Download Our App

Follow us

Home » ಜಿಲ್ಲೆ » ಎಣ್ಣೆ ಕಿಕ್​​ನಲ್ಲಿ ರಾಯಚೂರಿನ ಮೆಡಿಕಲ್​​ ವಿದ್ಯಾರ್ಥಿಗಳ ಮಾರಾಮಾರಿ -ಓರ್ವನ ತಲೆಗೆ ತೀವ್ರ ಗಾಯ..!

ಎಣ್ಣೆ ಕಿಕ್​​ನಲ್ಲಿ ರಾಯಚೂರಿನ ಮೆಡಿಕಲ್​​ ವಿದ್ಯಾರ್ಥಿಗಳ ಮಾರಾಮಾರಿ -ಓರ್ವನ ತಲೆಗೆ ತೀವ್ರ ಗಾಯ..!

ರಾಯಚೂರು :  ಕುಡಿದ ಮತ್ತಿನಲ್ಲಿ ವಿದ್ಯಾರ್ಥಿಗಳು ಕಾಲೇಜು ಕ್ಯಾಂಪಸ್​​ನಲ್ಲೇ ಹೊಡೆದಾಡಿದ ಘಟನೆ ರಾಯಚೂರಿನ ನವೋದಯ ವೈದ್ಯಕೀಯ ಕಾಲೇಜಿನಲ್ಲಿ ನಡೆದಿದೆ. ಘಟನೆಯ ಪರಿಣಾಮ ಒಬ್ಬ ವಿದ್ಯಾರ್ಥಿಯ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ.

ನಿನ್ನೆ ರಾಯಚೂರಿನ ನವೋದಯ ಮೆಡಿಕಲ್ ಕಾಲೇಜ್​ನಲ್ಲಿ ರೀಗೇಲ್ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಪಾರ್ಟಿ ಮುಗಿಸಿಕೊಂಡು ಬಂದ ಬಳಿಕ ಮದ್ಯದ ಅಮಲಿನಲ್ಲಿ ಸ್ಟೂಡೆಂಟ್ಸ್ ಗಳ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದಿದೆ. ದೊಣ್ಣೆ ಹಿಡಿದುಕೊಂಡು ವಿದ್ಯಾರ್ಥಿಗಳು ತಡರಾತ್ರಿ ಬಡಿದಾಡಿಕೊಂಡಿದ್ದಾರೆ.

ವಿದ್ಯಾರ್ಥಿಗಳು ದೊಣ್ಣೆ ಹಿಡಿದುಕೊಂಡು ಬಡಿದಾಡಿಕೊಂಡ ಪರಿಣಾಮ ಒಬ್ಬ ವಿದ್ಯಾರ್ಥಿಯ ತಲೆಗೆ ತೀವ್ರ ಪೆಟ್ಟು ಬಿದ್ದಿದೆ. ತಲೆಗೆ ಪೆಟ್ಟು ಬಿದ್ದ ವಿದ್ಯಾರ್ಥಿಯನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ತಡರಾತ್ರಿ ನಡೆದ ಮೆಡಿಕಲ್​​​​​​ ವಿದ್ಯಾರ್ಥಿಗಳ ಗಲಾಟೆಯಿಂದ ಸಾರ್ವಜನಿಕರಲ್ಲಿ ಆತಂಕಗೊಂಡಿದ್ದಾರೆ.

ಇದನ್ನೂ ಓದಿ : ರಂಗೇರಿದ ಹಾಸನ ಚುನಾವಣಾ ಅಖಾಡ- ಮೊಮ್ಮಗನನ್ನು ಗೆಲ್ಲಿಸಲು ಅಖಾಡಕ್ಕಿಳಿದ ದೇವೇಗೌಡರು..!

Leave a Comment

DG Ad

RELATED LATEST NEWS

Top Headlines

ಬೆಂಗಳೂರಲ್ಲಿ ಕಾರು-ಆಟೋ ನಡುವೆ ಭೀಕರ ಅಪಘಾತ – ಆಟೋ ಚಾಲಕ ದುರ್ಮರಣ..!

ಬೆಂಗಳೂರು : ನಗರದಲ್ಲಿ ಸೆ.6ರ ತಡರಾತ್ರಿ ಕಾರು ಹಾಗೂ ಆಟೋ ನಡುವೆ ಮುಖಾಮುಖಿ ಡಿಕ್ಕಿಯಾಗಿ ಆಟೋ ಚಾಲಕ ಸಾವನ್ನಪಿರುವ ಘಟನೆ ಜ್ಞಾನಭಾರತಿಯ ಮುದ್ದಿನಪಾಳ್ಯದಲ್ಲಿ ನಡೆದಿದೆ. ಕಿರಣ್(32) ಅಪಘಾತದಲ್ಲಿ ಮೃತನಾದ

Live Cricket

Add Your Heading Text Here