ಚನ್ನಪಟ್ಟಣ : ಚನ್ನಪಟ್ಟಣ NDA ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಭರ್ಜರಿ ಪ್ರಚಾರ ಮಾಡ್ತಿದ್ದಾರೆ. ಕ್ಷೇತ್ರದ ಹಳ್ಳಿ-ಹಳ್ಳಿಗಳಿಗೆ ತೆರಳಿ ನಿಖಿಲ್ ಕುಮಾರಸ್ವಾಮಿ ಮತಯಾಚನೆ ಮಾಡ್ತಿದ್ದಾರೆ. ಪ್ರಚಾರದ ವೇಳೆ ನಿನ್ನೆ ನಿಖಿಲ್ ಕುಮಾರಸ್ವಾಮಿ ಭಾವುಕರಾಗಿದ್ದಾರೆ.
‘ನಾನು ರಾಜಕೀಯ ಷಡ್ಯಂತ್ರಕ್ಕೆ ಎರಡು ಬಾರಿ ಬಲಿಯಾದೆ. ಎರಡು ಎಲೆಕ್ಷನ್ಗಳಲ್ಲಿ ನಾನು ಪೆಟ್ಟು ತಿಂದಿದ್ದೇನೆ. ನಾನು ಬಹಳ ನೋವಿನಲ್ಲಿದ್ದೇನೆ. ನನ್ನ ತಾತ ಮಾಜಿ ಪ್ರಧಾನಿ, ಅಪ್ಪ ಮಾಜಿ ಸಿಎಂ ಆಗಿದ್ದವರು ಆದ್ರೆ ಇದು ನನ್ನ ದುರಾದೃಷ್ಟ ಅನ್ಸುತ್ತೆ. ನಾನು ಎಲೆಕ್ಷನ್ನಲ್ಲಿ ಪೆಟ್ಟು ತಿಂದಿದ್ದೇನೆ. ಕಾರ್ಯಕರ್ತರಿಗೆ ಬೆಲೆ ಕೊಡುವ ಉದ್ದೇಶ ನಮಗೆ ಇತ್ತು ಹಾಗಾಗಿ ನಾನು ಸ್ಪರ್ಧೆ ಮಾಡಿದ್ದೇನೆ’ ಎಂದು ನಿಖಿಲ್ ಕಣ್ಣೀರು ಹಾಕಿದ್ದಾರೆ. ಈ ವೇಳೆ.. ಅಣ್ಣಾ ಚನ್ನಪಟ್ಟಣದ ಕಾರ್ಯಕರ್ತರು, ಸಾರ್ವಕನಿಜಕರು ನಿಮ್ಮ ಜೊತೆ ನಾವಿದ್ದೇವೆ ಎಂದು ಹುರಿದುಂಬಿಸಿದ್ದಾರೆ.
ಇನ್ನು ಕಣ್ಣೀರು ಹಾಕಿದ ನಿಖಿಲ್ ಸಂತೈಸಿ ಬೆಂಬಲಕ್ಕೆ ಯುವ ಪಡೆ ನಿಂತಿದೆ. ಹಳ್ಳಿ-ಹಳ್ಳಿಗಳಲ್ಲೂ ನಿಖಿಲ್ ಪರವಾಗಿ ಯುವಕರು ಭರ್ಜರಿ ಕ್ಯಾಂಪೇನ್ ಮಾಡ್ತಿದ್ದಾರೆ. ದೀಪಾವಳಿ ಹಬ್ಬದ ದಿನವೂ ಬಿಡುವು ಪಡೆಯದೇ ಪ್ರಚಾರ ಕೈಗೊಂಡಿದ್ದಾರೆ. ನಿನ್ನೆ ಸುಮಾರು 35 ಗ್ರಾಮಗಳನ್ನು ನಿಖಿಲ್ ಸುತ್ತಾಡಿ ಪ್ರಚಾರ ಮಾಡಿದ್ದಾರೆ. ಮತ್ತೊಂದೆಡೆ ತಂದೆ ಕುಮಾರಸ್ವಾಮಿ ಕೂಡ ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ಚನ್ನಪಟ್ಟಣ ಸಿಟಿ ಸೇರಿದಂತೆ ಎಲ್ಲೆಡೆ ಹೆಚ್ಡಿಕೆ ಪ್ರಚಾರ ಮಾಡುತ್ತಿದ್ದಾರೆ.
ಇದನ್ನೂ ಓದಿ : ಸೋಮವಾರವೇ ದರ್ಶನ್ಗೆ ಹೈಕೋರ್ಟ್ ಕೊಟ್ಟಿರೋ ಬೇಲ್ ಕ್ಯಾನ್ಸಲ್? ದಾಸ ಮಾಡಿದ ಆ ಐದು ತಪ್ಪುಗಳೇನು?