗಿರ್ತಾರೆ ಗೊತ್ತಾ? – ದಾಂಪತ್ಯದ ಸೀಕ್ರೆಟ್ ರಿವೀಲ್ ಮಾಡಿದ ಕತ್ರಿನಾ ಕೈಫ್..!

ಮುಂಬೈ : ಬಾಲಿವುಡ್​ನ​ ಕ್ಯೂಟ್​ ಕಪಲ್​ಗಳಲ್ಲಿ ಕತ್ರಿನಾ ಕೈಫ್​​ ಮತ್ತು ವಿಕ್ಕಿ ಕೌಶಲ್​ ಕೂಡ ಒಬ್ಬರು. 2021ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಮುದ್ದಾದ ಜೋಡಿಯನ್ನು ಬಿಗ್

Live Cricket

Add Your Heading Text Here