Download Our App

Follow us

Home » ರಾಜ್ಯ » ಇನ್ಮುಂದೆ 8 ವರ್ಷ ಮೀರಿದ್ರೆ 1ನೇ ತರಗತಿ ಪ್ರವೇಶವಿಲ್ಲ – ಗರಿಷ್ಠ ವಯೋಮಿತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ..!

ಇನ್ಮುಂದೆ 8 ವರ್ಷ ಮೀರಿದ್ರೆ 1ನೇ ತರಗತಿ ಪ್ರವೇಶವಿಲ್ಲ – ಗರಿಷ್ಠ ವಯೋಮಿತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ..!

ಬೆಂಗಳೂರು : ಎಲ್ ಕೆಜಿ, ಯುಕೆಜಿ ಮತ್ತು 1ನೇ ತರಗತಿ ಪ್ರವೇಶಾತಿಗೆ ಗರಿಷ್ಠ ವಯೋಮಿತಿ ಗೊಂದಲಕ್ಕೆ ಶಿಕ್ಷಣ ಇಲಾಖೆ ಅಧಿಕೃತ ತೆರೆ ಎಳೆದಿದೆ. ಇನ್ಮುಂದೆ 8 ವರ್ಷ ಮೀರಿದರೆ 1 ನೇ ಕ್ಲಾಸಿಗೆ ಪ್ರವೇಶವಿಲ್ಲ.

ಎಲ್ ಕೆಜಿ, ಯುಕೆಜಿ ಹಾಗೂ 1ನೇ ತರಗತಿ ಮಕ್ಕಳ ಪ್ರವೇಶಕ್ಕೆ ವಯೋಮಿತಿ ನಿಗದಿ ಮಾಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಎಲ್ ಕೆಜಿ ಪ್ರವೇಶಕ್ಕೆ ಗರಿಷ್ಠ ವಯೋಮಿತಿ 4-6 ವರ್ಷ, ಯುಕೆಜಿ ಪ್ರವೇಶಕ್ಕೆ 5ರಿಂದ 7 ವರ್ಷ ನಿಗದಿ ಮಾಡಲಾಗಿದೆ.

ಹಾಗೆಯೇ 1ನೇ ತರಗತಿ ಪ್ರವೇಶಕ್ಕೆ ಗರಿಷ್ಠ ವಯೋಮಿತಿ 6-8 ವರ್ಷ ನಿಗದಿ ಪಡಿಸಲಾಗಿದೆ. ಹೀಗಾಗಿ ಇನ್ಮುಂದೆ 8 ವರ್ಷ ಮೀರಿದ್ರೆ 1ನೇ ತರಗತಿ ಪ್ರವೇಶವಿರುವುದಿಲ್ಲ. 8 ವರ್ಷ ಮೀರಿದರೂ ಶಾಲೆಗೆ ಸೇರದ ಮಕ್ಕಳನ್ನು ಶಾಲೆ ಬಿಟ್ಟ ಮಕ್ಕಳು ಎಂದು ಪರಿಗಣಿಸಲಾಗುತ್ತದೆ. ಅಲ್ಲದೇ ಅಂತಹ ಮಕ್ಕಳನ್ನು ಅವರ ವಯಸ್ಸಿಗೆ ತಕ್ಕಂತೆ ತರಗತಿಗಳ ಪ್ರವೇಶ ನೀಡಲಾಗುತ್ತದೆ. ಈ ಮೂಲಕ ಮಕ್ಕಳನ್ನು ಒಂದನೇ ತರಗತಿಗೆ ಸೇರಿಸಲು ಇದ್ದ ವಯೋಮಿತಿ ಗೊಂದಲ ನಿವಾರಣೆಯಾಗಿದೆ. ಈ‌ ನಿಯಮ 2025 -26 ನೇ ಶೈಕ್ಷಣಿಕ ಸಾಲಿನಿಂದ ಅನ್ವಯವಾಗಲಿದೆ.

ಇದನ್ನೂ ಓದಿ : ಮುಡಾದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಫ್ಯಾಮಿಲಿಗೆ 48 ನಿವೇಶನ ಹಂಚಿಕೆ : ಬಿಗ್​ ಬಾಂಬ್​ ಸಿಡಿಸಿದ ರಮೇಶ್ ಬಾಬು..!

Leave a Comment

DG Ad

RELATED LATEST NEWS

Top Headlines

ನಕಲಿ ನಕ್ಷೆ ಸೃಷ್ಟಿಸಿ ಕಟ್ಟಡ ನಿರ್ಮಾಣ – ಮಾಲೀಕನ ವಿರುದ್ಧ FIR ದಾಖಲು..!

ಬೆಂಗಳೂರು : ಬಾಬುಸಾಬ್ ಪಾಳ್ಯ ಕಟ್ಟಡ ಕುಸಿತ ದುರಂತದ ಬೆನ್ನಲ್ಲೇ ಬಿಬಿಎಂಪಿ ಎಚ್ಚೆತ್ತುಕೊಂಡಿದೆ. ನಕಲಿ ನಕ್ಷೆ ತಯಾರಿಸಿ ಕಟ್ಟಡ ನಿರ್ಮಿಸಿರುವ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ರಾಜರಾಜೇಶ್ವರಿನಗರ

Live Cricket

Add Your Heading Text Here