ವಿಜಯಪುರ : ವಿಜಯೇಂದ್ರ ಹಾಗೂ ಡಿಸಿಎಂ ಡಿಕೆಶಿ ಇಬ್ಬರು ಭಷ್ಟ್ರರೇ, ಭ್ರಷ್ಟಾಚಾರ ಮಾಡಿದವರು ಭ್ರಷ್ಟಾಚಾರ ವಿರುದ್ಧ ಹೋರಾಟ ಮಾಡ್ತಿದ್ದಾರೆ. ಕೊರೋನಾ ಟೈಮ್ನಲ್ಲಿ ವಿಜಯೇಂದ್ರ ಮಾಡಿದ ಭಷ್ಟ್ರಾಚಾರ ಹೊರಗೆ ಬರಲಿ ಎಂದು ಮೈತ್ರಿ ಪಾದಯಾತ್ರೆ ವಿರುದ್ಧ ಶಾಸಕ ಯತ್ನಾಳ್ ಗುಡುಗಿದ್ದಾರೆ.
ಈ ಬಗ್ಗೆ ವಿಜಯಪುರದಲ್ಲಿ ಶಾಸಕ ಯತ್ನಾಳ್ ಮಾತನಾಡಿ, ಭ್ರಷ್ಟ ಕುಟುಂಬವನ್ನ ಬಿಜೆಪಿ ಅಧ್ಯಕ್ಷರನ್ನಾಗಿ ಮುಂದುವರೆಸಬೇಡಿ. ಡಿಕೆಶಿ ಹಾಗೂ ವಿಜಯೇಂದ್ರ ನಡುವೆ ಅಡ್ಜಸ್ಟಮೆಂಟ್ ಇದೆ ಅನ್ನೋದು ನಿಜ, ಡಿಕೆಶಿ ಹಾಗೂ ವಿಜಯೇಂದ್ರ ಇಬ್ಬರು ಸೇರಿ ಬ್ಯುಸಿನೆಸ್ ಮಾಡ್ತಾರೆ. ಸಿದ್ದರಾಮಯ್ಯ, ಡಿಕೆಶಿಗೆ ಧಮ್ ಇದ್ರೆ ವಿಜಯೇಂದ್ರ ಭ್ರಷ್ಟಾಚಾರ ಹೊರಗೆ ತರಲಿ, ಡಿಕೆಶಿಯನ್ನ ಅಧಿಕಾರಕ್ಕೆ ತರಲು ವಿಜಯೇಂದ್ರ ಸಿದ್ದುನ ಟಾರ್ಗೆಟ್ ಮಾಡ್ತಿರೋದು ಎಂದಿದ್ದಾರೆ.
ಬಿಜೆಪಿ ವಾಲ್ಮೀಕಿ ಹಗರಣ ಬಗ್ಗೆ ಯಾಕೆ ಮಾತನಾಡ್ತಿಲ್ಲ, ವಾಲ್ಮೀಕಿ ಹಗರಣದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಇದ್ದಾರೆ. ರಾಹುಲ್ ಗಾಂಧಿ ಡೈರೆಕ್ಷನ್ ಇದೆ, ಹೀಗಾಗಿ ವಾಲ್ಮೀಕಿ ಹಗರಣ ಮುಚ್ಚಿಡಲಾಗ್ತಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗುಡುಗಿದ್ದಾರೆ.
ಇದನ್ನೂ ಓದಿ : ಚಿತ್ರದುರ್ಗದ ಸೈಬರ್ ಕ್ರೈಂ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ – ಗಾಂಜಾ ಮಾರಾಟ ಮಾಡುತ್ತಿದ್ದ ಕಿಂಗ್ಪಿನ್ ಅರೆಸ್ಟ್..!