Download Our App

Follow us

Home » ಸಿನಿಮಾ » “ಎಕ್ಕ” ಚಿತ್ರಕ್ಕೆ ನಾಯಕಿಯಾದ ಸಲಗ ಬ್ಯೂಟಿ… ಯುವರಾಜ್ ಕುಮಾರ್​ಗೆ ಸಂಜನಾ ಆನಂದ್ ಜೋಡಿ..!

“ಎಕ್ಕ” ಚಿತ್ರಕ್ಕೆ ನಾಯಕಿಯಾದ ಸಲಗ ಬ್ಯೂಟಿ… ಯುವರಾಜ್ ಕುಮಾರ್​ಗೆ ಸಂಜನಾ ಆನಂದ್ ಜೋಡಿ..!

ಯುವ ರಾಜ್‌ಕುಮಾರ್ ಎರಡನೇ ಸಿನಿಮಾ ಶೂಟಿಂಗ್ ಭರದಿಂದ ಸಾಗುತ್ತಿದೆ. ರೋಹಿತ್ ಪದಕಿ ಸಾರಥ್ಯದ, ಎಕ್ಕ ಸಿನಿಮಾ ಜೂನ್ 6ಕ್ಕೆ ತೆರೆಗೆ ಬರಲಿದ್ದು, ಸಂಕ್ರಾಂತಿ ಹಬ್ಬದ ವಿಶೇಷವಾಗಿ ಚಿತ್ರತಂಡ ಹೊಸ ಅಪ್ ಡೇಟ್ ಕೊಟ್ಟಿದೆ.

ಪಿಆರ್‌ಕೆ ಪ್ರೊಡಕ್ಷನ್ಸ್, ಕೆಆರ್‌ಜಿ ಸ್ಟುಡಿಯೋಸ್ ಹಾಗೂ ಜಯಣ್ಣ ಕಂಬೈನ್ಸ್ ಬ್ಯಾನರ್‌ಗಳ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ‘ಎಕ್ಕ’ ಸಿನಿಮಾದಲ್ಲಿ ಯುವರಾಜ್ ಕುಮಾರ್ ನಾಯಕನಾಗಿ ನಟಿಸುತ್ತಿದ್ದು, ಸಂಪದಾ ನಾಯಕಿಯಾಗಿ ಸಾಥ್ ಕೊಡುತ್ತಿದ್ದಾರೆ. ಇದೀಗ ಚಿತ್ರತಂಡ ಮತ್ತೊಬ್ಬ ನಾಯಕಿಯನ್ನು ಪರಿಚಯಿಸಿದೆ. ಸಲಗ ಸಿನಿಮಾದ ಸುಂದರಿ ಸಂಜನಾ ಆನಂದ್ ಎಕ್ಕ ಚಿತ್ರದ ಮತ್ತೊಬ್ಬ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ತೊದಲು ಪ್ರೀತಿಯ ಮೊದಲ ಪರಿಚಯವಾಗಿ ಚಿತ್ರತಂಡ ಸಂಜನಾ ಆನಂದ್ ಅವರನ್ನು ತಮ್ಮ ಬಳಗಕ್ಕೆ ಸ್ವಾಗತಿಸಿದೆ.

ಇತ್ತೀಚೆಗಷ್ಟೇ ಪುನೀತ್ ರುದ್ರನಾಗ್ ‘ಎಕ್ಕ’ ತಂಡ ಸೇರಿಕೊಂಡಿದ್ದರು. ಈಗ ಸಂಜನಾ ಆನಂದ್ ಚಿತ್ರದ ಮತ್ತೊಬ್ಬ ನಾಯಕಿಯಾಗಿ ನಟಿಸಲಿದ್ದಾರೆ. ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರದ ಮೂಲಕ ಚಿತ್ರರಂಗಕ್ಕೆ ಮೊದಲ ಹೆಜ್ಜೆ ಇಟ್ಟಿದ್ದ ಸಂಜನಾ ನಂತರ ದುನಿಯಾ ವಿಜಯ್ ಕುಮಾರ್ ಅವರೊಂದಿಗೆ ಸಲಗ ಚಿತ್ರದಲ್ಲಿ ನಟಿಸಿದರು. ಸದ್ಯ ದಿನಕರ್ ತೂಗುದೀಪ ನಿರ್ದೇಶನದ ರಾಯಲ್ ಚಿತ್ರ ಬಿಡುಗಡೆಗೆ ಎದುರು ನೋಡುತ್ತಿದ್ದು, ಈಗ ಎಕ್ಕ ಚಿತ್ರತಂಡ ಸೇರ್ಪಡೆಯಾಗಿದ್ದಾರೆ.

ಇನ್ನು ಟೈಟಲ್‌ಗೆ ತಕ್ಕಂತೆ ಎಕ್ಕ ಪಕ್ಕಾ ರಾ ಆಕ್ಷನ್ ಥ್ರಿಲ್ಲರ್ ಸಿನಿಮಾ. ಚಿತ್ರದಲ್ಲಿ ಅತುಲ್ ಕುಲಕರ್ಣಿ, ಶ್ರುತಿ ಕೃಷ್ಣ ಮತ್ತು ರಾಹುಲ್ ದೇವ್ ಶೆಟ್ಟಿ ಕೂಡ ಇದ್ದಾರೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ ನೀಡಿದ್ದಾರೆ. ವಿಕ್ರಂ ಹತ್ವಾರ್‌ ಕಥೆ ಆಧರಿಸಿ ಚಿತ್ರಕ್ಕೆ ರೋಹಿತ್‌ ಪದಕಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸತ್ಯ ಹೆಗಡೆ ಸಿನಿಮಾಟೋಗ್ರಫಿ, ದೀಪು.ಎಸ್‌. ಕುಮಾರ್ ಸಂಕಲನಕಾರರಾಗಿರುತ್ತಾರೆ ಮತ್ತು ಅಮರ್ ಪ್ರೊಡಕ್ಷನ್ ವಿನ್ಯಾಸದ ಜವಬ್ದಾರಿ ವಹಿಸಿಕೊಂಡಿದ್ದಾರೆ.

ಇದನ್ನೂ ಓದಿ : ರಕ್ತಸಿಕ್ತ ಅವತಾರದಲ್ಲಿ ಪೃಥ್ವಿ ಅಂಬಾರ್ – “ಚೌಕಿದಾರ್” ಮಾಸ್ ಟೀಸರ್ ರಿಲೀಸ್..!

Leave a Comment

DG Ad

RELATED LATEST NEWS

Top Headlines

‘ಜೈಲರ್ 2’ ಘೋಷಣೆ – ಮತ್ತೆ ಅಬ್ಬರಿಸಿದ ‘ಟೈಗರ್ ಕಾ ಹುಕುಂ’.. ರಜನಿ ಫ್ಯಾನ್ಸ್ ಫುಲ್ ಖುಷ್!

ಅಭಿಮಾನಿಗಳಿಗೆ ಸೂಪರ್​ ಸ್ಟಾರ್ ರಜನಿಕಾಂತ್ ಭರ್ಜರಿ ಗಿಫ್ಟ್ ನೀಡಿದ್ದಾರೆ. ಜೈಲರ್​ 2 ಸಿನಿಮಾಗಾಗಿ ಕಾಯ್ತಿದ್ದ ಫ್ಯಾನ್ಸ್​ಗೆ ಕೊನೆಗೂ ಗುಡ್​ ನ್ಯೂಸ್ ಸಿಕ್ಕಿದೆ. ನಿರ್ದೇಶಕ ನೆಲ್ಸನ್ ದಿಲೀಪ್‌ ಕುಮಾರ್

Live Cricket

Add Your Heading Text Here