ವಿಜಯಪುರ : ವಿಜಯಪುರ ನಗರದ ಪೇಟಿ ಬಾವಡಿಯಲ್ಲಿ ಯುವಕನೊಬ್ಬ ತಲ್ವಾರ್‌ನಿಂದ ಕೇಕ್ ಕತ್ತರಿಸಿ ಬರ್ತಡೇ ಆಚರಿಸಿಕೊಂಡಿದ್ದಾನೆ. ಅಮನ್ ಲೋಣಿ ತಲ್ವಾರ್‌ನಿಂದ ಕೇಕ್ ಕತ್ತರಿಸಿದ ಯುವಕ. ಅಮನ್ ಲೋಣಿಗೆ ಮಹ್ಮದ್ ಸಾಜೀದ್ ಇನಾಮದಾರ್ ಸಾಥ್ ನೀಡಿದ್ದಾರೆ.
ಗೋಲಗುಂಬಜ್ ಪೊಲೀಸರು ಸದ್ಯ ಅಮನ್ ಲೋಣಿ ಹಾಗೂ ಮಹ್ಮದ್ ಸಾಜೀದ್ ಇನಾಮದಾರ್ನ ಠಾಣೆಗೆ ಕರೆಸಿ, ವಿಚಾರಣೆ ಮಾಡಿದ್ದಾರೆ. ಇಬ್ಬರ ಬಳಿ ಮುಚ್ಚಳಿಕೆ ಪತ್ರ ಬರೆಸಿಕೊಂಡು ಕಳುಹಿಸಿದ್ದಾರೆ. ಗೋಳಗುಮ್ಮಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ತಲ್ವಾರ್ ಬರ್ತಡೇ ದೃಶ್ಯ ಇದೀಗ ಭಾರೀ ವೈರಲ್ ಆಗಿದೆ.
ಇದನ್ನೂ ಓದಿ : ಇಂದಿನಿಂದ ಅಯೋಧ್ಯೆಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಆರಂಭ.. ಇಲ್ಲಿದೆ ಸಂಪೂರ್ಣ ಮಾಹಿತಿ..
Post Views: 429