ರೀಲ್ಸ್ ಗೋಜಿಗೆ ಬೀಳುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗ್ತಿದೆ. ಇಷ್ಟು ದಿನ ನಮ್ಮ ಮೆಟ್ರೋ, BMTCಯಲ್ಲಿ ಹುಚ್ಚಾಟ ನಡೆದಿತ್ತು, ಇದೀಗ KSRTC ಬಸ್ ನಲ್ಲಿ ರೀಲ್ಸ್ ಗಾಗಿ ಹುಚ್ಚಾಟ ಎಸಗಿದ ಘಟನೆ ನಡೆದಿದೆ.
ಪ್ರಸಾದ್ ಜಾಕಿ ಎಂಬ ಯುವಕ KSRTC ಬಸ್ ನಲ್ಲಿ ರೀಲ್ಸ್ ಮಾಡಿ ಹುಚ್ಚಾಟ ಮೆರೆದಿದ್ದಾನೆ. KSRTCನಲ್ಲಿ ಇರುವ ಗೇರ್ ಲಿವರ್ ಕಿತ್ತು ಎಸೆಯಲು ಯುವಕ ಮುಂದಾಗಿದ್ದು, ಬಸ್ ಚಾಲನೆ ವೇಳೆ ಚಾಲಕ ಗೇರ್ ಹಾಕಲು ಮುಂದಾದಾಗ ಯುವಕ ಅದನ್ನ ನಗೆಪಾಟಲಿ ಮಾಡಿದ್ದಾನೆ. ಪ್ರಯಾಣಿಕರನ್ನ ಇಳಿಸಿದ ಬಳಿಕ ಚಾಲಕ ಬಸ್ ಇಳಿಯುತ್ತಿದ್ದಂತೆ ಪ್ರಸಾದ್ ಎಂಬ ಯುವಕ ಗೇರ್ ಲಿವರ್ ಮುರಿಯಲು ಯತ್ನಿಸಿದ್ದಾನೆ.
ಈ ಕೃತ್ಯವನ್ನು ವಿಡಿಯೋ ಮಾಡಿ ನಗೆಪಾಟಲಿ ಮೂಲಕ ರೀಲ್ಸ್ ಅಪ್ಲೋಡ್ ಮಾಡಿದ್ದಾನೆ. ಯುವಕನ ಹುಚ್ಚಾಟ ಕಂಡು ನೆಟ್ಟಿಗರು ಫುಲ್ ಗರಂ ಆಗಿದ್ದು, ಕೂಡಲೇ ಹುಚ್ಚಾಟ ಮೆರೆದ ಯುವಕನನ್ನ ಬಂಧಿಸಿ ಎಂದು ಮನವಿ ಮಾಡಿದ್ದಾರೆ. ಯುವಕನ ಹುಚ್ಚಾಟದಿಂದ ಅಪಘಾತ ಆಗುವ ಸಂಭವ ಇತ್ತು ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ : ಕರ್ತವ್ಯ ಲೋಪ ಎಸಗಿದ ಹಿನ್ನೆಲೆ ಚಿತ್ರದುರ್ಗ ಜೈಲರ್ ಸಸ್ಪೆಂಡ್..!