Download Our App

Follow us

Home » ಅಪರಾಧ » ಪರಪ್ಪನ ಅಗ್ರಹಾರದಿಂದ‌ ತುಮಕೂರು ಜೈಲಿಗೆ ಶಿಫ್ಟ್ ಆಗ್ತಾರಾ ದರ್ಶನ್?

ಪರಪ್ಪನ ಅಗ್ರಹಾರದಿಂದ‌ ತುಮಕೂರು ಜೈಲಿಗೆ ಶಿಫ್ಟ್ ಆಗ್ತಾರಾ ದರ್ಶನ್?

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್​ ಜೈಲು ಪಾಲಾಗಿದ್ದಾರೆ. ಕೋರ್ಟ್ ಜುಲೈ 4ರವರೆಗೆ ದರ್ಶನ್​ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಈಗಾಗಲೇ ದರ್ಶನ್ ಎರಡು ರಾತ್ರಿ ಪರಪ್ಪನ ಅಗ್ರಹಾರದಲ್ಲಿ ಕಳೆದಿದ್ದಾರೆ. ಜೈಲು ಸೇರಿದ ಬೆನ್ನಲ್ಲೇ ದರ್ಶನ್​ ಮೌನಕ್ಕೆ ಶರಣಾಗಿದ್ದಾರೆ.

ಇನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್ ಗ್ಯಾಂಗ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ನಟ ದರ್ಶನ್​ಗೆ ಕೆಲ ರೌಡಿಗಳು ಪರಿಚಯ ಇರೋ ಶಂಕೆ ಇದೆ. ಹೀಗಾಗಿ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ನಟ ದರ್ಶನ್ ಸೇರಿದಂತೆ ಕೆಲ ಆರೋಪಿಗಳನ್ನು ತುಮಕೂರು ಜೈಲಿಗೆ ಸ್ಥಳಾಂತರ ಮಾಡಲು ಪೊಲೀಸರು ಮನವಿ ಮಾಡಿದ್ದಾರೆ. ಈ ಕುರಿತು ಅರ್ಜಿ ಇಂದು 24 ಎಸಿಎಂಎಂ ನ್ಯಾಯಾಲಯದಲ್ಲಿ ವಿಚಾರಣೆಯಾಗಲಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳು ಒಂದೇ ಕಡೆ ಇರುವುದು ಸುರಕ್ಷಿತವಲ್ಲ. ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ ದಿನವೇ ಈ ಬಗ್ಗೆ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂರ್ ಪ್ರಸನ್ನ ಕುಮಾರ್ ಅವರು  ಕೋರ್ಟ್ಗೆ​ ಮನವಿ ಮಾಡಿದ್ದರು. ಆದರೆ ವಿಚಾರಣೆಯನ್ನು ಜೂನ್ 24ಕ್ಕೆ ಮುಂದೂಡಲಾಗಿತ್ತು. ಪೊಲೀಸರ ಈ ಮನವಿಗೆ ದರ್ಶನ್ ಹಾಗೂ ಆತನ ಗ್ಯಾಂಗ್ ಪರ ವಕೀಲರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಇಂದು ಈ ಸಂಬಂಧ ವಾದ ಪ್ರತಿವಾದ ನಡೆಯಲಿದ್ದು, ದರ್ಶನ್ ತುಮಕೂರು ಜೈಲಿಗೆ ಶಿಫ್ಟ್ ಆಗ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ : ಮಲ್ಲೇಶ್ವರಂನಲ್ಲಿ ಕ್ಷುಲ್ಲಕ ವಿಚಾರಕ್ಕೆ ವ್ಯಕ್ತಿಯ ಮೇಲೆ ಕಲ್ಲು ಎತ್ತಿಹಾಕಿ ಭೀಕರ ಕೊ*ಲೆ..!

 

 

 

 

 

Leave a Comment

DG Ad

RELATED LATEST NEWS

Top Headlines

ಸುಳ್ಳು ಹೇಳಿದ್ದೇ ನಟ ದರ್ಶನ್​ಗೆ ಮುಳುವಾಯ್ತಾ? ಪೊಲೀಸರ SLPಯ ಪ್ರಮುಖ ಅಂಶಗಳೇನು ಗೊತ್ತಾ?

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಸೇರಿ ಒಟ್ಟು 7 ಆರೋಪಿಗಳಿಗೆ ಹೈಕೋರ್ಟ್‌ ಕಳೆದ ಡಿಸೆಂಬರ್ 13ರಂದು ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. 185

Live Cricket

Add Your Heading Text Here