ಬೆಂಗಳೂರು : ಅಪೆಕ್ಸ್ ಬ್ಯಾಂಕ್ನಲ್ಲಿ ನಡೆದ ಅವ್ಯವಹಾರದಲ್ಲಿ ಸಚಿವ ರಾಜಣ್ಣಗೆ ಢವಢವ ಶುರುವಾಗಿದೆ. ಇದು ಒಂದೆರಡು ಕೋಟಿಯದ್ದಲ್ಲ, ಬರೋಬ್ಬರಿ 2 ಸಾವಿರ ಕೋಟಿ ಹಗರಣವಾಗಿದೆ. ನಾಗೇಂದ್ರ ಬಳಿಕ ಕೆ.ಎನ್. ರಾಜಣ್ಣಗೂ ಸ್ಕ್ಯಾಮ್ ಕಂಟಕ ಎದುರಾಗುವ ಸಾಧ್ಯತೆಯಿದೆ. ಅಪೆಕ್ಸ್ ಬ್ಯಾಂಕ್ ಎಂಡಿ ನೇಮಕಾತಿಯಲ್ಲಿ ಭಾರೀ ಅವ್ಯವಹಾರದ ಆರೋಪ ಕೇಳಿಬಂದಿದೆ. ಇದೀಗ ಅಪೆಕ್ಸ್ ಬ್ಯಾಂಕ್ ಹಗರಣದ ತನಿಖೆಗೆ ಹೈಕೋರ್ಟ್ ಸೂಚನೆ ನೀಡಿದೆ.
2 ಸಾವಿರ ಕೋಟಿ ರೂಪಾಯಿ ಅವ್ಯವಹಾರ ನಡೆದ ಆರೋಪ ಪ್ರಕರಣ ಸಂಬಂಧ ಸಚಿವ ಕೆ. ಎನ್. ರಾಜಣ್ಣಗೆ ಸಂಕಷ್ಟ ಶುರುವಾಗುವ ಸಾಧ್ಯತೆಯಿದೆ. ಅಪೆಕ್ಸ್ ಬ್ಯಾಂಕ್ಗೆ ಸಂಬಂಧ ಇಲ್ಲದಿರೋರಿಗೆ ಸಾಲ, ನಿಯಮ ಮೀರಿ ಸಕ್ಕರೆ ಕಾರ್ಖಾನೆ, ರಿಯಲ್ ಎಸ್ಟೇಟ್, ಚಿನ್ನದಂಗಡಿಗೆ ಸಾಲ ನೀಡಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ದೂರುದಾರ ದಿನೇಶ್ ಕಲ್ಲಹಳ್ಳಿ ಹೈಕೋರ್ಟ್ ಮೆಟ್ಟಿಲೇರಿದ್ದು, ಈ ಬೆನ್ನಲ್ಲೇ 3 ತಿಂಗಳೊಳಗೆ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ. ಇದೇ ಪ್ರಕರಣದಲ್ಲಿ ಸಚಿವ ಕೆ.ಎನ್. ರಾಜಣ್ಣಗೆ ಸಂಕಷ್ಟ ಫಿಕ್ಸ್ ಆಗಲಿದೆ. 2 ಸಾವಿರ ಕೋಟಿ ಹಗರಣದ ತನಿಖೆಗೆ ಹೈಕೋರ್ಟ್ ಕಟ್ಟಾಜ್ಞೆ ನೀಡಿದೆ.
ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ನೀಡಿದ ದೂರು ಆಧರಿಸಿ ಸರ್ಕಾರದ ಸಿಎಸ್ ಗೌರ್ನರ್ ಕಚೇರಿಯಿಂದ ಪತ್ರ ಬರೆದಿದ್ದಾರೆ. ಕಲ್ಲಹಳ್ಳಿ ದೂರಿನ ಸಂಬಂಧ ಕ್ರಮ ಜರುಗಿಸುವಂತೆ ಗೌರ್ನರ್ ಶಿಫಾರಸು ಮಾಡಿದ್ದು, ಕೋರ್ಟ್ನಲ್ಲಿ ದೂರು ದಾಖಲಿಸಲು ಕಲ್ಲಹಳ್ಳಿ ಅನುಮತಿ ಕೋರಿ ಪತ್ರ ಬರೆದಿದ್ದಾರೆ. ಆನಂತರ ದಿನೇಶ್ ಕಲ್ಲಹಳ್ಳಿ ಹೈಕೋರ್ಟ್ನಲ್ಲೂ ಅರ್ಜಿ ಸಲ್ಲಿಕೆ ಮಾಡಿದ್ದರು.
ಇದನ್ನೂ ಓದಿ : ಶಿವಣ್ಣನ ಜನ್ಮದಿನಕ್ಕೆ 131ನೇ ಸಿನಿಮಾದ ಮೊದಲ ಝಲಕ್ ರಿಲೀಸ್ : ‘ಐ ಆಮ್ ಕಮಿಂಗ್’ ಎಂದ ಕರುನಾಡ ಕಿಂಗ್..!