ಬಾಗಲಕೋಟೆ : ಚಂದ್ರಾದೇವಿ ದೇವಸ್ಥಾನದ ದ್ವಾರ ಬಾಗಿಲಿಗೆ ಮಂಗವೊಂದು ಜಿಗಿದ ಪರಿಣಾಮ ದ್ವಾರ ಬಾಗಿಲಿನ ಮೇಲಿದ್ದ ಕಲ್ಲು ಮಹಿಳೆಯ ಮೇಲೆ ಬಿದ್ದು, ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಆಲಗೂರು ಗ್ರಾಮದಲ್ಲಿ ನಡೆದಿದೆ. 44 ವರ್ಷದ ಸುರೇಖಾ ಕಂಬಾರ ಮೃತ ಮಹಿಳೆ.
ಮೃತ ಮಹಿಳೆ ಮೂಲತಃ ಹುನ್ನೂರು ಗ್ರಾಮದವರಾಗಿದ್ದು, ಪ್ರತೀ ಸೋಮವಾರ ಆಲಗೂರು ಗ್ರಾಮದ ಸಂತೆಗೆ ತರಕಾರಿ ಮಾರಾಟ ಮಾಡಲು ಆಗಮಿಸುತ್ತಿದ್ದರು. ದೇವಸ್ಥಾನದ ದ್ವಾರಬಾಗಿಲಿನ ಕೆಳಗಡೆ ಕುಳಿತು ತರಕಾರಿ ಮಾರಾಟ ಮಾಡುತ್ತಿದ್ದರು.
ದೇವಾಲಯದ ಬಳಿಯಿದ್ದ ಮಂಗಗಳು ಅತ್ತಿಂದಿತ್ತ ಓಡಾಟ ನಡೆಸುತ್ತಿದ್ದವು. ಈ ವೇಳೆ ದ್ವಾರ ಬಾಗಿಲಿಗೆ ಮಂಗವೊಂದು ಛಂಗನೇ ಜಿಗಿದಿದೆ ಎನ್ನಲಾಗಿದೆ. ದೇವಸ್ಥಾನದ ದ್ವಾರ ಬಾಗಿಲಿನ ಮೇಲಿದ್ದ ಕಲ್ಲು ಮಹಿಳೆಯ ಮೇಲೆ ಬಿದ್ದು, ತೀವ್ರ ರಕ್ತಶ್ರಾವದಿಂದ ಮಹಿಳೆ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಜಮಖಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಕಲಾಗಿದೆ.
ಇದನ್ನೂ ಓದಿ : ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾಗಿ ಸುರೇಶ್ ಬಾಬು ನೇಮಕ..!
Post Views: 219