ಬೆಂಗಳೂರು : ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಪ್ರಕರಣ ದಿನೇ ದಿನೇ ಹೊಸ ರೂಪ ಪಡೆದುಕೊಳ್ಳುತ್ತಿದೆ. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ಮತ್ತು ಶಾಸಕ ಹೆಚ್.ಡಿ.ರೇವಣ್ಣ ಅವರಿಗೆ ಎಸ್ಐಟಿ (ವಿಶೇಷ ತನಿಖಾ ತಂಡ) ನೋಟಿಸ್ ಜಾರಿ ಮಾಡಿದೆ. ಮಾತ್ರವಲ್ಲದೇ 24 ಗಂಟೆಗಳಲ್ಲಿ ಹಾಜರಾಗಲು ಸೂಚನೆ ನೀಡಿದೆ.
SIT ಬೆಂಗಳೂರಿನ ಜೆಪಿ ನಗರ ನಿವಾಸ, ಹೊಳೆನರಸೀಪುರ ನಿವಾಸಕ್ಕೆ ನೋಟಿಸ್ ನೀಡ್ತಿದ್ದಂತೆ ಪ್ರಜ್ವಲ್, ಹೆಚ್.ಡಿ.ರೇವಣ್ಣಗೆ ಅರೆಸ್ಟ್ ಆತಂಕ ಶುರುವಾಗಿದೆ. ಪ್ರಜ್ವಲ್ ರೇವಣ್ಣ ವಾಟ್ಸಾಪ್ ನಂಬರ್ಗಳಿಗೂ ನೋಟಿಸ್ ರವಾನೆ ಮಾಡಲಾಗಿದ್ದು, ಈ ನೋಟಿಸ್ನಲ್ಲಿ ಎಲ್ಲೇ ಇದ್ದರೂ ವಿಶೇಷ ತನಿಖಾ ದಳದ ಮುಂದೆ ಹಾಜರಾಗಬೇಕು ತಿಳಿಸಲಾಗಿದೆ. ಇನ್ನು ನೋಟಿಸ್ ಜಾರಿಯಾಗ್ತಿದ್ದಂತೆ ರೇವಣ್ಣ ಕಾನೂನು ತಜ್ಞರ ಜೊತೆ ಚರ್ಚೆ ನಡೆಸಿ, ನೋಟಿಸ್ಗೆ ಉತ್ತರ ನೀಡುವ ಸಂಬಂಧ ಸಲಹೆ ಪಡೆದಿದ್ದಾರೆ.
ಇನ್ನು ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ ಎರಡು ತಿಂಗಳ ಟೂರಿಸ್ಟ್ ವೀಸಾದಲ್ಲಿ ಫಾರಿನ್ಗೆ ತೆರಳಿದ್ದಾರೆ. ರೇವಣ್ಣ A-1 ಆಗಿದ್ರೂ ವೈರಲ್ ಆಗಿರೋದು ಪ್ರಜ್ವಲ್ ವಿಡಿಯೋ ಹೀಗಾಗಿ ಜರ್ಮನಿಯ ಫ್ರಾಂಕ್ಫರ್ಟ್ನಲ್ಲಿರುವ ಪ್ರಜ್ವಲ್ ರೇವಣ್ಣ ಸ್ಟೇಟ್ಮೆಂಟ್ ಇಲ್ಲಿ ಪ್ರಮುಖವಾಗಿದೆ. ಈ ಹಿನ್ನಲೆ ಫ್ರಾಂಕ್ ಫರ್ಟ್ ಟ್ರೀಟಿ ಏನ್ ಹೇಳುತ್ತೆ ಅಂತಾ ಅಧಿಕಾರಿಗಳು ನೋಡುತ್ತಿದ್ದಾರೆ. ಇನ್ನು ಪ್ರಜ್ವಲ್ ರೇವಣ್ಣ ಸತತವಾಗಿ ಗೈರಾದರೆ ರೆಡ್ ಕಾರ್ನರ್ ಅಥವಾ ಲುಕ್ ಔಟ್ ನೊಟೀಸ್ ಜಾರಿ ಮಾಡುವ ಮಾಡುವ ಸಾಧ್ಯತೆಯಿದ್ದು, ಇಂಟರ್ ಪೋಲ್ ಮೊರೆ ಹೋಗಲು SIT ಚಿಂತನೆ ನಡೆಸುತ್ತಿದೆ.
ಈಗಾಗಾಲೆ SIT ತನಿಖಾಧಿಕಾರಿಗಳು ಡ್ರೈವರ್ ಕಾರ್ತಿಕ್ ವಿಚಾರಣೆ ಮಾಡುತ್ತಿದ್ದು, ಸಂತ್ರಸ್ತೆಯ ಹೇಳಿಕೆಯನ್ನೂ ದಾಖಲಿಸಿಕೊಂಡಿದ್ದಾರೆ. ತನಿಖಾಧಿಕಾರಿಗಳು ಸಂತ್ರಸ್ತೆಯ 164 ಸ್ಟೇಟ್ಮೆಂಟ್ ಪಡೆದು ತನಿಖೆ ಚುರುಕುಗೊಳಿಸಲು ಪ್ರಜ್ವಲ್ ತನಿಖೆ ಮಾಡಲೇಬೇಕಿರುವ ಹಿನ್ನೆಲೆಯಲ್ಲಿ ಬಂಧನಕ್ಕೆ ಸಿದ್ದತೆ ನಡೆಸುತ್ತಿವೆ.
ಇದನ್ನೂ ಓದಿ : ಇಂದು ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಎಂಟ್ರಿ – ಪ್ರಹ್ಲಾದ್ ಜೋಶಿ, ಬೊಮ್ಮಾಯಿ ಪರ ಮತಬೇಟೆ..!