ವಿಶ್ವ ವಿಖ್ಯಾತ ದಸರಾ ಮಹೋತ್ಸವ ಪ್ರಯುಕ್ತ ಯುವ ದಸರಾವನ್ನು ಉತ್ತನಹಳ್ಳಿ ತ್ರಿಪುರ ಸುಂದರಿ ದೇವಸ್ಥಾನದ ಬಳಿ ಇರುವ ಯಾಲಿಗೆಹುಂಡಿ ಹತ್ತಿರ ಮೈದಾನದಲ್ಲಿ ಆಯೋಜಿಸಲಾಗಿತ್ತು.
ಹಲವು ವರ್ಷಗಳಿಂದ ತಮ್ಮ ಅದ್ಭುತ ಸಂಗೀತ ನಿರ್ದೇಶನದ ಮೂಲಕ ಜಗತ್ಪ್ರಸಿದ್ಧರಾಗಿರುವ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರು ಮೈಸೂರಿನ ಯುವ ದಸರಾದಲ್ಲಿ ಸಂಗೀತ ಸಂಜೆ ಕಾರ್ಯಕ್ರಮ ನಡೆಸಿಕೊಟ್ಟರು. ಸಮಾರಂಭ ಅದ್ದೂರಿಯಾಗಿ ನಡೆದಿದ್ದು, ಪ್ರೇಕ್ಷಕರು ಇಳಯರಾಜ ಸಂಗೀತ ಸಂಯೋಜನೆಯ ಹಾಡುಗಳ ಮೋಡಿಗೆ ಮರಳಾದರು.
ಈ ಕಾರ್ಯಕ್ರಮದ ಸಲುವಾಗಿ ಮೈಸೂರಿಗೆ ಆಗಮಿಸಿದ್ದ ಇಳಯರಾಜ ಅವರು ಮೊದಲು ನಾಡಿನ ಅಧಿದೇವತೆ ಶ್ರೀಚಾಮುಂಡೇಶ್ವರಿ ದರ್ಶನ ಪಡೆದರು. ಇಳಯರಾಜ ಅವರ ಆಪ್ತರಾದ ಹೆಸರಾಂತ ನಿರ್ದೇಶಕ ಎಸ್ ನಾರಾಯಣ್, ಇಳಯರಾಜ ಅವರು ಮೈಸೂರಿಗೆ ಬಂದು ಹಿಂತಿರುಗುವವರೆಗೂ ಅವರೊಡನೆ ಇದ್ದು ಯಾವುದೇ ತೊಂದರೆ ಆಗದಂತೆ ಸುಲಲಿತವಾಗಿ ಸಮಾರಂಭ ನಡೆಯಲು ಸಹಕಾರಿಯಾದರು.
ಇಳಯರಾಜ ಅವರು ಮೊದಲ ಬಾರಿಗೆ ತಾವು ಕೊಲ್ಲೂರು ಮೂಕಾಂಬಿಕ ಬಗ್ಗೆ ಹಾಡಿದ ಮೊದಲ ಹಾಡದ ಅಮ್ಮ ಎಂದೂ ಕೂಗಿದರೆ ಹಾಡಿನ ಮೂಲಕ ನೆರದಿದ್ದವರನ್ನ ಭಕ್ತಿಯಲ್ಲಿ ತೇಲುವಂತೆ ಮಾಡಿದರು. ಬಳಿಕ ಡಾ. ರಾಜಕುಮಾರ್ ಅಭಿನಯದ ನನ್ನ ನೀನು ಗೆಲ್ಲಲಾರೆ, ಜೀವ ಹೂವಾಗಿದೆ ಹಾಡು ಸೇರಿದಂತೆ ಡಾ. ವಿಷ್ಣುವರ್ಧನ್ ಅಭಿನಯದ ಹಾಡುಗಳನ್ನ ಹಾಡುವ ಮೂಲಕ ರಂಚಿಸಿದರು.
ಇದನ್ನೂ ಓದಿ : ಬೆಂಕಿ ಹೊತ್ತಿಕೊಂಡಿರುವಾಗಲೇ ರಸ್ತೆ ಮೇಲೆ ಚಲಿಸಿದ ಕಾರು – ವಿಡಿಯೋ ವೈರಲ್..!