ಮೈಸೂರು : ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಹಳೆ ಮೈಸೂರು ಭಾಗದಲ್ಲಿ ಮಿಂಚಿನ ಸಂಚಾರ ನಡೆಸಿದ್ದಾರೆ. ವಿಜಯೇಂದ್ರ ನಂಜುಂಡೇಶ್ವರನಿಗೆ ತುಲಾಭಾರ ಸೇವೆ ಸಲ್ಲಿಸಿ, ತಮ್ಮ ತೂಕದಷ್ಟು ಬೆಲ್ಲ ದೇಗುಲಕ್ಕೆ ನೀಡಿ ಹರಕೆ ತೀರಿಸಿದ್ದಾರೆ.
ವಿಜಯೇಂದ್ರ ಭೇಟಿ ವೇಳೆ ನಂಜನಗೂಡು ಕಾಂಗ್ರೆಸ್ ಶಾಸಕ ದರ್ಶನ್ ಧ್ರುವನಾರಾಯಣ್ ಹಾಜರಿದ್ದರು. ಯುವ ನಾಯಕರು ಜತೆ-ಜತೆಯಾಗಿಯೇ ನಂಜುಂಡೇಶ್ವರನ ದರ್ಶನ ಪಡೆದಿದ್ದಾರೆ.
ವಿಜಯೇಂದ್ರ ಅಧ್ಯಕ್ಷರಾದ ನಂತರ ಚಾಮರಾಜನಗರಕ್ಕೆ ಪ್ರಥಮ ಭೇಟಿಯಾಗಿದೆ. ಸಂತೇಮರಳ್ಳಿ ವೃತ್ತದಲ್ಲಿ ವಿಜಯೇಂದ್ರಗೆ ಅಭಿಮಾನಿಗಳು ಕ್ರೇನ್ ಮೂಲಕ ಬೃಹತ್ ಸೇಬಿನ ಹಾರ, ಹೂವಿನ ಹಾರ ಹಾಕಿ ಅದ್ದೂರಿ ಸ್ವಾಗತ ಕೋರಿದ್ದರು. ಪ್ರಮುಖ ರಸ್ತೆಯಲ್ಲಿ ರೋಡ್ ಶೋ ನಡೆಸಿದ್ದಾರೆ. ಅಭಿಮಾನಿಗಳು ಸಂತೇಮರಳ್ಳಿ ವೃತ್ತದದಲ್ಲಿ ಹಾರ ಹಾಕಿ, ಪಟಾಕಿ ಸಿಡಿಸಿದ್ದಾರೆ.
ಚಾಮರಾಜನಗರದ ಬಿ.ಆರ್.ಅಂಬೇಡ್ಕರ್ ಭವನದಲ್ಲಿ ವಿಜಯೇಂದ್ರ ಸಭೆ ನಡೆಸಿದ್ದಾರೆ. ಮಾಜಿ ಸಚಿವ ಎನ್.ಮಹೇಶ್, ಮಾಜಿ ಶಾಸಕ ನಿರಂಜನ್ ಕುಮಾರ್ ಹಾಗೂ ಪ್ರೀತಂಗೌಡ, ಕೋಟೆ ಶಿವಣ್ಣ, ಮಾಜಿ ಶಾಸಕ ನಿರಂಜನ್ ಕುಮಾರ್ ಸಾಥ್ ನೀಡಿದ್ದಾರೆ.
ಇದನ್ನೂ ಓದಿ : ಮಾರ್ಟಿನ್ ಸಿನಿಮಾದ ಆಡಿಯೋ ರೈಟ್ಸ್ 9ಕೋಟಿಗೆ ಸೇಲ್..