ಕಲಬುರಗಿ : ಕರ್ನಾಟಕದಾದ್ಯಂತ ತೀವ್ರ ಸದ್ದು ಮಾಡುತ್ತಿರುವ ವಕ್ಫ್ ಬೋರ್ಡ್ ವಿವಾದ ಇದೀಗ 8 ಜಿಲ್ಲೆಗಳಿಗೆ ವಿಸ್ತರಿಸಿದೆ. ಒಂದೆಡೆ, ವಿಜಯಪುರದಲ್ಲಿ ರೈತರು ಹಾಗೂ ಪ್ರತಿಪಕ್ಷಗಳಿಂದ ಪ್ರತಿಭಟನೆ ನಡೆಯುತ್ತಿದೆ. ಮತ್ತೊಂದೆಡೆ, ಧಾರವಾಡದ ಅನೇಕ ರೈತರಿಗೂ ಸೋಮವಾರ ನೋಟಿಸ್ ನೀಡಲಾಗಿತ್ತು. ಇದೀಗ ಕಲಬುರಗಿಯ ಚಿಂಚೋಳಿಯ 45 ರೈತರಿಗೆ ನೋಟಿಸ್ ಬಂದಿದೆ.
ಚಿಂಚೋಳಿ ತಾಲೂಕಿನ 45ಕ್ಕೂ ಹೆಚ್ಚು ರೈತರಿಗೆ ತಹಶೀಲ್ದಾರರು ನೋಟಿಸ್ ನೀಡಿದ್ದು, ರೈತರ ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರು ನಮೂದು ಆಗಿದೆ. ಈ ಹಿನ್ನಲೆಯಲ್ಲಿ ವಕ್ಫ್ ಬೋಡ್೯ ವಿರುದ್ಧ ಕೋರ್ಟ್ ಮೊರೆ ಹೋಗಲು ರೈತರು ಸಜ್ಜಾಗಿದ್ದಾರೆ.
ಚಿಂಚೋಳಿ ತಾಲೂಕಿನ 133 ಎಕರೆಗೆ ಸಂಬಂಧಿಸಿ 45 ರೈತರಿಗೆ ನೋಟಿಸ್ ನೀಡಲಾಗಿದೆ. ಭೀಮಾಸಿಂಗ್, ಸಂತೋಷ, ಉಮೇಶ, ಅಪ್ಪಾಸಿಂಗ್ ಜಂಟಿ ಪಹಣಿ ಪತ್ರದಲ್ಲೂ ವಕ್ಫ್ ಬೋರ್ಡ್ ಹೆಸರು ನಮೂದು ಆಗಿದೆ. ಚಿಕ್ಕೋಡಿ ರೈತ ಅಪ್ಪಾಸಿಂಗ್ ರಜಪೂತ ಜಮೀನಿಗೆ ವಕ್ಫ್ ವಕ್ರ ದೃಷ್ಟಿ ಬಿದ್ದಿದೆ. ಯಕ್ಸಂಬಾ ಗ್ರಾಮದ ರೈತನ ಪಹಣಿ ಪತ್ರದಲ್ಲಿ ವಕ್ಫ್ ಹೆಸರು ನಮೂದೆಯಾಗಿದೆ. ಇನ್ನು 5 ಎಕರೆ ಜಮೀನಿನಲ್ಲಿ ವಕ್ಫ್ ಹೆಸರು ಉಲ್ಲೇಖ ಮಾಡಿದ್ರಿಂದ ರೈತರಲ್ಲಿ ಆತಂಕ ಹೆಚ್ಚವಾಗಿದೆ.
ಇದನ್ನೂ ಓದಿ : ವಕ್ಫ್ ಭೂ ಬಿರುಗಾಳಿ ಎದ್ದಿರೋ ವಿಜಯಪುರಕ್ಕೆ ನಾಳೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಭೇಟಿ..!