ಬೆಂಗಳೂರು : ಅಶ್ಲೀಲ ವೀಡಿಯೋ ಪ್ರಕರಣ ಸಂಬಂಧ ಹಾಸನ ಸಂಸದ ಪ್ರಜ್ವಲ್ ರೇವಣ್ಣಗೆ ಲುಕ್ಔಟ್ ನೋಟಿಸ್ ಜಾರಿ ಮಾಡಲಾಗಿದೆ. ಲುಕ್ಔಟ್ ನೋಟಿಸ್ ಬಗ್ಗೆ ಕಲಬುರಗಿಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾಹಿತಿ ನೀಡಿದ್ದಾರೆ.
ವಿಮಾನ ನಿಲ್ದಾಣದ ಇಮಿಗ್ರೇಷನ್ ಲುಕ್ಔಟ್ ನೋಟಿಸ್ ಸರ್ವ್ ಮಾಡಲಾಗಿದೆ. ಎಲ್ಲಾ ಏರ್ಪೋರ್ಟ್ ಇಮಿಗ್ರೇಷನ್ ವಿಬಾಗಕ್ಕೆ SIT ಅಧಿಕಾರಿಗಳು ನೋಟಿಸ್ ರವಾನಿಸಿದ್ದಾರೆ. ಈ ಮೂಲಕ ಲೊಕೇಟ್ ಆದ ಕೂಡಲೇ ಪ್ರಜ್ವಲ್ ರೇವಣ್ಣನನ್ನು ವಶಕ್ಕೆ ಪಡೆಯಲು ಸೂಚನೆ ನೀಡಿದ್ದಾರೆ.
ಲುಕ್ಔಟ್ ನೋಟಿಸ್ ಬಗ್ಗೆ ಕಲಬುರಗಿಯಲ್ಲಿ ಮಾಹಿತಿ ನೀಡಿದ ಡಾ.ಜಿ.ಪರಮೇಶ್ವರ್ ಅವರು, ಪ್ರಜ್ವಲ್ ರೇವಣ್ಣ ಹೊರ ದೇಶಕ್ಕೆ ಹೋಗುವಾಗ ಕೇಂದ್ರ ಡಿಪ್ಲೋಮ್ಯಾಟಿಕ್ ಪಾಸ್ಪೋರ್ಟ್ ನೀಡಿದೆ.
ಡಿಪ್ಲೋಮ್ಯಾಟಿಕ್ ಪಾಸ್ಪೋರ್ಟ್ಗೆ ಹೆಚ್ಚಿನ ಪ್ರಶ್ನೆಗಳನ್ನು ಕೇಳೋದಿಲ್ಲ. ಈಗಾಗಲೇ ಪ್ರಜ್ವಲ್ ರೇವಣ್ಣಗೆ ಲುಕ್ಔಟ್ ನೋಟಿಸ್ ನೀಡಲಾಗಿದೆ. ಪ್ರಜ್ವಲ್ ಪರ ವಕೀಲರು ಸಮಯ ಕೇಳಿದ್ದಾರೆ. ಆದರೆ
ಇಂಥಾ ಪ್ರಕರಣಗಳಲ್ಲಿ ಕಾಲಾವಕಾಶ ಕೊಡಲು ಆಗೋದಿಲ್ಲ. ಹೀಗಾಗಿ ಅರೆಸ್ಟ್ ಮಾಡಲು SIT ಎಲ್ಲಾ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ನಾನು ಬೆನ್ನ ಹಿಂದೆ ಫೈಟ್ ಮಾಡಲ್ಲ, ಬೀದಿಯಲ್ಲೇ ಫೈಟ್ ಮಾಡ್ತೀನಿ : ಹೆಚ್ಡಿಕೆ ಹೇಳಿಕೆಗೆ ಡಿಕೆಶಿ ತಿರುಗೇಟು..!
Post Views: 201