Download Our App

Follow us

Home » ರಾಜಕೀಯ » ಮೂರು ತಿಂಗಳ ಸಸ್ಪೆನ್ಸ್​ಗೆ ಬ್ರೇಕ್ : ಮಂಡ್ಯ ಚುನಾವಣೆ ಕಣದಿಂದ ಹಿಂದೆ ಸರಿದ ಸುಮಲತಾ..!

ಮೂರು ತಿಂಗಳ ಸಸ್ಪೆನ್ಸ್​ಗೆ ಬ್ರೇಕ್ : ಮಂಡ್ಯ ಚುನಾವಣೆ ಕಣದಿಂದ ಹಿಂದೆ ಸರಿದ ಸುಮಲತಾ..!

ಮಂಡ್ಯ : ಮಂಡ್ಯ ಲೋಕಸಭಾ ಕ್ಷೇತ್ರ ಜೆಡಿಎಸ್ ಪಾಲಾಗಿದಕ್ಕೆ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸುಮಲತಾ ಅಂಬರೀಶ್ ಅವರಿಗೆ ನಿರಾಸೆಯಾಗಿತ್ತು. ಹಾಗಾಗಿ ಸುಮಲತಾ ಅವರ ಮುಂದಿನ ನಡೆ ಏನು ಎಂಬ ಪ್ರಶ್ನೆ ಎಲ್ಲರಲ್ಲೂ ಹುಟ್ಟಿಕೊಂಡಿತ್ತು. ಇದೀಗ ಮೂರು ತಿಂಗಳ ಸಸ್ಪೆನ್ಸ್​ಗೆ ಬ್ರೇಕ್ ಬಿದ್ದಿದ್ದು, ಸುಮಲತಾ ಅವರು ಮಂಡ್ಯ ಚುನಾವಣೆ ಕಣದಿಂದ ಹಿಂದೆ ಸರಿದಿದ್ದಾರೆ. ಮಂಡ್ಯದಲ್ಲಿ ನಡೆದ ಬೆಂಬಲಿಗರ ಸಭೆಯಲ್ಲಿ ಸುಮಲತಾ ಅವರು ಬಿಜೆಪಿಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ.

ಈ ಬಾರಿಯ ಲೋಕಸಭೆ ಚುನಾವಣಾ ಕಣದಿಂದ ಸುಮಲತಾ ಅವರು ಹಿಂದೆ ಸರಿದಿದ್ದಾರೆ. ನನಗೆ ಗೌರವ ಇಲ್ಲದ ಕಾಂಗ್ರೆಸ್​​ಗೆ ಹೋಗಲು ಹೇಳಬೇಡಿ, ಮಂಡ್ಯ ಸೊಸೆ ಅನ್ನೋದು ಶಾಶ್ವತ. ಈ ಚುನಾವಣೆಯಲ್ಲಿ ನಾನು ಸ್ಪರ್ಧಿಸುತ್ತಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

ಹಾಗೆಯೇ, ನಾನು ಆಕಸ್ಮಿಕವಾಗಿ ರಾಜಕೀಯ ಪ್ರವೇಶ ಮಾಡಿದೆ, ಐದು ವರ್ಷಗಳ ಹಿಂದೆ ನನಗೆ ಐತಿಹಾಸಿಕ ಗೆಲುವು ನೀಡಿದ್ರಿ. ನನಗೆ ಐತಿಹಾಸಿಕ ಗೆಲುವು ಕೊಡುಗೆಯಾಗಿ ಕೊಟ್ಟಿದ್ದೀರಿ, ಜನಸಾಮಾನ್ಯರ ಸಮಸ್ಯೆಗಳ ಪರ ನಾನು ನಿಂತಿದ್ದೇನೆ. ಜಿಲ್ಲೆ ಅಭಿವೃದ್ಧಿ ಮಾಡುವುದಷ್ಟೇ ನನ್ನ ಮನಸ್ಸಿನಲ್ಲಿದ್ದಿದ್ದು. ಕೆಆರ್​ಎಸ್​ ಡ್ಯಾಂ ಸಂರಕ್ಷಣೆ, ಅಕ್ರಮ ಗಣಿಗಾರಿಕೆ ವಿರುದ್ಧ ಯುದ್ಧವನ್ನೇ ಮಾಡಿದ್ದೇನೆ ಎಂದು ಹೇಳಿದ್ದಾರೆ.

2019ರಲ್ಲಿ ಅದೊಂದು ಬೇರೆ ತರಹದ ಸವಾಲಾಗಿತ್ತು. ಈಗ ಬದಲಾದ ಪರಿಸ್ಥಿತಿಯಲ್ಲಿ ಮತ್ತೊಂದು ಸವಾಲು ಎದುರಿಸುತ್ತಿದ್ದೇನೆ. ಕೊನೆಗಳಿಗೆವರೆಗೂ ಬಿಜೆಪಿ ಟಿಕೆಟ್ ಉಳಿಸಿಕೊಳ್ಳಲು ಹೋರಾಟ ಮಾಡಿದೆ. ಬೆಂಗಳೂರು ಉತ್ತರ, ಮೈಸೂರು, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ನಿಲ್ಲಲು ಹೇಳಿದರು. ನನಗೆ ಬೇರೆ ಬೇರೆ ಕ್ಷೇತ್ರದ ಆಫರ್​ ನೀಡಿದರು. ನಾನು ಮಂಡ್ಯ ಬಿಟ್ಟು ಎಲ್ಲೂ ಹೋಗುವುದಿಲ್ಲ. ಗೆದ್ದರು, ಸೋತರು ಮಂಡ್ಯ ಬಿಟ್ಟು ಎಲ್ಲೂ ಹೋಗಲ್ಲ ಎಂದರು.

ಇದನ್ನೂ ಓದಿ : ಚಿಕ್ಕಬಳ್ಳಾಪುರ ಬಂಡಾಯಕ್ಕೆ ಮದ್ದು ಅರೆದ ಅಮಿತ್​ ಶಾ : ಕೊನೆಗೂ ಸುಧಾಕರ್​​ ಪರ ಕೆಲಸ ಮಾಡಲು ಒಪ್ಪಿದ ಶಾಸಕ ವಿಶ್ವನಾಥ್​​..!

Leave a Comment

DG Ad

RELATED LATEST NEWS

Top Headlines

15 ಹೀರೋಯಿನ್​ಗಳ ವಿರುದ್ಧ ತನಿಖೆ ಮಾಡಲು ಸರ್ಕಾರಕ್ಕೆ ರಹಸ್ಯ ಪತ್ರ.. ಸ್ಯಾಂಡಲ್​ವುಡ್​​ ಸೆನ್ಸೇಷನ್ ನ್ಯೂಸ್..!

ಚಿತ್ರರಂಗದಲ್ಲಿ ಮತ್ತೆ ಮೀಟೂ ಚರ್ಚೆ ಜೋರಾಗಿದೆ. ಮಲಯಾಳಂ ಸಿನಿಮಾ ಇಂಡಸ್ಟ್ರಿ ಕುರಿತ ಹೇಮಾ ಸಮಿತಿ ವರದಿ ಬಳಿಕ ಇಂಡಸ್ಟ್ರಿಯಲ್ಲಿ ಅಲ್ಲೋಲ-ಕಲ್ಲೋಲವೇ ಆಗಿದೆ. ಅನೇಕ ನಟಿಯರು ತನಗಾದ ಅವಮಾನದ

Live Cricket

Add Your Heading Text Here