ಬೆಂಗಳೂರು : ಪೋಕ್ಸೊ ಪ್ರಕರಣ ರದ್ದುಕೋರಿ ಮಾಜಿ ಸಿಎಂ ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಪೂರ್ಣಗೊಳಿಸಿರುವ ಹೈಕೋರ್ಟ್, ತನ್ನ ಆದೇಶವನ್ನು ಕಾಯ್ದಿರಿಸಿದೆ.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಆದೇಶ ಕಾಯ್ದಿರಿಸಿತು. ವಕೀಲ ಸಿವಿ ನಾಗೇಶ್ ಅವರು ಯಡಿಯೂರಪ್ಪ ಪರ ವಾದ ಮಂಡಿಸಿದ್ದು, ಸರ್ಕಾರದ ಪರವಾಗಿ ಪ್ರೋಪೆಸರ್ ರವಿವರ್ಮಕುಮಾರ್ ವಾದ ಮಂಡನೆ ಮಾಡಿದ್ದಾರೆ. ಇನ್ನು ತೀರ್ಪು ಪ್ರಕಟಿಸುವವರೆಗೂ ಬಿಎಸ್ವೈಗೆ ಮಧ್ಯಂತರ ಜಾಮೀನು ವಿಸ್ತರಣೆ ಮಾಡುವಂತೆ ಹೈಕೋರ್ಟ್ ಆದೇಶ ನೀಡಿದೆ.
ಇದನ್ನೂ ಓದಿ : ಆಸ್ತಿ ಕಬಳಿಸಲು ಸುಳ್ಳು ವಿಲ್ ಸೃಷ್ಟಿಸಿದ ಆರೋಪ – ಜೆಡಿಎಸ್ ಮುಖಂಡ ಬೆಳವಾಡಿ ಶಿವಮೂರ್ತಿ ವಿರುದ್ಧ FIR..!
Post Views: 81