ಕನ್ನಡ ಚಿತ್ರರಂಗದ ನಟ ರಾಘವೇಂದ್ರ ರಾಜ್‌ಕುಮಾರ್ ಅವರ ಕಿರಿಯ ಪುತ್ರ ಯುವ ರಾಜ್‌ಕುಮಾರ್ ಸಂಸಾದಲ್ಲಿ ಬಿರುಕು ಮೂಡಿದೆ. ಇದೀಗ ಯುವ-ಶ್ರೀದೇವಿ ನಡುವಿನ ವಿಚ್ಛೇದನ ವಿಚಾರ ಕೋರ್ಟ್ ಮೆಟ್ಟಿಲವರೆಗೆ ಬಂದು ನಿಂತಿದೆ. ಇದರ ನಡುವೆ ರಾಘವೇಂದ್ರ ರಾಜ್‌ಕುಮಾರ್ ಅವರ ಹಿರಿಯ ಮಗ ವಿನಯ್ ರಾಜ್‌ಕುಮಾರ್ ಮದುವೆಯಾಗಿದ್ದಾರಾ? ಅನ್ನೊ ಅನುಮಾನಗಳು ಹುಟ್ಟಿಕೊಂಡಿದೆ.
ಹೌದು.. ನಟಿಯೊಬ್ಬರು ಹಂಚಿಕೊಂಡ ಫೋಟೋಸ್ ಈ ರೀತಿಯ ಅನುಮಾನಕ್ಕೆ ಕಾರಣವಾಗಿದೆ. ವಿನಯ್ ರಾಜ್‌ಕುಮಾರ್ ಇತ್ತೀಚಿಗೆ ಸಿನಿಮಾ ಮಂದಿಯಿಂದ ದೊಡ್ಡ ಮಟ್ಟದಲ್ಲಿ ಮೆಚ್ಚುಗೆಗೆ ಪಾತ್ರವಾದ ಒಂದು ಸರಳ ಪ್ರೇಮಕಥೆ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದಲ್ಲಿ ನಡಿಸಿದ್ದ ನಟಿ ಸ್ವಾತಿಷ್ಟಾ ಕೃಷ್ಣನ್ ಕೆಲವು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಒಂದು ಸರಳ ಪ್ರೇಮಕಥೆ ಸಿನಿಮಾದಲ್ಲಿ ವಿನಯ್ ರಾಜ್‌ಕುಮಾರ್ ಹಾಗೂ ಸ್ವಾತಿಷ್ಟಾ ಅವರ ಮದುವೆಯ ಸಂಭ್ರಮದ ಫೋಟೋಗಳು ಅದಾಗಿದ್ದವು. ಫ್ರಮ್ ದ ಆರ್ಚೀವ್ಸ್ ಎಂದು ಅವರು ಬರೆದುಕೊಂಡು ಈ ಫೋಟೋಗಳನ್ನು ಹಂಚಿಕೊಂಡಿದ್ದರು.
ಈ ಪೋಸ್ಟ್ಗೆ ಕೆಲ ಕನ್ನಡದ ಅಭಿಮಾನಿಗಳು, ನಿಮ್ಮ ಜೋಡಿ ಚೆನ್ನಾಗಿದೆ. ಇಬ್ಬರೂ ಮದುವೆಯಾಗಿ.. ಎಂದು ಬರೆದುಕೊಂಡಿದ್ದಾರೆ. ತುಂಬಾ ಕ್ಯೂಟ್ ಆಗಿದೆ ಜೋಡಿ. ದೊಡ್ಮನೆಗೆ ತಕ್ಕ ಸೊಸೆ ನೀವು ಒಳ್ಳೆಯದಾಗಲಿ ಎಂದು ಇನ್ನೊಬ್ಬರು ಬರೆದಿದ್ದಾರೆ. ಇನ್ನೂ ಕೆಲವರು ಮೇಡಮ್ ಏನ್ ಇದು ನಿಜವಾಗ್ಲೂ ನೀವು ಮದುವೆಯಾದ್ರಾ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.
ಈ ಎಲ್ಲಾ ಪ್ರಶ್ನೆಗಳಿಗೆ ನಟಿ ಸ್ವಾತಿಷ್ಟಾ ಸ್ಪಷ್ಟನೆ ನೀಡಿದ್ದಾರೆ. ಕನ್ನಡ ಸಿನಿಮಾ ಒಂದು ಸರಳ ಪ್ರೇಮ ಕಥೆಯ ಸ್ಟಿಲ್‌ಗಳು. ಇನ್ನು ಈ ಸಿನಿಮಾದ ಹೀರೋ ಆರ್ಡಿನರಿ ವ್ಯಕ್ತಿಯಲ್ಲ. ದಿಗ್ಗಜ ನಟ ಡಾ.ರಾಜ್‌ಕುಮಾರ್ ಅವರ ಮೊಮ್ಮಗ ವಿನಯ್ ರಾಜ್‌ಕುಮಾರ್. ಬ್ರ್ಯಾಂಡ್ ಇಮೇಜ್‌ಗೆ ಎಂದೂ ಒಗ್ಗಿಕೊಳ್ಳದ ನಟ ತನ್ನ ಸಿನಿಮಾಗಳಲ್ಲಿ ಉತ್ತಮ ಸ್ಕ್ರಿಪ್ಟ್‌ಗಳನ್ನು ಮಾತ್ರವೇ ಆಯ್ಕೆ ಮಾಡಿಕೊಳ್ತಾರೆ ಎಂದು ಬರೆದಿದ್ದಾರೆ.
ಇದನ್ನೂ ಓದಿ : ಕೂಲ್ ಡ್ರಿಂಕ್ಸ್ ಕುಡಿಯೋ ಮುನ್ನ ಎಚ್ಚರ.. Spriteನಲ್ಲಿ ಪತ್ತೆಯಾಯ್ತು ಹುಳ..!