ಬೆಂಗಳೂರು : ನಿವೃತ್ತ ಅಧಿಕಾರಿಗಳನ್ನು ಸೇವೆಯಲ್ಲಿ ಮುಂದುವರಿಸದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆದೇಶ ಹೊರಡಿಸಿದ್ದರು. ಆದರೆ ಸಚಿವ ಜಮೀರ್ ಅಹ್ಮದ್ ಖಾನ್, ಸಿಎಂ ಆದೇಶಕ್ಕೂ ಕಿಮ್ಮತ್ತು ನೀಡದೇ ನಿವೃತ್ತ ಅಧಿಕಾರಿಯನ್ನು ಸೇವೆಯಲ್ಲಿ ಮುಂದುವರಿಸದಂತೆ ಸೂಚಿಸಿದ್ದಾರೆ.
ಆಗಸ್ಟ್ 31ಕ್ಕೆ ನಿವೃತ್ತಿಯಾಗುವ ಕೊಳಗೇರಿ ಮಂಡಳಿ ಮುಖ್ಯ ಇಂಜಿನಿಯರ್ ಎಸ್.ಪಿ.ಬಾಲರಾಜು ಅವರನ್ನು ಮುಂದಿನ 2 ವರ್ಷ ಸೇವೆಯಲ್ಲಿ ಮುಂದುವರಿಸುವಂತೆ ಸೂಚನೆ ನೀಡಿದ್ದಾರೆ. ಈ ಮೂಲಕ ಜಮೀರ್ ಅಹ್ಮದ್ ಖಾನ್, ಸಿಎಂ ಆದೇಶಕ್ಕೂ ಡೋಂಟ್ ಕೇರ್ ಎಂದಿದ್ದಾರೆ.
35 ವರ್ಷ ಆಯಕಟ್ಟಿನ ಹುದ್ದೆಯಲ್ಲಿ ಕರ್ತವ್ಯ ನಿಭಾಯಿಸಿರುವ ಕೊಳಗೇರಿ ಮಂಡಳಿ ಚೀಫ್ ಇಂಜಿನಿಯರ್ ಎಸ್.ಪಿ.ಬಾಲರಾಜು ಅವರು ಆಗಸ್ಟ್ 31ರಂದು ನಿವೃತ್ತಿಯಾಗಲಿದ್ದಾರೆ. ಆದರೆ ಜಮೀರ್ ಅಹ್ಮದ್ ಖಾನ್, ಎಸ್.ಪಿ.ಬಾಲರಾಜು ಅವರನ್ನು ಸೆಪ್ಟೆಂಬರ್ 1ರಿಂದ ಅದೇ ಹುದ್ದೆಯಲ್ಲಿ ಮುಂದುವರಿಸುವಂತೆ ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದು ಸೂಚನೆ ನೀಡಿದ್ದಾರೆ.
ಎಲ್ಲ ಇಲಾಖೆ ಸಚಿವರಿಗೂ ನಿವೃತ್ತ ಅಧಿಕಾರಿಗಳನ್ನು ಕರ್ತವ್ಯಕ್ಕೆ ತೆಗೆದುಕೊಳ್ಳದಂತೆ ಸ್ವತಃ ಸಿಎಂ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಸೂಚನೆ ನೀಡಿದ್ದರು. ಆದರೆ ಮಹಾನ್ ಸಚಿವರು ಸಿಎಂ ಹಾಗೂ ಸಿಎಸ್ ಸೂಚನೆಯನ್ನೇ ಧಿಕ್ಕರಿಸಿದ್ದಾರೆ. ಈ ಹಿನ್ನಲೆ ಹಲವು ಪ್ರಶ್ನೆಗಳು ಹುಟ್ಟಿಕೊಂಡಿದ್ದು, ಇಲಾಖೆಯಲ್ಲಿ ಬೇರೆ ಅರ್ಹ ಅಧಿಕಾರಿಗಳೇ ಇಲ್ವಾ? ಅರ್ಹ ಅಧಿಕಾರಿಗಳಿದ್ದರೂ ಯಾವುದೋ ಲಾಬಿಗೆ ಸಚಿವರು ಸಿಎಂ ಸೂಚನೆ ಧಿಕ್ಕರಿಸುತ್ತಿದ್ದಾರಾ ಎಂಬ ಪ್ರಶ್ನೆಗಳು ಉದ್ಭವಿಸಿವೆ.
ಇದನ್ನೂ ಓದಿ : ಮೃತ PSI ಪರಶುರಾಮ್ ನಿವಾಸಕ್ಕೆ ವಿಪಕ್ಷ ನಾಯಕ ಆರ್.ಅಶೋಕ್ ಭೇಟಿ..!