ತುಮಕೂರು : ತುಮಕೂರು ಜಿಲ್ಲೆಯಲ್ಲಿ ಕಳೆದ ಕೆಲವು ವಾರಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಸುವರ್ಣಮುಖಿ ನದಿ ಧುಮಿಕ್ಕಿ ಹರಿಯುತ್ತಿವೆ. ಇದೀಗ ತುಂಬಿ ಹರಿಯುತ್ತಿರೋ ನದಿ ನೀರಿನಲ್ಲಿ ಯುವ ಸಮುದಾಯದ ಹುಚ್ಚಾಟ ನಡೆದಿದೆ.
ತುಮಕೂರು ಜಿಲ್ಲೆಯ ಕೊರಟಗೆರೆ ಪಟ್ಟಣದಲ್ಲಿರುವ ಸುವರ್ಣಮುಖಿ ನದಿ ತುಂಬಿ ಹರಿಯುತ್ತಿದೆ. ರಭಸವಾಗಿ ಹರಿಯುತ್ತಿರುವ ನೀರು ನೋಡಲು ಜನರ ದಂಡು ಬರ್ತಿದ್ದು, ಉಕ್ಕಿ ಹರಿಯುತ್ತಿರೋ ನದಿ ನೀರಿನಲ್ಲಿ ಸೆಲ್ಫಿಗಾಗಿ ಮುಗಿಬಿದ್ದಿದ್ದಾರೆ.
ನೀರಿನ ಮಧ್ಯೆದಲ್ಲಿ ನಿಂತು ಜನರು ಸೆಲ್ಫಿ ಕ್ಲಿಕಿಸಿಕೊಳ್ಳುತ್ತಿದ್ದಾರೆ. ಸೆಲ್ಫಿ ತೆಗೆದುಕೊಳ್ಳದಂತೆ ಬ್ಯಾನರ್ ಹಾಕಿದ್ರೂ ಡೋಂಟ್ಕೇರ್ ಎಂದ ಜನರು, ನದಿಯ ಒಳಗೆ ಇಳಿದು ಸೆಲ್ಫಿ ಕ್ಲಿಕಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಕೊರಟಗೆರೆ ಪೊಲೀಸರ ಬ್ಯಾನರ್ಗಿಲ್ವಾ ಬೆಲೆ ಎಂಬ ಪ್ರಶ್ನೆ ಉದ್ಭವವಾಗಿದೆ.
ಇದನ್ನೂ ಓದಿ : ಹುಟ್ಟುಹಬ್ಬದ ಖುಷಿಯಲ್ಲಿ ಪ್ರಭಾಸ್.. ಪ್ಯಾನ್ ಇಂಡಿಯನ್ ಸ್ಟಾರ್ ಕೈಯಲ್ಲಿದೆ ಬಿಗ್ ಬಜೆಟ್‌ನ ಸಾಲು ಸಾಲು ಸಿನಿಮಾಗಳು..!
Post Views: 145