ಮೈಸೂರು : ವಕ್ಫ್ ಆಸ್ತಿ ವಿವಾದ ಇದೀಗ ರಾಜ್ಯಾದ್ಯಂತ ಹರಡಿದೆ. ಆರಂಭದಲ್ಲಿ ರೈತರ ಜಮೀನಿನಿಂದ ಆರಂಭವಾದ ವಕ್ಫ್ ಆಸ್ತಿ ವಿವಾದ, ಬಳಿಕ ಮಠ ಹಾಗೂ ಹಿಂದೂ ದೇವಾಲಯಗಳಿಗೂ ನೋಟಿಸ್ ನೀಡುವ ಮೂಲಕ ಆತಂಕ ಹೆಚ್ಚಿಸಿತ್ತು. ಇದೀಗ ಸಿಎಂ ಸಿದ್ದರಾಮಯ್ಯ ಅವರು ಪ್ರತಿನಿಧಿಸುವ ವರುಣಾ ಕ್ಷೇತ್ರಕ್ಕೂ ಈ ವಿವಾದ ಎಂಟ್ರಿ ಕೊಟ್ಟಿದೆ.
ಹೌದು, ಸಿಎಂ ಸಿದ್ದರಾಮಯ್ಯ ಅವರು ಪ್ರತಿನಿಧಿಸುವ ವರುಣಾ ಕ್ಷೇತ್ರದಲ್ಲೇ ವಕ್ಫ್ಗೆ ಆಸ್ತಿ ವರ್ಗಾವಣೆಯಾಗಿದೆ. ವರುಣಾ ವಿಧಾನಸಭಾ ಕ್ಷೇತ್ರದ ರಂಗಸಮುದ್ರ ಗ್ರಾಮದ ಆಸ್ತಿ ಪರಬಾರೆಯಾಗಿದೆ ಎನ್ನುವ ಮಾಹಿತಿ ಹೊರಬಿದ್ದಿದೆ.
ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕು ರಂಗಸಮುದ್ರ ಗ್ರಾಮದ ಸರ್ವೆ ನಂಬರ್ 257ರ 19 ಗುಂಟೆ ಭೂಮಿ ವಕ್ಫ್ ಆಸ್ತಿ ಎಂದು ಆರ್‌ಟಿಸಿಯಲ್ಲಿ ಉಲ್ಲೇಖವಾಗಿದೆ. 10-01-2022 ರಂದು ಖಾತೆ ಆಗಿದ್ದು, ಎಂಡಬ್ಲೂಬಿ 19(2) 01-04-1965 ಕ್ರಮ ಸಂಖ್ಯೆ 317 ವಕ್ಫ್ ಅಧಿಸೂಚನೆ ಸಂಖ್ಯೆ ಆಧಾರದ ಮೇಲೆ ಖಾತೆ ನಂಬರ್ 999 ಅಡಿ ಮುಸಲ್ಮಾನರ ಖಬ್ರಸ್ತಾನ್ ಸುನ್ನಿ, ವಕ್ಫ್ ಆಸ್ತಿ ಎಂದು ಉಲ್ಲೇಖವಾಗಿದೆ.
2019-20 ರಲ್ಲಿ ಕಪನಯ್ಯನ ತೋಪು ಎಂದು ಉಲ್ಲೇಖವಾಗಿತ್ತು. 2019-20 ರಲ್ಲಿ ಭೂಮಿಯಲ್ಲಿ ಭತ್ತ ಬೆಳೆದಿರುವ ಕುರಿತು ಆರ್ ಟಿಸಿಯಲ್ಲಿ ಮಾಹಿತಿ ಇದೆ. ಆ ಜಾಗದಲ್ಲಿ ಆಲದಮರ, ಅರಳಿಮರ ಎಂದುಬು ಉಲ್ಲೇಖಿಸಿರುವ ಭೂಮಿ ಸರ್ಕಾರಿ ಜಮೀನು ಎಂಬ ಶಂಕೆಯೂ ಇದೆ. ಸರ್ಕಾರಿ ಭೂಮಿಯನ್ನ ಬೇರೆ ಯಾರೋ ಉಳುಮೆ ಮಾಡಿಕೊಂಡಿದ್ದರ ಬಗ್ಗೆ ಮಾಹಿತಿ ಕೂಡ ಇದೆ ಎಂದು ಹೇಳಲಾಗಿದೆ. ಆದರೆ, ಸದ್ಯ ಈ ಭೂಮಿ ವಕ್ಫ್ ಆಸ್ತಿಗೆ ವರ್ಗಾವಣೆ ಆಗಿದೆ.
ಇದನ್ನೂ ಓದಿ : ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಕಲ್ಲು ಕಳ್ಳರ ಹಾವಳಿ.. ಕಾವೇರಿ ನದಿ ಸೇತುವೆಗೆ ರಕ್ಷಣೆಯೇ ಇಲ್ವಾ?