ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ದಿನ ಕಳೆಯುತ್ತಿದ್ದಾರೆ. ದರ್ಶನ್ ಪರಪ್ಪನ ಅಗ್ರಹಾರ ಸೇರಿ ಈಗಾಗಲೇ 50 ದಿನಗಳು ಕಳೆದಿದ್ದು, ದಿನದಿಂದ ದಿನಕ್ಕೆ ಕೇಸ್ ಟ್ವಿಸ್ಟ್ ಪಡೆಯುತ್ತಿದೆ.
ಇನ್ನು ಪತಿಯ ಬಿಡುಗಡೆಗಾಗಿ ಸಾಕಷ್ಟು ಹರಸಾಹಸ ಪಡುತ್ತಿರುವ ಪತ್ನಿ ವಿಜಯಲಕ್ಷ್ಮಿ, ಈ ನಡುವೆ ಟೆಂಪಲ್ ರನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಆಗಸ್ಟ್ 4ರಂದು ಭೀಮನ ಅಮಾವಾಸ್ಯೆ ಪ್ರಯುಕ್ತ ವಿಜಯಲಕ್ಷ್ಮಿ ಬೆಂಗಳೂರಿನಲ್ಲಿ ಇರುವ ಬನಶಂಕರಿ ದೇವಿಯ ದರ್ಶನ ಪಡೆದಿದ್ದಾರೆ.
ಸ್ನೇಹಿತರ ಜೊತೆ ದೇವಸ್ಥಾನಕ್ಕೆ ಭೇಟಿ ನೀಡಿರುವ ವಿಜಯಲಕ್ಷ್ಮಿ ದರ್ಶನ್ ಅವರ ಪೋಟೋಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಕಳೆದ ವಾರವಷ್ಟೇ ಕೊಲ್ಲೂರಿನಲ್ಲಿ ನವಚಂಡಿಕಾಯಾಗದ ಸಂಕಲ್ಪ, ಪಾರಾಯಣದಲ್ಲಿ ಭಾಗಿಯಾಗಿ ಬಳಿಕ ಕೊಲ್ಲೂರು ಮೂಕಾಂಬಿಕಾ ತಾಯಿಯ ಸನ್ನಿಧಾನದ ಯಾಗಶಾಲೆಯಲ್ಲಿ ದರ್ಶನ್ ಬಂಧಮುಕ್ತಿಗಾಗಿ ವಿಜಯಲಕ್ಷ್ಮಿ ಪ್ರಾರ್ಥನೆ, ಸಂಕಲ್ಪ ಮಾಡಿದ್ದರು. ಅದೇ ದಿನ ದಿನಕರ್ ತೂಗುದೀಪ್ ಕೂಡ ಮೈಸೂರಿನ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿದ್ದರು.
ಇದನ್ನೂ ಓದಿ : ಬೆಂಗಳೂರಲ್ಲಿ ಬೆಚ್ಚಿಬೀಳಿಸುವ ಘಟನೆ – ಮಹಿಳೆಯನ್ನು ಬಲವಂತವಾಗಿ ಹಗ್ ಮಾಡಿ ಕಿಸ್ ಕೊಟ್ಟು ಕಾಮುಕ ಎಸ್ಕೇಪ್..!