Download Our App

Follow us

Home » ಅಪರಾಧ » ಅಪ್ರಾಪ್ತ ಬಾಲಕನ ಕೈಯಲ್ಲಿ ಕಾರು ಕೊಟ್ಟ ಪೊಲೀಸ್ ಅಧಿಕಾರಿ : ಕಾರು ಹರಿದು 4ವರ್ಷದ ಮಗು ಸಾ*ವು..!

ಅಪ್ರಾಪ್ತ ಬಾಲಕನ ಕೈಯಲ್ಲಿ ಕಾರು ಕೊಟ್ಟ ಪೊಲೀಸ್ ಅಧಿಕಾರಿ : ಕಾರು ಹರಿದು 4ವರ್ಷದ ಮಗು ಸಾ*ವು..!

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಇವತ್ತು ಭಯಾನಕ ಘಟನೆ ನಡೆದಿದೆ. ಮನೆ ಮುಂದೆ ಆಟವಾಡುತ್ತಿದ್ದ ಮಗುವಿನ ಮೇಲೆ ಅಪ್ರಾಪ್ತ ಬಾಲಕ ಕಾರು ಹರಿಸಿದ ಘಟನೆ ಬೆಂಗಳೂರಿನ ಕಾಳಪ್ಪ ಲೇಔಟ್​​ನಲ್ಲಿ ನಡೆದಿದೆ. ಮಗುವಿನ ಮೇಲೆ ಕಾರು ಹರಿದ ಪರಿಣಾಮ 4 ವರ್ಷದ ಮಗುವಿನ ದೇಹ ಛಿದ್ರ, ಛಿದ್ರವಾಗಿದೆ. 4 ವರ್ಷದ ಆರವ್ ಮೃತ ಬಾಲಕ.

ಮೃತ ಆರವ್ ಬೆಳಗ್ಗೆ 10.30ರ ಸುಮಾರಿಗೆ ಬೆಂಗಳೂರಿನ ಕಾಳಪ್ಪ ಲೇಔಟ್​​ನಲ್ಲಿ ಮನೆ ಮುಂದೆ ಆಟವಾಡುತ್ತಿದ್ದ. ಈ ವೇಳೆ ಚಿವರಲೆಟ್ ಎಂಜಾಯ್ ಕಾರು ಓಡಿಸುತ್ತಿದ್ದ ಪೊಲೀಸ್ ಅಧಿಕಾರಿಯ ಅಪ್ತಾಪ್ತ ಪುತ್ರ ಮಗುವಿನ ಮೇಲೆ ಕಾರು ಹತ್ತಿಸಿದ್ದಾನೆ. ಅಪ್ತಾಪ್ತ ಬಾಲಕನ ನಿರ್ಲಕ್ಷ್ಯತಕ್ಕೆ 4 ವರ್ಷದ ಮಗು ಸ್ಥಳದಲ್ಲೇ ಮೃತಪಟ್ಟಿದೆ.

ಮಗುವಿನ ಮೃತದೇಹವನ್ನು ಮಣಿಪಾಲ್ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಆಸ್ಪತ್ರೆಯ ಆವರಣದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮಗುವಿನ ಮೇಲೆ ಕಾರು ಹರಿಸಿದ ಅಪ್ರಾಪ್ತ ಬಾಲಕನನ್ನು ಜೀವನ್ ಭೀಮಾನಗರ ಪೊಲೀಸರು ಬಂಧಿಸಿದ್ದಾರೆ.

ಇನ್ನು ಚಿವರಲೆಟ್ ಎಂಜಾಯ್ ಕಾರ್​​ನಲ್ಲಿ ಪೊಲೀಸ್ ಬೋರ್ಡ್ ಇದ್ದು, ಪೊಲೀಸ್ ಅಧಿಕಾರಿಯ ಅಪ್ತಾಪ್ತ ಪುತ್ರನಿಂದ ಈ ಅಪಘಾತ ನಡೆದಿದೆ ಎಂದು ತಿಳಿದು ಬಂದಿದೆ. ಈ ಘಟನೆಯ ಸಂಬಂಧ ಪೊಲೀಸರು ವಾಹನದ ಮಾಲೀಕನ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ : ತುಮಕೂರಿನಲ್ಲಿ ಡೆಡ್ಲಿ ಆ್ಯಕ್ಸಿಡೆಂಟ್ – ಇಬ್ಬರು ಸ್ಥಳದಲ್ಲೇ ಸಾ*ವು..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here