ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲುಪಾಲಾಗಿದ್ದಾರೆ. ಈ ಮಧ್ಯೆ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಹಾಗೂ ಸಹೋದರ ದಿನಕರ್ ತೂಗುದೀಪ್ ಇಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ. ಇದೀಗ ದರ್ಶನ್ ಪತ್ನಿ ಭೇಟಿಯಾದ ನಂತರ ಡಿಸಿಎಂ ಡಿಕೆಶಿ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ದರ್ಶನ್ ಪತ್ನಿ ಭೇಟಿಯಾದ ನಂತರ ಬೆಂಗಳೂರಿನಲ್ಲಿ ಮಾತನಾಡಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, ದರ್ಶನ್ ಕೇಸ್ ಬಗ್ಗೆ ನನ್ನ ಜೊತೆ ಏನೂ ಮಾತನಾಡಿಲ್ಲ. ಆ ಬಗ್ಗೆ ಮಾತ್ನಾಡೋ ಸ್ಥಿತಿ ಈಗ ಇಲ್ಲ ಎಂದಿದ್ದಾರೆ.
ದರ್ಶನ್ ನ್ಯಾಯಾಂಗ ಬಂಧನದಲ್ಲಿದ್ದಾರೆ. ಕೋರ್ಟ್ನಲ್ಲಿ ವಿಚಾರಣೆಗಳೂ ನಡೆಯುತ್ತಿದೆ. ಕಾನೂನು ಚೌಕಟ್ಟಿನಲ್ಲಿ ಏನು ಆಗ್ಬೇಕೋ ಅದು ಆಗ್ತಾ ಇದೆ. ಪೊಲೀಸರ ಯಾವುದೇ ತನಿಖೆಯಲ್ಲಿ ನಾವು ಮಧ್ಯಪ್ರದೇಶ ಮಾಡಲ್ಲ ಎಂದು ತಿಳಿಸಿದ್ದಾರೆ.
ಇನ್ನು ದರ್ಶನ್ ಪತ್ನಿ ವಿಜಯಲಕ್ಷ್ಮಿ ತನ್ನ ಮಗನ ಸ್ಕೂಲ್ ವಿಚಾರಕ್ಕೆ ಮನವಿ ಮಾಡಿದ್ರು. ಮಗನನ್ನು ನನ್ನ ಸ್ಕೂಲ್ನಲ್ಲಿ ಸೇರಿಸೋಕೆ ಬಯಸಿದ್ದರು. ಆದರೆ ಪ್ರಾಂಶುಪಾಲರು ಒಪ್ಪಿಲ್ಲ ಅಂತಾ ನನ್ನ ಬಳಿ ಬಂದಿದ್ದರು. ಬಳಿಕ ಪೋನ್ನಲ್ಲೇ ಪ್ರಿನ್ಸಿಪಾಲ್ ಜೊತೆ ಮಾತ್ನಾಡಿಸಿದ್ದೇನೆ ಎಂದು ಬೆಂಗಳೂರಿನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ : ಚಿತ್ರದುರ್ಗ ಜಿಲ್ಲಾ ಸರ್ಕಾರಿ ಆಸ್ಪತ್ರೆ ವೈದ್ಯನ ಲಂಚಾವತಾರ - ವಿಡಿಯೋ ವೈರಲ್..!