Download Our App

Follow us

Home » ಅಪರಾಧ » ರೇಣುಕಾಸ್ವಾಮಿ ಮರ್ಡರ್​​ಗೆ ಬರೋಬ್ಬರಿ 30 ಲಕ್ಷ ಡೀಲ್ : ಪ್ರಭಾವಿ ರಾಜಕಾರಣಿ ಬುಡಕ್ಕೂ ಬರುತ್ತಾ ಈ ಕೇಸ್​?

ರೇಣುಕಾಸ್ವಾಮಿ ಮರ್ಡರ್​​ಗೆ ಬರೋಬ್ಬರಿ 30 ಲಕ್ಷ ಡೀಲ್ : ಪ್ರಭಾವಿ ರಾಜಕಾರಣಿ ಬುಡಕ್ಕೂ ಬರುತ್ತಾ ಈ ಕೇಸ್​?

ಬೆಂಗಳೂರು : ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಮರ್ಡರ್​​ ಕೇಸ್​​ನಲ್ಲಿ ದರ್ಶನ್​​​ನ್ನು ಬಚಾವ್​ ಮಾಡಲು 30 ಲಕ್ಷ ಡೀಲ್​​​​ ಆಗಿತ್ತು. ಒಂದಲ್ಲಾ.. ಎರಡಲ್ಲಾ.. ಮೂರು ಹಂತಗಳಲ್ಲಿ ಡೀಲ್​​​ ಆಗಿತ್ತು, ಕಿಡ್ನಾಪ್​​ಗೆ ಒಂದು ಡೀಲ್​​, ಬಡಿದು ಸಾಯಿಸೋಕೆ ಒಂದು ಡೀಲ್​, ಶವ ಬಿಸಾಡಿ ಸಾಕ್ಷ್ಯ ನಾಶಕ್ಕೆ ಮತ್ತೊಂದು ಡೀಲ್​​​​ ಮಾಡಿಕೊಂಡಿದ್ದರು ಎಂಬ ಮಾಹಿತಿ ಬಯಲಾಗಿದೆ.

ಒಂದೊಂದು ಡೀಲ್​​​ಗೆ, ಒಂದೊಂದು ಟೀಂಗೂ ಹಣ ಕೊಟ್ಟು ಎಸ್ಕೇಪ್ ಆಗಲು ಆರೋಪಿಗಳು​ ಪ್ಲಾನ್​​​ ಮಾಡಿದ್ದರು. ಆದರೆ ಎಲ್ಲಾ ಉಲ್ಟಾ ಹೊಡೆದ ಮೇಲೆ ದರ್ಶನ್​​ ರಾಕ್ಷಸ ಮುಖ ಬಯಲಾಗಿದೆ. A-13 ದೀಪಕ್​​ನಿಂದ ಲಕ್ಷ-ಲಕ್ಷ ಹಣ ಆರೋಪಿಗಳಿಗೆ ಹೋಗಿತ್ತು. ದರ್ಶನ್​​ಗೆ ಸಾಥ್​​ ಕೊಟ್ಟ ದೀಪಕ್ ಪ್ರಭಾವಿ ರಾಜಕಾರಣಿಯ ಸಂಬಂಧಿ. ನಿಖಿಲ್, ಕಾರ್ತಿಕ್, ಕೇಶವಮೂರ್ತಿಗೆ ದೀಪಕ್​​​ ತಲಾ 5 ಲಕ್ಷ ನೀಡಿದ್ದ. ಆರೋಪಿಗಳು ಹಣ ಪಡೆದಿರುವ ಬಗ್ಗೆ ಪೊಲೀಸ್ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ.

ಆರೋಪಿಗಳು ಪಡೆದಿರುವ ತಲಾ ಐದು ಲಕ್ಷ ಹಣವನ್ನ ಜಫ್ತಿ ಮಾಡಲು ಸಿದ್ದತೆ ನಡೆಯುತ್ತಿದ್ದು, ಕೊಲೆ ನಡೆದ ಬಳಿಕ ಗ್ಯಾಂಗ್​​ ದರ್ಶನ್​ ಬಳಿ 30 ಲಕ್ಷ ಹಣ ಪಡೆದಿತ್ತು. ಪ್ರದೋಶ್ ಮತ್ತು ದೀಪಕ್ ಹಣದ ವ್ಯವಹಾರ ನೋಡಿಕೊಂಡಿದ್ರು, ಉಳಿದಂತೆ ಕೋರ್ಟ್ ಬೇಲ್​​ಗೆ ಆಗೋ ಖರ್ಚು ವೆಚ್ಚ ನೀಡಿದ್ದರು. ಜೊತೆಗೆ ಕುಟುಂಬಕ್ಕೂ ಹಣ ನೀಡೋದಾಗಿ ತಿಳಿಸಿದ್ರು, ನಿಖಿಲ್, ಕೇಶವಮೂರ್ತಿ, ಕಾರ್ತಿಕ್ ಮೂವರು ಆರ್.ಆರ್.ನಗರದ ಶೆಡ್​ನಲ್ಲಿ ಕೂಲಿ ಕೆಲಸದವರು ರೇಣುಕಾಸ್ವಾಮಿ ಮೃತದೇಹವನ್ನು ಸುಮನಹಳ್ಳಿ ರಾಜಕಾಲುವೆಗೆ ಎಸೆದಿದ್ದರು.

ಇದನ್ನೂ ಓದಿ : ದರ್ಶನ್​​ ವಿರುದ್ಧ ಪ್ರತಿಭಟನೆ ಮಾಡಿದ್ದಕ್ಕೆ ಮಾಜಿ ಶಾಸಕ ಜಿ.ಎಚ್ ತಿಪ್ಪಾರೆಡ್ಡಿಗೆ ಬೆದರಿಕೆ ಕರೆ..!

Leave a Comment

DG Ad

RELATED LATEST NEWS

Top Headlines

MLA ಮುನಿರತ್ನ ವಿರುದ್ಧ ರೇಪ್ ಆರೋಪದ ಬೆನ್ನಲ್ಲೇ ಮಾಜಿ ಕಾರ್ಪೊರೇಟರ್ ಪತಿಯ ಹನಿಟ್ರ್ಯಾಪ್ ವಿಡಿಯೋ ವೈರಲ್..!

ಬೆಂಗಳೂರು : ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಬಿಜೆಪಿ ಶಾಸಕ ಮುನಿರತ್ನ ಸೇರಿ ಏಳು ಮಂದಿಯ ವಿರುದ್ಧ ರಾಮನಗರ ಜಿಲ್ಲಾ ವ್ಯಾಪ್ತಿಯ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ

Live Cricket

Add Your Heading Text Here