ಬೆಂಗಳೂರು : ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸೂಕ್ತ ದಾಖಲೆಯಿಲ್ಲದೆ ಸಾಗಿಸುತ್ತಿದ್ದ ಹಣ, ಮದ್ಯ, ಚಿನ್ನಾಭರಣ ಹಾಗೂ ಉಚಿತ ಉಡುಗೊರೆಗಳನ್ನು ಎಲೆಕ್ಷನ್ ಆಯೋಗ ಸೀಜ್ ಮಾಡುತ್ತಿದೆ. ಎಲೆಕ್ಷನ್ ಇತಿಹಾಸದಲ್ಲೇ ರೆಕಾರ್ಡ್ ಬ್ರೇಕ್ ಆಗಿದೆ.
75 ವರ್ಷದಲ್ಲೇ ಈ ಬಾರಿಯ ಎಲೆಕ್ಷನ್ ಆಯೋಗದ ಅಖಾಡದಲ್ಲಿ ಅತೀ ಹೆಚ್ಚು ಹಣ, ಆಭರಣ ಸೀಜ್ ಆಗಿದ್ದು, 6 ತಿಂಗಳಲ್ಲಿ 12 ಸಾವಿರ ಕೋಟಿ ಮೌಲ್ಯದ ವಸ್ತುಗಳನ್ನು ಸೀಜ್ ಮಾಡಲಾಗಿದೆ. ಮಾರ್ಚ್ನಲ್ಲೇ 4,650 ಕೋಟಿ ಮೌಲ್ಯದ ವಸ್ತುಗಳು ವಶಕ್ಕೆ ಪಡೆದಿದ್ದು, ಮಾರ್ಚ್ 1 ರ ನಂತರ ಈವರೆಗೆ 100 ಕೋಟಿ ಹಣ ಸೀಜ್ ಆಗಿದೆ.
2024ರಲ್ಲಿ ಈವರೆಗೆ 395 ಕೋಟಿ ನಗದು ವಶಕ್ಕೆ ಪಡೆದಿದ್ದು, 2019ರಲ್ಲಿ ಒಟ್ಟಾರೆ 844 ಕೋಟಿ ನಗದು ಪತ್ತೆಯಾಗಿತ್ತು. ಈ ಬಾರಿ ಏಪ್ರಿಲ್ 1ರವರೆಗೆ 489 ಕೋಟಿ ಮೌಲ್ಯದ ಲಿಕ್ಕರ್ ವಶ ಪಡಿಸಿಕೊಂಡಿದ್ದಾರೆ. 2019ರಲ್ಲಿ ಒಟ್ಟಾರೆ 304 ಕೋಟಿ ಮೌಲ್ಯದ ಮದ್ಯ ಸಿಕ್ಕಿತ್ತು. ಏಪ್ರಿಲ್ 1ರವರೆಗೆ 2068 ಕೋಟಿ ಮೌಲ್ಯದ ಡ್ರಗ್ಸ್, 2019ರಲ್ಲಿ ಒಟ್ಟಾರೆ ಸಿಕ್ಕಿದ್ದು 1279 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ.
ಏಪ್ರಿಲ್ 13ರವರೆಗೆ 562 ಕೋಟಿ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿದ್ದು, 2019ರಲ್ಲಿ 987 ಕೋಟಿ ಮೌಲ್ಯದ ಚಿನ್ನಾಭರಣ ಪತ್ತೆಯಾಗಿತ್ತು. ಈ ಬಾರಿ ಉಚಿತ ಉಡುಗೊರೆಯಲ್ಲೂ 2024ರ ಚುನಾವಣೆ ದಾಖಲೆ ಬರೆಯುತ್ತಿದೆ. ಏಪ್ರಿಲ್ 13 ರವರೆಗೆ ಆಯೋಗ 1142 ಉಚಿತ ಉಡುಗೊರೆಗಳನ್ನ ವಶಕ್ಕೆ ಪಡೆದಿದ್ದು, 2019ರಲ್ಲಿ 60 ಕೋಟಿ ಮೌಲ್ಯದ ಉಚಿತ ಉಡುಗೊರೆ ಪತ್ತೆಯಾಗಿತ್ತು.
ರಾಜ್ಯದಲ್ಲಿ ಸಿಕ್ಕಿದ್ದು ಎಷ್ಟು ಗೊತ್ತಾ..?
- 43 ದಿನಗಳಲ್ಲಿ 281 ಕೋಟಿ ಮೌಲ್ಯದ ವಸ್ತುಗಳು ವಶ
- ನಗದು ರೂಪದಲ್ಲಿ ಸಿಕ್ಕಿದ್ದು 35 ಕೋಟಿ
- 1 ಕೋಟಿ 30 ಲಕ್ಷ ಲೀಟರ್ ಮದ್ಯ ವಶ
- ಬರೋಬ್ಬರಿ 124 ಕೋಟಿ ಮೌಲ್ಯದ ಲಿಕ್ಕರ್ ವಶಕ್ಕೆ
- 18.75 ಕೋಟಿ ಮೌಲ್ಯದ ಮಾದಕ ವಸ್ತು ಸೀಜ್
- 41.93 ಕೋಟಿ ಮೌಲ್ಯದ ಚಿನ್ನಾಭರಣ ವಶಕ್ಕೆ
- 60.86 ಕೋಟಿ ಮೌಲ್ಯದ ಉಚಿತ ಉಡುಗೊರೆ ಸೀಜ್
- ರಾಜಸ್ಥಾನ- 778 ಕೋಟಿ, ಗುಜರಾತ್ – 605 ಕೋಟಿ
- ತಮಿಳುನಾಡು – 460 ಕೋಟಿ, ಮಹಾರಾಷ್ಟ್ರ – 431 ಕೋಟಿ
- ಪಂಜಾಬ್ -311 ಕೋಟಿ, ಆಂಧ್ರ ಪ್ರದೇಶ – 125 ಕೋಟಿ
- ತೆಲಂಗಾಣ – 212 ಕೋಟಿ ಮೌಲ್ಯದ ವಸ್ತು, ಹಣ ವಶ
ಇದನ್ನೂ ಓದಿ : ಕೋಮುಲ್ ನೇಮಕಾತಿ ಹಗರಣ – FIR ದಾಖಲಿಸಿ ಸ್ವತಂತ್ರ ತನಿಖೆ ನಡೆಸುವಂತೆ ED ಮನವಿ..!