ಬಿಗ್ ಬಾಸ್ ಸೀಸನ್ 8ರ ಮೂಲಕ ಖ್ಯಾತಿ ಪಡೆದ ಕನ್ನಡದ ರ್ಯಾಪರ್ ಆಗಿದ್ದ ಬ್ರೋ ಗೌಡ ಆಲಿಯಾಸ್ ಶಮಂತ್ ಗೌಡ ಈಗ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ಹೀರೋ ಆಗಿ ಮಿಂಚುತ್ತಿದ್ದಾರೆ. ಅಷ್ಟೇ ಅಲ್ಲದೆ ಸ್ಯಾಂಡಲ್ವುಡ್ಗೂ ಎಂಟ್ರಿ ಕೊಟ್ಟಿರುವ ಶಮಂತ್ ಹೊಸ ಕನ್ನಡ ಸಿನಿಮಾವೊಂದರಲ್ಲಿ ಹೀರೋ ಆಗಿದ್ದು, ‘ರಾಘು’, ‘ಶೆಫ್ ಚಿದಂಬರ’ ಸಿನಿಮಾಗಳ ನಿರ್ದೇಶಕ ಎಂ ಆನಂದ್ ರಾಜ್ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ.
ಇದೀಗ ಬ್ರೋ ಗೌಡ ಹೊಸ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಇದನ್ನು ಸ್ವತಃ ಶಮಂತ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಶೇರ್ ಮಾಡುವ ಮೂಲಕ ತಾವು ಹೊಸ ಜೀವನಕ್ಕೆ ಕಾಲಿಡುವ ಬಗ್ಗೆ ತಿಳಿಸಿದ್ದಾರೆ. ವ್ಯಾಲೆಂಟೈನ್ಸ್ ಡೇ ಸಂಭ್ರಮದಂದು ಬ್ರೋ ಗೌಡ ತಮ್ಮ ಇನ್’ಸ್ಟಾಗ್ರಾಂನಲ್ಲಿ New Chapter Unlocked Of #brogram ಎಂದು ಬರೆದುಕೊಂಡು ಒಂದು ಸುಂದರವಾದ ವಿಡಿಯೋ ಹಂಚಿಕೊಂಡಿದ್ದಾರೆ.

ಬ್ರೋ ಗೌಡ ಮದುವೆಯಾಗುತ್ತಿರುವ ಹುಡುಗಿಯ ಹೆಸರು ಮೇಘನಾ. ಇವರು ಮೇಕಪ್ ಆರ್ಟಿಸ್ಟ್ ಆಗಿದ್ದು, ಇವರಿಬ್ಬರ ಪ್ರೀತಿಯ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಶಮಂತ್ ಗೌಡ, ಬ್ಲಾಕ್ ಅಂಡ್ ವೈಟ್ ಸೂಟ್ ನಲ್ಲಿ ಕಾಣಿಸಿಕೊಂಡಿದ್ರೆ, ಮೇಘನಾ ವೈಟ್ ಡ್ರೆಸ್ಸಲ್ಲಿ ಕಾಣಿಸಿಕೊಂಡಿದ್ದಾರೆ.
ಮೇಘನಾ ಮತ್ತು ಬ್ರೋ ಗೌಡ ಹಲವಾರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದಾರೆ. ಈ ಹಿಂದೆ ಈ ಜೋಡಿ , ಜೊತೆಯಾಗಿ ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಗಳನ್ನು ಸಹ ಮಾಡುತ್ತಿದ್ದರು. ಇದೀಗ ಅದೇ ಹುಡುಗಿಯನ್ನು ಪ್ರೀತಿಸಿ, ಹೊಸ ಜೀವನಕ್ಕೆ ಕಾಲಿಡಲು ತಯಾರಿ ನಡೆಸುತ್ತಿದ್ದಾರೆ. ಇಬ್ಬರ ಮದುವೆ ಯಾವಾಗ ಅನ್ನೋದನ್ನು ಶಮಂತ್ ಇನ್ನೂ ರಿವೀಲ್ ಮಾಡಿಲ್ಲ.









