ಉಡುಪಿ : ಪರೀಕ್ಷೆ ಭಯದಿಂದ ವಿದ್ಯಾರ್ಥಿಯೊರ್ವ ಕಾಲೇಜಿನ 6ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆ ಕೆಲವು ದಿನಗಳ ಹಿಂದೆ ಮಣಿಪಾಲದಲ್ಲಿ ನಡೆದಿತ್ತು. ಈ ಪ್ರಕರಣ ಸಂಬಂಧಿಸಿದಂತೆ ಕಟ್ಟಡದಿಂದ ಜಿಗಿಯುವ ವಿಡಿಯೋ ಇದೀಗ ವೈರಲ್ ಆಗಿದೆ.
ಮಣಿಪಾಲದ ವಿವಿಯ ಅಲೈಡ್ ಹೆಲ್ತ್ ವಿಭಾಗದ ದ್ವಿತೀಯ ಬಿಎಸ್ಸಿ ವಿದ್ಯಾರ್ಥಿ ಬಿಹಾರ ಮೂಲದ ಸತ್ಯಂ ಕಳೆದ ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದನು. ಪರೀಕ್ಷೆ ಭಯದಿಂದ ಆತ್ಮಹತ್ಯೆ ಎನ್ನುವ ಅನುಮಾನ ವ್ಯಕ್ತವಾಗಿತ್ತು.
ಮೊಬೈಲ್ನಲ್ಲಿ ಸೆರೆಯಾದ ದೃಶ್ಯದಂತೆ ಸತ್ಯಂ ಕಟ್ಟಡದಿಂದ ಇತರೆ ವಿದ್ಯಾರ್ಥಿಗಳು ನೋಡ ನೋಡುತ್ತಲೇ ಜಿಗಿದಿದ್ದಾನೆ. ಮಣಿಪಾಲ ವಿಶ್ವವಿದ್ಯಾಲಯದ 6ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ವಿಮಾನ ಅಪಘಾತದಿಂದ ಕೂದಲೆಳೆ ಅಂತರದಲ್ಲಿ ಮಾರ್ಟಿನ್ ಚಿತ್ರತಂಡ ಪಾರು..!
Post Views: 783