Download Our App

Follow us

Home » Uncategorized » ಬಾಬಾಬುಡನ್​ಗಿರಿ ಕೇಸ್ ರೀ ಓಪನ್ ಮಾಹಿತಿ ಸುಳ್ಳು : ಸಿದ್ದರಾಮಯ್ಯ..!

ಬಾಬಾಬುಡನ್​ಗಿರಿ ಕೇಸ್ ರೀ ಓಪನ್ ಮಾಹಿತಿ ಸುಳ್ಳು : ಸಿದ್ದರಾಮಯ್ಯ..!

ಬೆಂಗಳೂರು : ಬಾಬಾಬುಡನ್ ಗಿರಿ ಕೇಸ್ ರೀ ಓಪನ್ ಬಗ್ಗೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಕೇಸ್ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.

ಕೆಲವು ದೃಶ್ಯ ಮಾಧ್ಯಮಗಳಲ್ಲಿ ಬಾಬಾಬುಡನ್ ಗಿರಿಯಲ್ಲಿ ಗೋರಿ ದ್ವಂಸ ಪ್ರಕರಣವನ್ನು ರೀ ಓಪನ್ ಮಾಡಲಾಗಿದೆ ಎನ್ನುವ ಸುದ್ದಿ ಪ್ರಸಾರವಾಗುತ್ತಿದೆ. ಇದು ಅಪ್ಪಟ ತಪ್ಪು ಮಾಹಿತಿ ಹಾಗೂ ಸುಳ್ಳಿನಿಂದ ಕೂಡಿದ್ದಾಗಿದೆ.

2017 ರಲ್ಲಿ ದಾಖಲಾಗಿದ್ದ ಪ್ರಕರಣದ ಸಹಜ ಕಾನೂನು ಪ್ರಕ್ರಿಯೆಯ ಭಾಗವಾಗಿ ಆರೋಪಿಗಳಿಗೆ ನ್ಯಾಯಾಲಯದ ಸಮನ್ಸ್ ಅಷ್ಟೆ ಜಾರಿ ಆಗಿದೆ.

2017 ರಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ 2020 ರ ಮಾರ್ಚ್ 19 ರಂದು ವಿಚಾರಣೆಗೆ ಅನುಮತಿಗಾಗಿ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಅದರ ಆಧಾರದಲ್ಲಿ 2023 ರ ಸೆಪ್ಟೆಂಬರ್ 7 ರಂದು ಸರ್ಕಾರ ಅನುಮತಿ ನೀಡಿತ್ತು.

2023 ರ ಅಕ್ಟೋಬರ್ 24 ರಂದು ಆರೋಪಿಗಳ ವಿರುದ್ಧ ಆರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಬಳಿಕ ಈ ಕಾನೂನು ಪ್ರಕ್ರಿಯೆಯ ಮುಂದುವರೆದ ಭಾಗವಾಗಿ ನ್ಯಾಯಾಲಯದಿಂದ ಸಮನ್ಸ್ ಜಾರಿಯಾಗಿತ್ತು.

ಜನವರಿ 8 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ನ್ಯಾಯಾಲಯದಿಂದಲೇ ಸಮನ್ಸ್ ಜಾರಿಯಾಗಿದೆ. ಇದಿಷ್ಟೂ ಕೂಡ ಯಾವುದೇ ಒಂದು ಪ್ರಕರಣದಲ್ಲಿ ಸಹಜವಾಗಿ ನಡೆಯುವ ಕಾನೂನು ಪ್ರಕ್ರಿಯೆಯಾಗಿದೆ.

ಆದ್ದರಿಂದ ಪ್ರಕರಣದ ಮರು ತನಿಖೆಗೆ ಸರ್ಕಾರ ಮುಂದಾಗಿದೆ ಎನ್ನುವುದು ತಪ್ಪು ಮತ್ತು ದುರುದ್ದೇಶಪೂರಿತ ಸುಳ್ಳು ಸಂಗತಿಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ : ದತ್ತಪೀಠ ಹೋರಾಟಗಾರರ ಮೇಲಿನ ಕೇಸ್ ರೀ-ಓಪನ್!

Leave a Comment

DG Ad

RELATED LATEST NEWS

Top Headlines

ಧಾರವಾಡದಲ್ಲಿ ಜಿಮ್‌ಗೆ ನುಗ್ಗಿದ ಕೋತಿ – ಎದ್ನೋ ಬಿದ್ನೋ ಓಡಿದ ಬಾಡಿ ಬಿಲ್ಡರ್ಸ್.. ದೃಶ್ಯ ಸಿಸಿಟಿವಿಯಲ್ಲಿ ಸೆರೆ..!

ಧಾರವಾಡ : ಕೋತಿಯೊಂದು ಜಿಮ್‌ಗೆ  ನುಗ್ಗಿದ ಘಟನೆ ಧಾರವಾಡದ ಸೈದಾಪುರದ ಕಿಂಗ್‌ಡಮ್ ಜಿಮ್​​ನಲ್ಲಿ ನಡೆದಿದೆ. ಕೋತಿ ಜಿಮ್‌ಗೆ ಬಂದ ಪರಿಣಾಮ ಯುವಕರು ಹೌಹಾರಿ ಹೊರ ಬಂದಿದ್ದಾರೆ. ಮೊದಲ‌

Live Cricket

Add Your Heading Text Here