Download Our App

Follow us

Home » ರಾಜಕೀಯ » ಯತ್ನಾಳ್ ಒಡೆತನದ ಸಕ್ಕರೆ ಕಾರ್ಖಾನೆ ಬಂದ್​ ಆದೇಶಕ್ಕೆ ಹೈಕೋರ್ಟ್ ತಡೆ – ಸತ್ಯಕ್ಕೆ ಜಯ ಎಂದ ಯತ್ನಾಳ್..!

ಯತ್ನಾಳ್ ಒಡೆತನದ ಸಕ್ಕರೆ ಕಾರ್ಖಾನೆ ಬಂದ್​ ಆದೇಶಕ್ಕೆ ಹೈಕೋರ್ಟ್ ತಡೆ – ಸತ್ಯಕ್ಕೆ ಜಯ ಎಂದ ಯತ್ನಾಳ್..!

ಕಲಬುರಗಿ : ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒಡೆತನದ ಚಿಂಚೋಳಿ ಸಮೀಪದ ಸಿದ್ದಸಿರಿ ಸಕ್ಕರೆ ಹಾಗೂ ಎಥನಾಲ್ ಕಾರ್ಖಾನೆ ಬಂದ್​ಗೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿದ್ದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ.

ವಾಯು, ಜಲ ಕಾಯ್ದೆ ಉಲ್ಲಂಘನೆ ಆರೋಪ ಹಿ‌ನ್ನಲೆ ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಚಿಮ್ಮಾಯಿದಲಾಯಿ ಗ್ರಾಮದ ಬಳಿ ಇರುವ ಯತ್ನಾಳ್ ಒಡೆತನದ ಸಿದ್ದಸಿರಿ ಸಕ್ಕರೆ ಕಾರ್ಖಾನೆ ಬಂದ್​ಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಇತ್ತೀಚೆಗೆ ಆದೇಶಿಸಿತ್ತು.

ಸದ್ಯ, ಮಂಡಳಿ ಆದೇಶಕ್ಕೆ ಹೈಕೋರ್ಟ್​ನಿಂದ ತಡೆ ಸಿಕ್ಕಿರುವ ಹಿನ್ನೆಲೆ ಎಕ್ಸ್​ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿದ ಯತ್ನಾಳ್, ಸತ್ಯದ ಗೆಲುವು ಎಂದು ಹೇಳಿದ್ದಾರೆ. ಅಲ್ಲದೆ, ಸರ್ಕಾರದ ಷಡ್ಯಂತ್ರಕ್ಕೆ ಹೈಕೋರ್ಟ್ ತಡೆ ನೀಡಿದೆ ಎಂದಿದ್ದಾರೆ.

“ಕಾಂಗ್ರೆಸ್ ಸರ್ಕಾರ ನಮ್ಮ ಸಿದ್ದಸಿರಿ ಸಕ್ಕರೆ ಹಾಗು ಎಥನಾಲ್ ಕಾರ್ಖಾನೆ ಮುಚ್ಚಲು ನೀಡಿದ್ದ ನೋಟಿಸ್ ಹಾಗೂ ಮುಚ್ಚುವ ಷಡ್ಯಂತ್ರಕ್ಕೆ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯ ತಡೆ ನೀಡಿದೆ” ಎಂದು ಯತ್ನಾಳ್ ಹೇಳಿದ್ದಾರೆ.

ಘಟನೆಯ ವಿವರ : ಪರಿಸರ ನಿಯಮ ಉಲ್ಲಂಘನೆ ಆರೋಪದಡಿ ಯತ್ನಾಳ್ ಒಡೆತನದ ಸಕ್ಕರೆ ಕಾರ್ಖಾನೆ ಮುಚ್ಚಲು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶಿಸಿತ್ತು. ಈ ಕುರಿತು ಯತ್ನಾಳ್ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ಮೇಲೆ ಹರಿ ಹಾಯ್ದಿದ್ದರು. ಯತ್ನಾಳ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದ ಕೈಗಾರಿಕೆ ಸಚಿವ ಎಂಬಿ ಪಾಟೀಲ್, ಕಾನೂನು ಪ್ರಕಾರ ಸರ್ಕಾರ ಕ್ರಮ ತೆಗೆದುಕೊಂಡಿರುತ್ತದೆ. ಒಂದು ವೇಳೆ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿರುವ ನೋಟಿಸ್ ಸರಿ ಇಲ್ಲದಿದ್ದರೆ ನ್ಯಾಯಲಯದ ಮೊರೆ ಹೋಗಲಿ ಎಂದು ಸಲಹೆ ನೀಡಿದ್ದರು.

ಇದನ್ನೂ ಓದಿ : ಕಾಂಗ್ರೆಸ್ ಊಸರವಳ್ಳಿ ಪಕ್ಷ – ಸಿಎಂ ಸಿದ್ದುಗೆ ಟ್ವೀಟ್​ನಲ್ಲೇ ತಿರುಗೇಟು ನೀಡಿದ ಜೆಡಿಎಸ್..!

Leave a Comment

DG Ad

RELATED LATEST NEWS

Top Headlines

ಬೆಂಗಳೂರು : ಕುಡಿದ ಮತ್ತಲ್ಲಿ ಅಪಾರ್ಟ್​ಮೆಂಟ್​ನ ಬೇಸ್​ಮೆಂಟ್​​ನಲ್ಲಿ ಯುವಕರ ಮಧ್ಯೆ ಹೊಡೆದಾಟ – ವಿಡಿಯೋ ವೈರಲ್​..!

ಬೆಂಗಳೂರು : ಬೆಳಂದೂರಿನ ಜುನ್ನಸಂದ್ರದ ಅಪಾರ್ಟ್​ಮೆಂಟ್​ನ ಬೇಸ್​ಮೆಂಟ್​​ನಲ್ಲಿ ಯುವಕರ ಮಧ್ಯೆ ಗಲಾಟೆ ನಡೆದಿದೆ. ಕುಡಿದ ನಶೆಯಲ್ಲಿ ಹುಡುಗರು ಹೊಡೆದಾಡಿಕೊಂಡಿದ್ದು, ಪುಂಡರ ಕ್ವಾಟ್ಲೆಗೆ ಅಕ್ಕಪಕ್ಕದ ನಿವಾಸಿಗಳು ಹೈರಾಣಾಗಿದ್ದಾರೆ. ಯುವಕರ

Live Cricket

Add Your Heading Text Here