Download Our App

Follow us

Home » ಸಿನಿಮಾ » ಡಾಲಿ ಅಭಿನಯದ “ಉತ್ತರಕಾಂಡ”ಕ್ಕೆ ಎಂಟ್ರಿ ಕೊಟ್ಟ ಯೋಗರಾಜ್ ಭಟ್ – ಯಾವ ಪಾತ್ರ?

ಡಾಲಿ ಅಭಿನಯದ “ಉತ್ತರಕಾಂಡ”ಕ್ಕೆ ಎಂಟ್ರಿ ಕೊಟ್ಟ ಯೋಗರಾಜ್ ಭಟ್ – ಯಾವ ಪಾತ್ರ?

ಡಾಲಿ ನಟನೆಯ ‘ಉತ್ತರಕಾಂಡ’ ಸಿನಿಮಾ ತಂಡಕ್ಕೆ ಕಲಾವಿದರ ದಂಡೇ ಸೇರ್ಪಡೆಯಾಗುತ್ತಿದೆ. ಇದೀಗ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಉತ್ತರಾಕಾಂಡ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. “ಪಾಟೀಲ” ಎಂಬ ಪಾತ್ರಕ್ಕಾಗಿ ಯೋಗರಾಜ್ ಭಟ್ ಚಿತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ. ನಿರ್ದೇಶಕರಾಗಿ ಆಕ್ಷನ್ ಕಟ್ ಹೇಳುತ್ತಿದ್ದ ಭಟ್ಟರು,‌ಇದೀಗ ವಿಭಿನ್ನವಾಗಿ ಆಕ್ಷನ್ ಕಟ್ ಹೇಳಿಸಿಕೊಳ್ಳಲಿದ್ದಾರೆ‌.

ಉತ್ತರಕಾಂಡ ಸಿನಿಮಾದ ಒಂದೊಂದೇ ಪಾತ್ರ ರಿವೀಲ್ ಆಗುತ್ತಿದೆ. ಸಿನಿಮಾ ಶೂಟಿಂಗ್ ಮುಂಚೆನೆ ಈ ಎಲ್ಲ ತಯಾರಿ ಮಾಡಿಕೊಂಡ ಇಡೀ ಟೀಮ್, ಇದೀಗ ಪ್ರತಿ ಪಾತ್ರದ ಒಂದೊಂದು ಪೊಸ್ಟರ್ ರಿಲೀಸ್ ಮಾಡುತ್ತಿದೆ. ಆ ಪ್ರಕಾರ ಈಗ ಯೋಗರಾಜ್ ಭಟ್ರು ನಿರ್ವಹಿಸ್ತಿರೋ ಪಾಟೀಲದ ಪಾತ್ರ ಪೋಸ್ಟರ್ ಅಧಿಕೃತವಾಗಿಯೇ ರಿಲೀಸ್ ಆಗಿದೆ.

ಯೋಗರಾಜ್ ಭಟ್ರ ಈ ಪಾತ್ರದ ಗೆಟಪ್ ಪಕ್ಕಾ ಜವಾರಿ ಆಗಿಯೇ ಇದೆ. ಬಿಳಿ ಧೊತ್ರ-ಬಿಳಿ ಕುರ್ತಾ, ಬಿಳಿ ಟೋಪಿ, ಹಿಂಗೆ ಉತ್ತರ ಕರ್ನಾಟಕದ ಕಂಪ್ಲೀಟ್ ಪಾಟೀಲರ ಲುಕ್ ಅಲ್ಲಿಯೇ ಭಟ್ರು ಇಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ತಾವು ಪಾಟೀಲ ಅನ್ನೋದನ್ನ ಇಲ್ಲಿ ವಿಶೇಷ ಮ್ಯಾನರಿಸಂನಲ್ಲಿಯೇ ತೋರಿದ್ದಾರೆ.

“ಉತ್ತರಕಾಂಡ” ಒಂದು ಆಕ್ಷನ್ ಡ್ರಾಮಾ ಚಿತ್ರವಾಗಿದ್ದು, ಚಿತ್ರವನ್ನು ರೋಹಿತ್ ಪದಕಿ ನಿರ್ದೇಶಿಸಿರುತ್ತಾರೆ. ಕಾರ್ತಿಕ್ ಗೌಡ ಮತ್ತು ಯೋಗಿ‌ ಜಿ ರಾಜ್ ಕೆ.ಆರ್.ಜಿ.ಸ್ಟೂಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಡಾ ಶಿವರಾಜ್ ಕುಮಾರ್ ಮತ್ತು ನಟರಾಕ್ಷಸ ಡಾಲಿ‌ ಧನಂಜಯ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ : 24 ಗಂಟೆಗಳಲ್ಲೇ ಖಾಸಗಿ ಬಸ್ ರೌಡಿಸಂಗೆ ಅಂತ್ಯ ಹಾಡಿದ ಬಿಟಿವಿ – ನರಕ ಸೃಷ್ಟಿಸ್ತಿದ್ದ ಖಾಸಗಿ ಬಸ್​ಗಳಿಂದ ಮೆಜೆಸ್ಟಿಕ್​​ಗೆ ಮುಕ್ತಿ..!

Leave a Comment

DG Ad

RELATED LATEST NEWS

Top Headlines

ರವಿಶಂಕರ್ ಪುತ್ರ ಅದ್ವೈ ನಟನೆಯ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ – ಸಾಥ್ ಕೊಟ್ಟ ಶಿವಣ್ಣ..!

ಬಹುಭಾಷಾ ನಟ ಪಿ. ರವಿಶಂಕರ್​ ಅವರ ಪುತ್ರ ಅದ್ವೈ ಅಭಿನಯದ ಮೊದಲ ಸಿನಿಮಾ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ ಆಗಿದೆ. ಗಣೇಶ ಚತುರ್ಥಿಯ ಶುಭ ದಿನವಾದ ಇಂದು

Live Cricket

Add Your Heading Text Here