Download Our App

Follow us

Home » ಮೆಟ್ರೋ » ಸಿಲಿಕಾನ್​ ಸಿಟಿ ಬೆಂಗಳೂರಲ್ಲಿ ‘ಕಾಲರಾ’ ಟೆನ್ಷನ್ : ನಗರದಲ್ಲಿ ಮತ್ತೊಂದು ಕಾಲರಾ ಪ್ರಕರಣ ಪತ್ತೆ..!

ಸಿಲಿಕಾನ್​ ಸಿಟಿ ಬೆಂಗಳೂರಲ್ಲಿ ‘ಕಾಲರಾ’ ಟೆನ್ಷನ್ : ನಗರದಲ್ಲಿ ಮತ್ತೊಂದು ಕಾಲರಾ ಪ್ರಕರಣ ಪತ್ತೆ..!

ಬೆಂಗಳೂರು : ಬಿಸಿಲಿನ ಬೇಗೆಯ ನಡುವೆ ಇದೀಗ ರಾಜಧಾನಿ ಬೆಂಗಳೂರಿನಲ್ಲಿ ಕಾಲರಾ ರೋಗ ಜನರ ನಿದ್ದೆಗೆಡಿಸಿದೆ. ಕಳೆದೆರಡು ದಿನಗಳ ಹಿಂದೆಯಷ್ಟೇ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಹಾಸ್ಟೆಲ್‌ನಲ್ಲಿದ್ದ ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಇದರಲ್ಲಿ ಕೆಲವು ವಿದ್ಯಾರ್ಥಿನಿಯರಿಗೆ ಕಾಲರಾ ಇರುವುದು ದೃಢವಾಗಿದೆ.

ಇದೀಗ ಇದರ ಬೆನ್ನಲ್ಲೇ ಸಿಲಿಕಾನ್​ ಸಿಟಿ ಬೆಂಗಳೂರಿನ ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ ಮತ್ತೊಂದು ಕಾಲರಾ ಪ್ರಕರಣ ಪತ್ತೆಯಾಗಿದೆ. ಬೊಮ್ಮನಹಳ್ಳಿಯ ವ್ಯಾಪ್ತಿಯ ಕಾರು ಡ್ರೈವರ್​ಗೆ ವಾಂತಿ, ಬೇದಿಯಾದ  ಹಿನ್ನಲೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲು ಮಾಡಿದ ಬಳಿಕ ಮಲದ ಮಾದರಿ ಸ್ಯಾಂಪಲ್ ಲ್ಯಾಬ್​ಗೆ ರವಾನಿ ಮಾಡಲಾಗಿತ್ತು. ಈ ಕಲ್ಚರಲ್ ರಿಪೋರ್ಟ್​ನಲ್ಲಿ ಕಾರು ಡ್ರೈವರ್​ಗೆ ಕಾಲರಾ ಇರುವುದು ದೃಢವಾಗಿದೆ. ಸದ್ಯ ವ್ಯಕ್ತಿಗೆ ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆ ನೀಡಲಾಗುತ್ತಿದೆ.

ಕಾಲರಾ ರೋಗದ ಲಕ್ಷಣಗಳೇನು..?

  • ವಿಪರೀತವಾಗಿ ಬಾಯಾರಿಕೆ ಕಾಣಿಸುತ್ತದೆ
  • ಬಾಯಿ ಮತ್ತು ಕಣ್ಣುಗಳು ಪದೇ-ಪದೇ ಒಣಗುತ್ತವೆ
  • ಹೃದಯ ಬಡಿತ ಪ್ರಮಾಣ ಹೆಚ್ಚಳ-ಕಡಿಮೆ ಆಗುತ್ತೆ
  • ಮಾಂಸ ಖಂಡಗಳಲ್ಲಿ ಸೆಳೆತ ಕಾಣಿಸುತ್ತದೆ
  • ವಿಪರೀತವಾಗಿ ಸುಸ್ತು ಕಾಣಿಸಿಕೊಳ್ಳುತ್ತದೆ
  • ಅತಿಯಾದ ನಿದ್ದೆ, ತಲೆನೋವು ಕಾಣಿಸುತ್ತದೆ
  • ಸೋಂಕು ಹೆಚ್ಚಾದರೆ ವಾಂತಿ, ಬೇಧಿಯೂ ಕಾಣಿಸುತ್ತದೆ
  • ಕಾಲರಾ ತಡೆಯಲು :
  • ಕೈ-ಕಾಲು ಸ್ವಚ್ಛವಾಗಿಟ್ಟುಕೊಳ್ಳಬೇಕು
  • ಬಾಟಲಿ ನೀರು, ಕುದಿಸಿ ಆರಿಸಿದ ನೀರು ಕುಡಿಯಬೇಕು
  • ಬೇಯಿಸದೇ ಇರುವ ಹಸಿ ಆಹಾರ, ಶೆಲ್​ ಫಿಶ್​ ತಿನ್ನಬೇಡಿ
  • ಹಸಿ ತರಕಾರಿ, ಹಣ್ಣು ಸೇವನೆ ಮಾಡಿ
  • ಸುಲಿದು ತಿನ್ನುವ ಹಣ್ಣು, ತರಕಾರಿ ನೀವೇ ಸುಲಿದುಕೊಳ್ಳಿ

ಇದನ್ನೂ ಓದಿ : ಬೆಳಗಾವಿಯಲ್ಲಿ ಟ್ರ್ಯಾಕ್ಟರ್​ ಹಾಗೂ ಗೂಡ್ಸ್ ವಾಹನದ ನಡುವೆ ಭೀಕರ ಅಪಘಾತ : ರೈತ ಸ್ಥಳದಲ್ಲೇ ಸಾ*ವು..!

Leave a Comment

DG Ad

RELATED LATEST NEWS

Top Headlines

ವಿಕ್ಕಿ ಯಾವಾಗಲೂ ಹೇಗಿರ್ತಾರೆ ಗೊತ್ತಾ? – ದಾಂಪತ್ಯದ ಸೀಕ್ರೆಟ್ ರಿವೀಲ್ ಮಾಡಿದ ಕತ್ರಿನಾ ಕೈಫ್..!

ಮುಂಬೈ : ಬಾಲಿವುಡ್​ನ​ ಕ್ಯೂಟ್​ ಕಪಲ್​ಗಳಲ್ಲಿ ಕತ್ರಿನಾ ಕೈಫ್​​ ಮತ್ತು ವಿಕ್ಕಿ ಕೌಶಲ್​ ಕೂಡ ಒಬ್ಬರು. 2021ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಮುದ್ದಾದ ಜೋಡಿಯನ್ನು ಬಿಗ್

Live Cricket

Add Your Heading Text Here