Download Our App

Follow us

Home » ಅಪರಾಧ » ಬೆಂಗಳೂರು : ಕಂಠ ಪೂರ್ತಿ ಕುಡಿದು ನಡು ರಸ್ತೆಯಲ್ಲಿ ಯುವತಿಯಿಂದ ರಂಪಾಟ – ಇದನ್ನು ಪ್ರಶ್ನಿಸಿದ ಆಟೋ ಚಾಲಕನ ಮೇಲೆ ಹ*ಲ್ಲೆ..!

ಬೆಂಗಳೂರು : ಕಂಠ ಪೂರ್ತಿ ಕುಡಿದು ನಡು ರಸ್ತೆಯಲ್ಲಿ ಯುವತಿಯಿಂದ ರಂಪಾಟ – ಇದನ್ನು ಪ್ರಶ್ನಿಸಿದ ಆಟೋ ಚಾಲಕನ ಮೇಲೆ ಹ*ಲ್ಲೆ..!

ಬೆಂಗಳೂರು : ಕಂಠ ಪೂರ್ತಿ ಕುಡಿದು ಕಾರು ಚಲಾಯಿಸಿ ಯುವತಿ ನಡು ರಸ್ತೆಯಲ್ಲಿ ರಂಪಾಟ ಮಾಡಿರುವ ಘಟನೆ ಬೆಂಗಳೂರಿನ ಸದಾಶಿವನಗರ ರಸ್ತೆಯಲ್ಲಿ ಕಳೆದ ರಾತ್ರಿ ನಡೆದಿದೆ. ಅಲ್ಲದೆ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸುವ ಬಗ್ಗೆ ಪ್ರಶ್ನೆ ಮಾಡಿದಕ್ಕೆ ಯುವತಿ ಆಟೋ ಚಾಲಕನ ಮೈ ಕೈ ಪರಚಿ ಗಾಯಪಡಿಸಿದ್ದಾಳೆ. ಸಂಜಯ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕಂಠಪೂರ್ತಿ ಕುಡಿದು ಯುವತಿಯೋರ್ವಳು ಅಡ್ಡಾದಿಡ್ಡಿ ವಾಹನ ಚಲಾಯಿಸುತ್ತಿದ್ದಳು. ಆಟೋ ಚಾಲಕ ನಿಶಾಂತ್ ಎಂಬುವವರು ಅಡ್ಡಾದಿಡ್ಡಿ ವಾಹನ ಚಾಲನೆ ಬಗ್ಗೆ ಪ್ರಶ್ನಿಸಿದಕ್ಕೆ ಯುವತಿ ಹಾಗೂ ಯುವತಿ ಜೊತೆಯಿದ್ದ ಯುವಕ ಇಬ್ಬರೂ ಆಟೋ ಚಾಲಕನ ಜೊತೆ ಗಲಾಟೆಗೆ ಇಳಿದಿದ್ದಾರೆ.

ಈ ವೇಳೆ ಯುವತಿ ನಿಶಾಂತ್ ಮೇಲೆ ಹಲ್ಲೆ ನಡೆಸಿದ್ದಾಳೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಳೆ. ಅಷ್ಟೇ ಅಲ್ಲದೆ ಆಟೋ ಡ್ರೈವರ್ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾಳೆ. ಆಟೋ ಚಾಲಕನ ಮೈಕೈ ಪರಚಿ ಗಾಯಪಡಿಸಿರುವ ಯುವತಿಯ ಹಲ್ಲೆ ನಡೆಸುತ್ತಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಸಂಜಯ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ : ಚಿತ್ರರಂಗಕ್ಕೆ ಗುಡ್​ ಬೈ ಹೇಳ್ತಾರ ರಮ್ಯಾ? ಈ ತರ ನಿರ್ಧಾರಕ್ಕೆ ಕಾರಣವೇನು ?

Leave a Comment

DG Ad

RELATED LATEST NEWS

Top Headlines

ಬೆಂಗಳೂರಲ್ಲಿ ಕಾರು-ಆಟೋ ನಡುವೆ ಭೀಕರ ಅಪಘಾತ – ಆಟೋ ಸವಾರ ದುರ್ಮರಣ..!

ಬೆಂಗಳೂರು : ನಗರದಲ್ಲಿ ತಡರಾತ್ರಿ ಕಾರು ಹಾಗೂ ಆಟೋ ನಡುವೆ ಮುಖಾಮುಖಿ ಡಿಕ್ಕಿಯಾಗಿ ಆಟೋ ಸವಾರ ಸಾವನ್ನಪಿರುವ ಘಟನೆ ಜ್ಞಾನಭಾರತಿಯ ಮುದ್ದಿನಪಾಳ್ಯದಲ್ಲಿ ನಡೆದಿದೆ. ಕಿರಣ್ 32 ವರ್ಷ ಅಪಘಾತದಲ್ಲಿ

Live Cricket

Add Your Heading Text Here