ಮೇಜರ್ ಮಣಿವಣ್ಣನ್ ಬಿಡಿಎ ಕಮಿಷನರ್ ಆಗಿ ಬಂದ್ಮೇಲೆ ವ್ಯಾಪಕ ಬದಲಾವಣೆ – IISC ಜಂಟಿ ರಿಜಿಸ್ಟಾರ್ ವೀರಣ್ಣ ಕಮ್ಮಾರ್ ಆಡಿಯೋ ವೈರಲ್!

ಬೆಂಗಳೂರು : ಮೇಜರ್ ಮಣಿವಣ್ಣನ್ ಅವರು ದಕ್ಷ IAS ಅಧಿಕಾರಿಯಾಗಿದ್ದು, ಅವರು ಬಿಡಿಎ ಕಮಿಷನರ್ ಆಗಿ ಅಧಿಕಾರ ವಹಿಸಿಕೊಂಡ ನಂತರ ಪ್ರಾಧಿಕಾರದಲ್ಲಿ ಸಂಚಲನ ಮೂಡಿದೆ. ಈ ಬದಲಾವಣೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

ಮೇಜರ್ ಮಣಿವಣ್ಣನ್ ಅವರ ಪ್ರಾಮಾಣಿಕ ಕಾರ್ಯಕ್ಕೆ ಜನಸಾಮಾನ್ಯರಿಂದ ಅಭಿನಂದನೆಗಳ ಸುರಿಮಳೆಯೇ ಹರಿದುಬರುತ್ತಿದೆ. ಹಾಗೆಯೇ ಇದೀಗ IISC ಜಂಟಿ ರಿಜಿಸ್ಟಾರ್ ವೀರಣ್ಣ ಕಮ್ಮಾರ್ ಅವರ ಆಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಿಡಿಎನ ಹೊಸ ಕಾರ್ಯವೈಖರಿಯನ್ನು IISC ಜಂಟಿ ರಿಜಿಸ್ಟಾರ್ ವೀರಣ್ಣ ಕಮ್ಮಾರ್ ಅವರು ಶ್ಲಾಘಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಬಿಡಿಎ ತುಂಬಾ ಒಳ್ಳೆಯ ಕೆಲಸ ಮಾಡ್ತಿದೆ. ಪ್ರತಿ 15 ದಿನಗಳಿಗೊಂದು ಬಾರಿ ಮೀಟಿಂಗ್ ಮಾಡಿ, ಈ ವೇಳೆ ಯಾರು ನಿವೇಶನಾದಾರರಿದ್ದಾರೆ ಅವರಿಗೆ ಏನು ತೊಂದರೆ ಇದೆ, ಅವರ ಅಹವಾಲುಗಳನ್ನು ಕೇಳ್ತಿದ್ದಾರೆ. ಅದಕ್ಕೆ ಪರಿಹಾರಗಳನ್ನು ಸೂಚಿಸುತ್ತಿದ್ದಾರೆ. ಇದೊಂದು ಹೊಸ ರೀತಿಯಾದ ಜನೋಪಕಾರಿ ಕೆಲಸ. ಈ ಕೆಲಸವನ್ನು ಬಿಡಿಎನಲ್ಲಿ ಮಾಡ್ತಿದ್ದು, ಮೇಜರ್ ಮಣಿವಣ್ಣನ್ ಅವರು ಕಮಿಷನರ್ ಆಗಿ ಬಂದಮೇಲೆ ಬಿಡಿಎ ತುಂಬಾ ಆ್ಯಕ್ಟೀವ್​ ಆಗಿ ಕೆಲಸ ಮಾಡ್ತಿರೋದು ನಮಗೆಲ್ಲಾ ತುಂಬಾ ಸಂತೋಷ ತಂದಿದೆ ಎಂದು IISC ಜಂಟಿ ರಿಜಿಸ್ಟಾರ್ ವೀರಣ್ಣ ಕಮ್ಮಾರ್ ಹೇಳಿದರು. ಈ ವೇಳೆ ಮೇಜರ್ ಮಣಿವಣ್ಣನ್ ಅವರಿಗೆ IISC ಜಂಟಿ ರಿಜಿಸ್ಟಾರ್ ವೀರಣ್ಣ ಕಮ್ಮಾರ್ ಧನ್ಯವಾದ ತಿಳಿಸಿದ್ದಾರೆ.

ಇದನ್ನೂ ಓದಿ : ಜಯಮೃತ್ಯುಂಜಯ ಸ್ವಾಮೀಜಿಗೆ ಬ್ಲ್ಯಾಕ್‌ಮೇಲ್ – ಯುವತಿ ವಿರುದ್ಧ FIR ದಾಖಲು!

Btv Kannada
Author: Btv Kannada

Leave a Comment

Read More

Read More