ಮಂಗಳೂರು : ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್ಶೋ ಮುಗಿದ ಬಳಿಕ ಯುವಕರ ಮಧ್ಯೆ ಹೊಡೆದಾಟ ನಡೆದಿರುವ ಘಟನೆ ಬಂಟ್ಸ್ ಹಾಸ್ಟೆಲ್ ಬಳಿ ನಡೆದಿದೆ. ಮಹಿಳೆಯೊಬ್ಬರಿಗೆ ಮೊಬೈಲ್ ನಂಬರ್ ನೀಡಿದ ವಿಚಾರದಲ್ಲಿ ಗಲಾಟೆಯಾಗಿದ್ದು, ಮೋದಿ ರೋಡ್ ಶೋ ವೀಕ್ಷಿಸಲು ಬಂದಿದ್ದ ಮಹಿಳೆಗೆ ಓರ್ವ ಯುವಕ ಚೀಟಿಯಲ್ಲಿ ತನ್ನ ಮೊಬೈಲ್ ನಂಬರ್ ಬರೆದು ನೀಡಿದ್ದ.
ಈ ವಿಷಯ ಗೊತ್ತಾಗಿ ಮಹಿಳೆಯ ಗಂಡ ಯುವಕನಿಗೆ ಧರ್ಮದೇಟು ನೀಡಿದ್ದಾನೆ. ಆಗ ಸ್ಥಳದಲ್ಲಿದ್ದ ಯುವಕರ ತಂಡವು ಆರೋಪಿ ಯುವಕನಿಗೆ ಗೂಸ ನೀಡಿದೆ. ಈ ವೇಳೆಯೆ ಮೊಬೈಲ್ ಕಿತ್ತುಕೊಂಡು ಮಹಿಳೆಯ ಗಂಡ ಯುವಕನಿಗೆ ತರಾಟೆ ತೆಗೆದುಕೊಂಡಿದ್ದಾರೆ. ಆ ಬಳಿಕ ಸ್ಥಳದಲ್ಲಿದ್ದ ಇತರ ಸಾರ್ವಜನಿಕರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
Post Views: 157