Download Our App

Follow us

Home » ರಾಷ್ಟ್ರೀಯ » ದೆಹಲಿ ಸಿಎಂ ಕೇಜ್ರಿವಾಲ್​ಗೆ 15 ದಿನ ನ್ಯಾಯಾಂಗ ಬಂಧನ – ತಿಹಾರ್​ ಜೈಲಿಗೆ ಶಿಫ್ಟ್..!

ದೆಹಲಿ ಸಿಎಂ ಕೇಜ್ರಿವಾಲ್​ಗೆ 15 ದಿನ ನ್ಯಾಯಾಂಗ ಬಂಧನ – ತಿಹಾರ್​ ಜೈಲಿಗೆ ಶಿಫ್ಟ್..!

ನವದೆಹಲಿ : ಮದ್ಯ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ಕೋರ್ಟ್‌ 15 ದಿನ ನ್ಯಾಯಾಂಗ ಬಂಧನ ವಿಧಿಸಿದೆ. ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಅರವಿಂದ್‌ ಕೇಜ್ರಿವಾಲ್‌ ಅವರನ್ನು ED ಇಂದು ದೆಹಲಿಯ ರೋಸ್‌ ಅವೆನ್ಯೂ ಕೋರ್ಟ್‌ಗೆ ಹಾಜರುಪಡಿಸಿತ್ತು. ಅರ್ಜಿ ವಿಚಾರಣೆ ವೇಳೆ ED ನಮಗೆ ಮುಂದಿನ ವಿಚಾರಣೆ ನಡೆಸುವವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಎಂದು ಮನವಿ ಮಾಡಿತು.

ನಾವು ಹೆಚ್ಚಿನ ರಿಮಾಂಡ್ ಕೇಳುತ್ತಿಲ್ಲ. ಸೆಂಥಿಲ್ ಬಾಲಾಜಿ ಪ್ರಕರಣದಲ್ಲಿ ಸುಪ್ರೀಂ ತೀರ್ಪಿನ ಪ್ರಕಾರ ಹೆಚ್ಚಿನ ಕಸ್ಟಡಿ ಕೇಳುವ ಹಕ್ಕಿಗೆ ಒಳಪಟ್ಟು ನಾವು ನ್ಯಾಯಾಂಗ ಬಂಧನವನ್ನು ಕೇಳುತ್ತಿದ್ದೇವೆ ಎಂದು ED ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌ವಿ ರಾಜು ಮನವಿ ಮಾಡಿದರು.

ED ಮನವಿಯನ್ನು ಪುರಸ್ಕರಿಸಿದ ಕೋರ್ಟ್‌ ಕೇಜ್ರಿವಾಲ್‌ಗೆ ಏಪ್ರಿಲ್‌ 15ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಪ್ರಕಟಿಸಿದೆ. ಕಳೆದ ಗುರುವಾರ ಕೋರ್ಟ್‌ ಅರವಿಂದ ಕೇಜ್ರಿವಾಲ್‌ ಅವರನ್ನು 4 ದಿನ ಇಡಿ ಕಸ್ಟಡಿಗೆ ನೀಡಿತ್ತು. ಸದ್ಯ ಇಡಿ ಕಸ್ಟಡಿಯಲ್ಲಿ ಇರುವ ಕೇಜ್ರಿವಾಲ್‌ ಇನ್ನು ಮುಂದೆ ತಿಹಾರ್‌ ಜೈಲಿಗೆ ಶಿಫ್ಟ್‌ ಆಗಲಿದ್ದಾರೆ.

ಇದನ್ನೂ ಓದಿ : 15 ವರ್ಷದ ಬಳಿಕ ರಾಜ್ಯದಲ್ಲಿ ವಿದ್ಯುತ್‌ ದರ ಇಳಿಕೆ – ಇಂದಿನಿಂದಲೇ ಜಾರಿ..!

Leave a Comment

DG Ad

RELATED LATEST NEWS

Top Headlines

ರವಿಶಂಕರ್ ಪುತ್ರ ಅದ್ವೈ ನಟನೆಯ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ – ಸಾಥ್ ಕೊಟ್ಟ ಶಿವಣ್ಣ..!

ಬಹುಭಾಷಾ ನಟ ಪಿ. ರವಿಶಂಕರ್​ ಅವರ ಪುತ್ರ ಅದ್ವೈ ಅಭಿನಯದ ಮೊದಲ ಸಿನಿಮಾ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ ಆಗಿದೆ. ಗಣೇಶ ಚತುರ್ಥಿಯ ಶುಭ ದಿನವಾದ ಇಂದು

Live Cricket

Add Your Heading Text Here