Download Our App

Follow us

Home » ರಾಜಕೀಯ » ಬೌದ್ಧ ಧರ್ಮದ ಸಂಪ್ರದಾಯದಂತೆ ಇಂದು ಶ್ರೀನಿವಾಸ ಪ್ರಸಾದ್ ಅಂತ್ಯಕ್ರಿಯೆ..!

ಬೌದ್ಧ ಧರ್ಮದ ಸಂಪ್ರದಾಯದಂತೆ ಇಂದು ಶ್ರೀನಿವಾಸ ಪ್ರಸಾದ್ ಅಂತ್ಯಕ್ರಿಯೆ..!

ಮೈಸೂರು : ರಾಜ್ಯಕಂಡ ಧೀಮಂತ ರಾಜಕಾರಣಿ. ಚಾಮರಾಜನಗರದ ಸಂಸದರಾಗಿ, ನಂಜನಗೂಡಿನ ಶಾಸಕರಾಗಿ ರಾಜ್ಯ ಮತ್ತು ರಾಷ್ಟ್ರ ರಾಜಕೀಯದಲ್ಲಿ ಮಿನುಗಿದ್ದ ಶ್ರೀನಿವಾಸ್​ ಪ್ರಸಾದ್​ ಎಂಬ ನಕ್ಷತ್ರ ಕಣ್ಮರೆಯಾಗಿದೆ. ದಲಿತ ಸೂರ್ಯ ಎಂದೇ ಖ್ಯಾತಿ ಹೊಂದಿದ್ದ ಬಿಜೆಪಿ ಹಿರಿಯ ಮುಖಂಡ ಶ್ರೀನಿವಾಸ್​ ಪ್ರಸಾದ್​ ಬಾರದ ಲೋಕಕ್ಕೆ ಪಯಣಿಸಿದ್ದಾರೆ. ವಯೋಸಹಜ ಕಾಯಿಲೆಯಿಂದ ಏಪ್ರಿಲ್ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಶ್ರೀನಿವಾಸ್ ಅವರು​ ಬಹು ಅಂಗಾಂಗ ವೈಫಲ್ಯದಿಂದ ಚಿಕಿತ್ಸೆಗೆ ಸ್ಪಂದಿಸದೆ ನಿಧನರಾಗಿದ್ದರು. ಇಂದು ಮೈಸೂರಿನಲ್ಲಿ ಶ್ರೀನಿವಾಸ್​ ಪ್ರಸಾದ್​ ಅಂತ್ಯಕ್ರಿಯೆ ನೆರವೇರಿಲಿದೆ.

ಸಂಸದ ಶ್ರೀನಿವಾಸ್ ಪ್ರಸಾದ್ ಅವರ ಅಂತ್ಯ ಸಂಸ್ಕಾರ ಇಂದು ಮೈಸೂರಿನ ಮಾನಂದವಾಡಿ ರಸ್ತೆ ಬಳಿ ನಡೆಯಲಿದ್ದು, ಬೌದ್ಧ ಧರ್ಮದ ವಿಧಿವಿಧಾನದಂತೆ ಅಂತ್ಯಸಂಸ್ಕಾರ ನರವೇರಲಿದೆ. ಅಶೋಕ್ ಪುರಂ ಮೂಲಕ ಸಿಲ್ಕ್ ಫ್ಯಾಕ್ಟರಿ ಸರ್ಕಲ್​​ನ ಡಾ.ಅಂಬೇಡ್ಕರ್ ಟ್ರಸ್ಟ್​ವರೆಗೆ ಪಾರ್ಥೀವ ಶರೀರದ ಮೆರವಣಿಗೆ ಜರುಗಲಿದೆ. ಇನ್ನು ಮೈಸೂರು, ಚಾಮರಾಜನಗರ ಜಿಲ್ಲೆಯ ಸ್ಕೂಲ್​​, ಕಾಲೇಜುಗಳಿಗೆ ಸರ್ಕಾರ ರಜೆ ಘೋಷಿಸಿದೆ. ನಿನ್ನೆಯಿಂದ ಶ್ರೀನಿವಾಸ್​ ಪ್ರಸಾದ್​ ಅಂತಿಮ ದರ್ಶನಕ್ಕೆ ಗಣ್ಯರ ದಂಡೇ ಹರಿದು ಬಂದಿದೆ.

ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್​​​​​​​​ ಮೈಸೂರಿನ ಅಶೋಕಪುರಂ ಸರ್ಕಾರಿ ಶಾಲೆ ಆವರಣದಲ್ಲಿ ಶ್ರೀನಿವಾಸ್​ ಪ್ರಸಾದ್​ ಅಂತಿಮ ನಮನ ಸಲ್ಲಿಸಿದ್ರು. ಶ್ರೀನಿವಾಸ್ ಪ್ರಸಾದ್​ಗೆ ಅಂತಿಮ ದರ್ಶನ ಪಡೆದು ಬಳಿಕ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ರು. ರಾಜ್ಯಕಂಡ ಮೇರು ರಾಜಕಾರಣಿಯನ್ನು ನಾವು ಕಳೆಸುಕೊಂಡಿದ್ದೇವೆ. ದಮನಿತರ ಪರವಾದ ಧ್ವನಿ ಶ್ರೀನಿವಾಸ್​ ಪ್ರಸಾದ್​ ನಿಧನ ನಾಡಿಗೆ ದೊಡ್ಡ ನಷ್ಟವಾಗಿದೆ. ಒಬ್ಬ ಸ್ನೇಹಿತನನ್ನ ಕಳೆದುಕೊಂಡು ದುಃಖವಾಗಿದೆ ಎಂದು ಸಿಎಂ ಕಂಬನಿ ಮಿಡಿದರು. ಇನ್ನು ಡಿಸಿಎಂ ಡಿಕೆಶಿ ಕೂಡ ಹಳೇ ನೆನಪುಗಳನ್ನ ಮೆಲುಕು ಹಾಕಿದ್ರು.

ಇದನ್ನೂ ಓದಿ : ಬೆಂಗಳೂರು : ಹೆತ್ತ ಮಗಳನ್ನೇ ಚಾಕುವಿನಿಂದ ಇರಿದು ಬರ್ಬರವಾಗಿ ಕೊ*ಲೆ ಮಾಡಿದ ತಾಯಿ – ಅಸಲಿಗೆ ಆಗಿದ್ದೇನು?

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here