Download Our App

Follow us

Home » ರಾಜ್ಯ » ಅಪಾರ್ಟ್​ಮೆಂಟ್​​ನ ರೂಫ್​ನಲ್ಲಿ ಸಿಲುಕಿದ 7 ತಿಂಗಳ ಕಂದಮ್ಮ : ಸ್ಥಳೀಯರಿಂದ ರೋಚಕ ರಕ್ಷಣೆ, ವಿಡಿಯೋ ವೈರಲ್​..!

ಅಪಾರ್ಟ್​ಮೆಂಟ್​​ನ ರೂಫ್​ನಲ್ಲಿ ಸಿಲುಕಿದ 7 ತಿಂಗಳ ಕಂದಮ್ಮ : ಸ್ಥಳೀಯರಿಂದ ರೋಚಕ ರಕ್ಷಣೆ, ವಿಡಿಯೋ ವೈರಲ್​..!

ಚೆನ್ನೈ : ತಮಿಳುನಾಡಿನ ಅಪಾರ್ಟ್​ಮೆಂಟ್​​ ಒಂದರ ನಾಲ್ಕನೇ ಮಹಡಿಯಲ್ಲಿ ತಾಯಿ ಮಗುವನ್ನು ಆಟವಾಡಿಸುತ್ತಿದ್ದಾಗ ಆಯತಪ್ಪಿ 7 ತಿಂಗಳ ಮಗ ಕೆಳಕ್ಕೆ ಜಾರಿದೆ. ಅದೃಷ್ಟವಶಾತ್​​​ ಮಗು ಕಿಟಕಿಯ ರೂಫ್​ ಮೇಲೆ ಬಿದ್ದು ಜಾರುತ್ತಿದ್ದಾಗ ಸ್ಥಳೀಯರು ಹರಸಾಹಸಪಟ್ಟು ಮಗುವನ್ನು ರಕ್ಷಣೆ ಮಾಡಿದ್ದಾರೆ. ಚೆನ್ನೈಯ ತಿರುಮಲೈವೋಯಲ್​​ನಲ್ಲಿ ನಡೆದ ಈ ಘಟನೆಯ ದೃಶ್ಯ ಭಾರೀ ವೈರಲ್​ ಆಗಿದೆ.

ತಾಯಿ ತನ್ನ ಮಗುವನ್ನು ಆಟವಾಡಿಸುತ್ತಿದ್ದಾಗ ಆಕಸ್ಮಿಕವಾಗಿ ಕೈಯಿಂದ ಜಾರಿ ಮಗು ರೂಫ್​ ಮೇಲೆ ಬಿದ್ದಿದೆ. ತಕ್ಷಣ ಎಚ್ಚೆತ್ತ ತಾಯಿ ಕಿರುಚಿಕೊಂಡು ಅಪಾರ್ಟ್‌ಮೆಂಟ್​​ನಲ್ಲಿದ್ದ ಎಲ್ಲರನ್ನು ಸೇರಿಸಿದ್ದಾರೆ. ಕೂಡಲೇ ಜನರು ಗುಂಪು ಸೇರಿದ್ದಾರೆ. ಈ ವೇಳೆ ಮೊದಲ ಮಹಡಿಯ ಕಿಟಕಿ ಮೂಲಕ ಒಬ್ಬರು ಮಗುವನ್ನ ರಕ್ಷಣೆ ಮಾಡಲು ಮುಂದಾಗುತ್ತಾರೆ. ಆದರೆ ಆಗಲಿಲ್ಲ. ತಕ್ಷಣವೇ ಇನ್ನೊಬ್ಬ ವ್ಯಕ್ತಿ ಬಂದು ಮಗುವನ್ನ ಕೈಯಿಂದ ಹಿಡಿದು ನಿಧಾನವಾಗಿ ಮೇಲಿನಿಂದ ಕೆಳಕ್ಕೆ ಇಳಿಸಿಕೊಂಡಿದ್ದಾರೆ. ಹೀಗಾಗಿ ಮಗು ಸುರಕ್ಷಿತವಾಗಿ ತಾಯಿ ಮಡಿಲು ಸೇರಿದೆ.

ಈ ಮಗುವನ್ನು ರಕ್ಷಣೆ ಮಾಡುವಾಗ ಎಲ್ಲಿ ಕೆಳಕ್ಕೆ ಜಾರಿ ಬೀಳುತ್ತೋ ಎಂದು ನೆಲ ಮಹಡಿಯಲ್ಲಿ ಸ್ಥಳೀಯರು ದೊಡ್ಡ ದೊಡ್ಡ ಹೊದಿಕೆಗಳನ್ನು ಹಿಡಿದು ನಿಂತಿದ್ದರು. ಅಲ್ಲದೇ ಬೆಡ್​ ಅನ್ನು ನೆಲಕ್ಕೆ ಹಾಕಿದ್ದರು. ಆದರೆ ಸದ್ಯ ಆ ಮಗುವನ್ನ ಕಿಟಕಿ ಮೂಲಕ ರಕ್ಷಣೆ ಮಾಡಲಾಯಿತು. ಈ ಮಗುವಿನ ರಕ್ಷಣೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗ್ತಿದೆ.

ಇದನ್ನೂ ಓದಿ : ಬಿಜೆಪಿ ಹಿರಿಯ ನಾಯಕ ಶ್ರೀನಿವಾಸ ಪ್ರಸಾದ್ ನಿಧನಕ್ಕೆ ಪ್ರಧಾನಿ ಮೋದಿ, ಮಾಜಿ ಪ್ರಧಾನಿ ಹೆಚ್‌ಡಿಡಿ ಸಂತಾಪ..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here