Download Our App

Follow us

Home » ಮೆಟ್ರೋ » ಡೆತ್​​​​​ನೋಟ್​ ಬರೆದಿಟ್ಟು ಬೆಂಗಳೂರಿನಲ್ಲಿ ಯೂಟ್ಯೂಬರ್​​ ಆತ್ಮಹತ್ಯೆ..!

ಡೆತ್​​​​​ನೋಟ್​ ಬರೆದಿಟ್ಟು ಬೆಂಗಳೂರಿನಲ್ಲಿ ಯೂಟ್ಯೂಬರ್​​ ಆತ್ಮಹತ್ಯೆ..!

ಬೆಂಗಳೂರು : ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿ ಅರಣ್ಯದಲ್ಲಿ ಖಾಸಗಿ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದ ವ್ಯಕ್ತಿ ನೇಣಿಗೆ ಶರಣಾದ ಘಟನೆ ಜರುಗಿದೆ. ಖಿನ್ನತೆಯಿಂದ ಮನನೊಂದು ವ್ಯಕ್ತಿ ಆತ್ಮಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಬಗಲಗುಂಟೆಯ ನಿವಾಸಿ TV-11 ಯೂಟ್ಯೂಬ್​ ಚಾನೆಲ್ ನಡೆಸುತ್ತಿದ್ದ​ ಮಂಜುನಾಥ್ ​​​​ಮೃತ ದುರ್ದೈವಿ. ಕಳೆದ ರಾತ್ರಿ ಮಂಜುನಾಥ್ ಆತನ ಪೇಸ್​ಬುಕ್​ ಪೇಜ್​ನಲ್ಲಿ ಲೈವ್​ ಬಂದು ಸುಮಾರು ಅರ್ಧ ಗಂಟೆಗಳ ಕಾಲ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದನು. ಬಳಿಕ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿ ಅರಣ್ಯ ಪ್ರದೇಶಕ್ಕೆ ಸ್ಕೂಟರ್​ನಲ್ಲಿ ತೆರಳಿ ಅಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಕೂಟರ್​ ಮೇಲೆ ನಿಂತು ನೀಲಗಿರಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಯೂಟ್ಯೂಬರ್ ಮಂಜುನಾಥ್​ ಶವ ಪತ್ತೆಯಾಗಿದೆ.

10ಕ್ಕೂ ಹೆಚ್ಚು ಪುಟಗಳ ಡೆತ್​​​​​ನೋಟ್​ ಬರೆದಿಟ್ಟು ಮಂಜುನಾಥ್​​ ಸೂಸೈಡ್ ಮಾಡಿಕೊಂಡಿದ್ದು, 2 ತಿಂಗಳ ವೇತನ ಕೊಟ್ಟಿಲ್ಲ ಕ್ಷಮಿಸಿ ಎಂದು ಸಿಬ್ಬಂದಿಗೆ ಡೆತ್​​​​​ನೋಟ್​ನಲ್ಲಿ ಮಂಜುನಾಥ್ ಕ್ಷಮೆ ಕೇಳಿದ್ದಾನೆ. ಮಂಜುನಾಥ್​​ ಯಾರ್ಯಾರು ಅಂತ್ಯಕ್ರಿಯೆಗೆ ಬರ್ಬೇಕೂ ಎಂದು ಡೆತ್​ನೋಟ್​ನಲ್ಲಿ ಬರೆದಿ​​ದ್ದಾನೆ. ಅಂದು ಕೊಂಡಂತೆ ನಾನು ಬೆಳೆಯಲು ಆಗಲಿಲ್ಲ ಎಂದು ಡೆತ್​ನೋಟ್​ನಲ್ಲಿ ಉಲ್ಲೇಖಿಸಿದ್ದಾನೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ನೆಲಮಂಗಲ ಗ್ರಾಮಾಂತರ ಪೊಲೀಸರು ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ. ಯೂಟ್ಯೂಬರ್​ ಮಂಜುನಾಥ್ ಆತ್ಮಹತ್ಯೆ ಮಾಡಿಕೊಳ್ಳಲು ನಿಖರ ಕಾರಣ ಏನು ಎನ್ನುವ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ : ಮಂಗಳೂರು ಮಹಾನಗರ ಪಾಲಿಕೆ ಕಮಿಷನರ್ ಆನಂದ್ ಮೇಲೆ ಲೋಕಾ ರೇಡ್..!

Leave a Comment

DG Ad

RELATED LATEST NEWS

Top Headlines

ಬೇನಾಮಿ, ನಕಲಿ ವ್ಯಕ್ತಿಗಳ ಹೆಸರಲ್ಲಿ ಮುಡಾ ಸೈಟ್ ಹಂಚಿಕೆ.. 300 ಕೋಟಿ ಆಸ್ತಿ ಜಪ್ತಿ – ಇಡಿ ಹೇಳಿದ್ದೇನು?

ಬೆಂಗಳೂರು : ಮುಡಾ ಹಗರಣ ಸಂಬಂಧ ಜಾರಿ ನಿರ್ದೇಶನಾಲಯ 300 ಕೋಟಿ ರೂ. ಮೌಲ್ಯದ 142 ಸ್ಥಿರ ಆಸ್ತಿಗಳನ್ನ ಜಪ್ತಿ ಮಾಡಿದೆ. ಮೈಸೂರು ಲೋಕಾಯುಕ್ತ ದಾಖಲಿಸಿದ FIR

Live Cricket

Add Your Heading Text Here