Download Our App

Follow us

Home » ರಾಜಕೀಯ » ವಿಜಯಪುರ ಪಾಲಿಕೆ ಎಲೆಕ್ಷನ್​​ನಲ್ಲಿ ಯತ್ನಾಳ್​​ಗೆ ಹಿನ್ನಡೆ..!

ವಿಜಯಪುರ ಪಾಲಿಕೆ ಎಲೆಕ್ಷನ್​​ನಲ್ಲಿ ಯತ್ನಾಳ್​​ಗೆ ಹಿನ್ನಡೆ..!

ವಿಜಯಪುರ : ವಿಜಯಪುರ ಪಾಲಿಕೆ ಎಲೆಕ್ಷನ್​​ನಲ್ಲಿ ಯತ್ನಾಳ್​​ಗೆ ಹಿನ್ನಡೆಯಾಗಿದೆ. ಕಾಂಗ್ರೆಸ್​ ವಿಜಯಪುರ ಪಾಲಿಕೆಯ ಅಧಿಕಾರ ಪಡೆದಿದೆ. ಇದೀಗ ಮೇಯರ್​​, ಉಪಮೇಯರ್​ ಸ್ಥಾನ ಕಾಂಗ್ರೆಸ್​ ಪಾಲಾಗಿದೆ.

22 ಮತಗಳಿಂದ ಗೆದ್ದು ಕಾಂಗ್ರೆಸ್​ನ ಮೆಹಜಬಿನ್​​​ ಮೇಯರ್​​, ದಿನೇಶ್​ ಹಳ್ಳಿ ಉಪಮೇಯರ್​​ ಆಗಿ ಆಯ್ಕೆಯಾಗಿದ್ದಾರೆ. 17 ಸ್ಥಾನ ಗೆದ್ದರೂ ಬಿಜೆಪಿಗೆ ಪಾಲಿಕೆ ಆಡಳಿತ ಸಿಗಲಿಲ್ಲ.

2022ರ ಅಕ್ಟೋಬರ್​​ನಲ್ಲಿ ನಡೆದಿದ್ದ ಎಲೆಕ್ಷನ್​ನಲ್ಲಿ ಬಿಜೆಪಿ-17, ಕಾಂಗ್ರೆಸ್​-10, ಪಕ್ಷೇತರರು-5, ಎಐಎಂಐಎಂ-2, ಜೆಡಿಎಸ್​ ಒಂದು ಸ್ಥಾನ ಗೆದ್ದಿದ್ದವು. ಮೀಸಲಾತಿ ವಿವಾದ ಹಿನ್ನೆಲೆ ಎಲೆಕ್ಷನ್​ ಮುಂದಕ್ಕೆ ಹೋಗಿತ್ತು.

ಹಾಗಾಗಿ ಬಿಜೆಪಿ ಸದಸ್ಯರು ಕಲಬುರಗಿ ಹೈಕೋರ್ಟ್​ ಮೊರೆ ಹೋಗಿದ್ದರು. ಕೋರ್ಟ್​ನಲ್ಲಿ ವಿವಾದ ಅಂತ್ಯವಾದ ಹಿನ್ನೆಲೆಯಲ್ಲಿ ಇದೀಗ ಎಲೆಕ್ಷನ್​​ ನಡೆದಿದೆ. ವಿಜಯಪುರ ಮಹಾನಗರ ಪಾಲಿಕೆಗೆ ಒಟ್ಟು 35 ಸದಸ್ಯ ಬಲ ಸಿಕ್ಕಿದೆ. ಕಾಂಗ್ರೆಸ್​ ಜೆಡಿಎಸ್​ ಕಾರ್ಪೊರೇಟರ್​​ ಬೆಂಬಲ ಪಡೆದಿದೆ.

10 ಸದಸ್ಯರ ಬಲವನ್ನು ಮಾತ್ರ ಹೊಂದಿರುವ ಕಾಂಗ್ರೆಸ್ ಪರವಾಗಿ 5 ಪಕ್ಷೇತರರು, 2 ಎಐಎಂಐಎಂ ಹಾಗೂ 1 ಜೆಡಿಎಸ್ ಸದಸ್ಯರ ಬೆಂಬಲವನ್ನು ಎಂ.ಬಿ ಪಾಟೀಲ್ ಪಡೆದಿದ್ದಾರೆ.

ಇದರ ಜೊತೆಗೆ ಎಂ ಬಿ ಪಾಟೀಲ್ ಸಹಿತ ನಾಗಠಾಣ ಶಾಸಕ ವಿಠಲ ಕಟಕದೊಂಡ, ಇಬ್ಬರು ಪರಿಷತ್ ಸದಸ್ಯರಾದ ಸುನೀಲಗೌಡ ಪಾಟೀಲ್, ಪ್ರಕಾಸ ರಾಠೋಡ್ ಮತಗಳ ಬಲ ಕೈ ಪಡೆಗಿದೆ. ಹೀಗಾಗಿ ಒಟ್ಟು 22 ಮತಗಳ ಬಲವನ್ನು ಕಾಂಗ್ರೆಸ್ ಪಡೆದುಕೊಂಡಿದೆ.

ಇದನ್ನೂ ಓದಿ : ಅಂದರ್​​​ ಬಾಹರ್​​​​ ಅಡ್ಡೆ ಮೇಲೆ CCB ರೇಡ್ ​; 6 ಮಂದಿ ಅರೆಸ್ಟ್​, 85.39 ಲಕ್ಷ ಹಣ ಸೀಜ್​​​​..

Leave a Comment

DG Ad

RELATED LATEST NEWS

Top Headlines

ರವಿಶಂಕರ್ ಪುತ್ರ ಅದ್ವೈ ನಟನೆಯ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ – ಸಾಥ್ ಕೊಟ್ಟ ಶಿವಣ್ಣ..!

ಬಹುಭಾಷಾ ನಟ ಪಿ. ರವಿಶಂಕರ್​ ಅವರ ಪುತ್ರ ಅದ್ವೈ ಅಭಿನಯದ ಮೊದಲ ಸಿನಿಮಾ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ ಆಗಿದೆ. ಗಣೇಶ ಚತುರ್ಥಿಯ ಶುಭ ದಿನವಾದ ಇಂದು

Live Cricket

Add Your Heading Text Here